Document

ರಾಜ್ಯಾದ್ಯಂತ ಕೂಸಿನ ಮನೆ ಉದ್ಘಾಟನೆ: ಕಾರ್ಮಿಕರ ಮಕ್ಕಳಿಗೆ ದಾರಿದೀಪ.

Janataa24 NEWS DESK

IMG 20240104 WA0005



ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ನಲ್ಲಿರುವ ಸರ್ಕಾರಿ ಶಾಲೆಯ ಆವರಣದ ನೂತನ ಕೂಸಿನ ಮನೆಯ ಉದ್ಘಾಟನೆಯನ್ನು,

ಗ್ರಾಮ ಪಂಚಾಯಿತಿ ಅಧ್ಯಕ್ಷ ಇಂದಿರಾ ಕೃಷ್ಣ ಸ್ವಾಮಿ, ಉಪಾಧ್ಯಕ್ಷರಾದ ಮಂಜುನಾಥ್ ಅವರು ಟೇಪ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.

image editor output image 12625640 1704346845601


ಈ ಕೂಸಿನ ಮನೆ ಯೋಜನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಯೋಜನೆಯಡಿ ಕೂಸಿನ ಮನೆ ನಡೆಯುತ್ತಿದ್ದು, ಇದು ನರೇಗಾ ಕೂಲಿ ಕಾರ್ಮಿಕರ ಮಕ್ಕಳು ಮಾತ್ರವಲ್ಲದೆ ಎಲ್ಲರೂ ಮಕ್ಕಳನ್ನು ಸಂತೈಸುವ ಹಾಗೂ ಪುಟ್ಟ ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಲಿದೆ.

IMG 20240104 WA0007



ಒಟ್ಟಾರೆ ಈ ಕೂಸಿನ ಮನೆಗೆ ಹೆಚ್ಚು ಹೆಚ್ಚು ಮಕ್ಕಳನ್ನು ಕರೆತಂದು ಪೋಷಿಸುವ ಕೆಲಸವನ್ನು ಹಾರೈಕೆದಾರರು ಮತ್ತು ಪಾಲಕರ ಪಾತ್ರವು ದೊಡ್ಡದಿರುತ್ತದೆ. ಈಗಾಗಲೇ ಇವರ ಹಾರೈಕೆಗಾಗಿ ಏಳು ದಿನಗಳ ನಿರಂತರ ತರಬೇತಿಯನ್ನು ನೀಡಿ ಆರೈಕೆದಾರರನ್ನು ಆಯ್ಕೆ ಮಾಡಲಾಗಿದ್ದು ಅವರೆಲ್ಲರೂ ಈ ಕೂಸಿನ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

IMG 20240104 WA0008



ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಬಾಬು, ಯಾದವ ಮುಖಂಡರಾದ ಕೃಷ್ಣಸ್ವಾಮಿ,ಸದಸ್ಯರಾದ ಮಹಾಲಿಂಗಯ್ಯ, ನೂರಾಯಿಶ್, ಮಹೇಶ್, ಗೋವಿಂದಯ್ಯ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ, ಅಂಗನವಾಡಿ ಶಿಕ್ಷಕಿಯರು ,ಜೊತೆಗೆ ಕೂಸಿನ ಮನೆಗೆ ಆಯ್ಕೆಯಾಗಿರುವ ಹಾರೈಕೆದಾರರಾದ ಯಶೋಧ ಇನ್ನು ಕೆಲ ಆರೈಕೆದಾರರು ಉಪಸ್ಥಿತರಿದ್ದರು.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *