Document

Gubbi: ನಕಾಶೆ ರಸ್ತೆಯನ್ನು ಬಿಡಿಸಿಕೊಡಲು ತಹಶೀಲ್ದಾರ್ ವಿಫಲ: ವಕೀಲ ನವೀನ್ ನೇರ ಆರೋಪ.

Janataa24 NEWS DESK 

 

Gubbi: ನಕಾಶೆ ರಸ್ತೆಯನ್ನು ಬಿಡಿಸಿಕೊಡಲು ತಹಶೀಲ್ದಾರ್ ವಿಫಲ: ವಕೀಲ ನವೀನ್ ನೇರ ಆರೋಪ.

Gubbi
ಗುಬ್ಬಿ:  ನನ್ನ ಜಮೀನಿಗೆ ಹಾಗೂ ಮನೆಗೆ ಹೋಗಲು ದುರುದ್ದೇಶದಿಂದ ರಸ್ತೆ ತಡೆದು ತೊಂದರೆ ನೀಡುತ್ತಿದ್ದು, ನಕಾಶೆಯಲ್ಲಿರುವ ರಸ್ತೆ ಬಿಡಿಸಿಕೊಡಲು ತಹಶೀಲ್ದಾರ್ ಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿ ಕೇಳಿದಾಗ ತಾಲ್ಲೂಕು ಆಡಳಿತ ವಿಳಂಬ ಅನುಸರಿಸುತ್ತಿದ್ದು ಸಿನಿಯಾರಿಟಿ ಕಾರಣ ನೀಡಿ ನನ್ನ ತೋಟಕ್ಕೆ ಹಾಗೂ ಮನೆಗೆ ನಕಾಶೆ ರಸ್ತೆ ಇದ್ದು ಇರುವರಸ್ತೆ ಬಿಡಿಸಿಕೊಡಲು ಸ್ಥಳಕ್ಕೆ ಬಾರದೆ ನನ್ನ ರಸ್ತೆಗೆ ತೊಂದರೆ ನೀಡುತ್ತಿರುವವರ ಪರವಾಗಿ ನಿಂತಿದ್ದಾರೆ ಎಂದು ವಕೀಲ ಎಚ್.ಜಿ.ನವೀನ್ ಕುಮಾರ್ ನೇರ ಆರೋಪ ಮಾಡಿದರು.

 

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 88/2, 105/2, 41/2 ರ ಜಮೀನು ಖರೀದಿ ಮಾಡಿದ ನನಗೆ ಸುಖಾಸುಮ್ಮನೆ ಕೆಲ ಪ್ರಭಾವಿಗಳು ತಮಗೆ ಸಿಗದ ಈ ಜಮೀನು ಬೆಂಗಳೂರಿನಿಂದ ಖರೀದಿ ಮಾಡಿದ್ದಾರೆ ಎಂದು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 

ನಕಾಶೆಯಲ್ಲಿ ಸರ್ವೇ ನಂಬರ್ 47/2 ರಲ್ಲಿ ಇರುವ ನನ್ನ ಮನೆಗೆ ರಸ್ತೆ ಓಡಾಡಲು ಅಡ್ಡಿಪಡಿಸಿದ್ದಾರೆ. ನಕಾಶೆಯಲ್ಲಿ ಇರುವ ರಸ್ತೆಯನ್ನು ಹಳ್ಳ ತೆಗೆದು ಮುಚ್ಚಿದ್ದಾರೆ. ಮತ್ತೊಂದು ರಸ್ತೆ ನರೇಗಾ ಯೋಜನೆಯಲ್ಲಿ ನಿರ್ಮಿಸಿದ್ದರೂ ಅದನ್ನು ಮಣ್ಣು ಜಲ್ಲಿ ಸುರಿದು ಅಡ್ಡಿಪಡಿಸಿದ್ದಾರೆ. ಎರಡು ಬಾರಿ ಅರ್ಜಿ ನೀಡಿದರೂ ತಹಶೀಲ್ದಾರ್ ಗಣನೆಗೆ ತೆಗೆದುಕೊಂಡಿಲ್ಲ. ಸಿನಿಯಾರ್ಟಿ ಪ್ರಕಾರ ಒಂದು ಅಥವಾ ಎರಡು ತಿಂಗಳು ಕಳೆದರೂ ನನ್ನ ಮನೆಗೆ ರಸ್ತೆ ಇಲ್ಲವಾಗುತ್ತದೆ. ಊರಿನಲ್ಲಿ ಸಂಘರ್ಷ ಬೆಳೆಯದಂತೆ ತಾಲ್ಲೂಕು ಆಡಳಿತ ಮಾಡಬೇಕಾದ ಕೆಲಸ ಮಾಡದೆ ಪ್ರಭಾವಿಗಳ ಪರ ವಹಿಸಿ ನಮ್ಮ ಅರ್ಜಿ ನಿರ್ಲಕ್ಷ್ಯ ತೋರುತ್ತಾ ಹೀಗೆ ಮುಂದುವರೆದಲ್ಲಿ ತಾಲ್ಲೂಕು ಕಚೇರಿ ಮುಂದೆ ನಾನು ನನ್ನ ಬಾಣಂತಿ ಪತ್ನಿ, ಸಣ್ಣ ಮಗುವಿನ ಜೊತೆ ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *