Janataa24 NEWS DESK
HDK: If the document with me is released, 5-6 ministers will have to resign.

ಬೆಂಗಳೂರು: ಆಡಳಿತ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂಬಂತೆ ಮೂಡ ಕೇಸ್ ಹೊತ್ತಿ ಉರಿಯುತ್ತಿರುವಾಗಲೇ ಮತ್ತೊಂದು ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ.
ನನ್ನ ಬಳಿ ಇರುವ ದಾಖಲೆ ಹೊರ ಬಿಟ್ಟರೆ 5-6 ಮಂದಿ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಹೊಸ ಬಾಂಬ್ ಅನ್ನು ಸಿಡಿಸಿದ ಹೆಚ್. ಡಿ.ಕುಮಾರಸ್ವಾಮಿ(HD Kumaraswamy).
ದೇವೇಗೌಡರ (HD Devegowda) ಕಣ್ಣಲ್ಲಿ ನೀರು ಹಾಕಿಸಿದವರು ನಾಶ ಆಗ್ತಾರೆ. ಎಲ್ಲರೂ ನಾಶ ಆಗುತ್ತಾರೆ. ಈಗ ಅದೇ ಆಗುತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಕುಮಾರಸ್ವಾಮಿ ಶಾಪ ಹಾಕಿದ್ದಾರೆ.
ನನ್ನನ್ನು ಜೈಲಿಗೆ ಕಳುಹಿಸಲು ಸರ್ಕಾರ ಹುನ್ನಾರ ನಡೆಸಿದೆ. 12 ವರ್ಷದ ಹಳೆಯ ಕೇಸಲ್ಲಿ ಜೈಲಲ್ಲಿ ಕಳುಹಿಸೋಕೆ ಸಾಧ್ಯವಿಲ್ಲ. ರಾಜೀನಾಮೆ ನೀಡುವ ಸ್ಥಿತಿ ಬಂದರೆ ನಾನೇ ಕೊಡುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್(ADGP Chandrashekar) ವಿರುದ್ಧ ಆರೋಪ ಮಾಡಿದ ಹೆಚ್‌ಡಿಕೆ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ಅವರ ವಿರುದ್ಧ ತನಿಖೆ ಮಾಡಬೇಕು ಎಂದು ಸವಾಲು ಹಾಕಿದ ಅವರು ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/mandyas-husband-jumped-into-the-lake-and-los,