Document

Gubbi: ಪ. ಪಂ ಅಧ್ಯಕ್ಷರಾಗಿ ಆಯಿಷಾ ತಾಸಿನ್ ಉಪಾಧ್ಯಕ್ಷರಾಗಿ ಶ್ವೇತ ಅವಿರೊದ ಆಯ್ಕೆ.

Janataa24 NEWS DESK 

 

Gubbi: ಪ. ಪಂ ಅಧ್ಯಕ್ಷರಾಗಿ ಆಯಿಷಾ ತಾಸಿನ್ ಉಪಾಧ್ಯಕ್ಷರಾಗಿ ಶ್ವೇತ ಅವಿರೊದ ಆಯ್ಕೆ.
Gubbi: ಪ. ಪಂ ಅಧ್ಯಕ್ಷರಾಗಿ ಆಯಿಷಾ ತಾಸಿನ್ ಉಪಾಧ್ಯಕ್ಷರಾಗಿ ಶ್ವೇತ ಅವಿರೊದ ಆಯ್ಕೆ.

 

ಗುಬ್ಬಿ : ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಯಿಷ ತಾಸಿನ್ ಅಧ್ಯಕ್ಷರಾಗಿ ಶ್ವೇತಾ ಜಗದೀಶ್ ಅವಿರೋಧವಾಗಿ ಆಯ್ಕೆಯಾದರು.

 

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಚುನಾವಣಾ ಪತ್ರಿಕೆಯನ್ನು ತಹಶಿಲ್ದಾರ್ ಆರತಿ ಬಿ ನಡೆಸಿಕೊಟ್ಟರು.

 

ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಮಂಗಳಮ್ಮ ರಾಜಣ್ಣ ಹಾಗೂ ಎಸ್ಸಿ ಮೀಸಲು ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ಶಿವಪ್ಪ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಪಟ್ಟಣದ 7ನೇ ವಾರ್ಡ್ ಸದಸ್ಯ ಆಯಿಷಾ ತಾಸಿನ್ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. 18ನೇ ವಾರ್ಡ್ ಸದಸ್ಯ ಶ್ವೇತ ಜಗದೀಶ್ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಅವಿರೋಧಆಯ್ಕೆ ಎಂದು ತಹಶೀಲ್ದರ್ ಆರತಿ ಬಿ, ಅವರು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.

 

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ

ಸ್ಥಳೀಯ ಪಟ್ಟಣ ಪಂಚಾಯತಿ ಅಧಿಕಾರದ ಕೊನೆಯ ಅವಧಿಯಲ್ಲಿ ಅವಕಾಶ ವಂಚಿತರಿಗೆ ಮಾನ್ಯತೆ ನೀಡಿ ಅಧಿಕಾರ ಹಂಚಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪದ ರಸ್ತೆ ನಿರ್ಮಾಣ ಮುಗಿದ ಹಿನ್ನೆಲೆ ಪಟ್ಟಣದ ಹಾದು ಹೋಗುವ ಡಾಂಬರು ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು.

ಪಟ್ಟಣದ ಬಹುತೇಕ ಶೇಕಡ 95 ರಷ್ಟು ಅಭಿವೃದ್ಧಿ ಕೆಲಸ ನಡೆದಿದೆ ಉಳಿದ ಕೆಲಸವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

 

ನೂತನ ಪ ಪಂ ಅಧ್ಯಕ್ಷೆ ಆಯಿಷಾ ತಾಸಿನ್ ಮಾತನಾಡಿ ಅಭಿವೃದ್ಧಿ ಕೆಲಸಗಳನ್ನು ಶಾಸಕರ ಮಾರ್ಗದರ್ಶನದಲ್ಲಿ ನಡೆಸುತ್ತೇವೆ ಈ ಜೊತೆಗೆ ಪಟ್ಟಣದಲ್ಲಿ ಸ್ವಚ್ಛತೆ ಕುಡಿಯುವ ನೀರು ಪೂರೈಕೆ ಮಾಡಲು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

ನೂತನ ಉಪಾಧ್ಯಕ್ಷೆ ಶ್ವೇತಾ ಜಗದೀಶ್ ಮಾತನಾಡಿ ಶಾಸಕರ ಸಲಹೆಯಂತೆ ಸರ್ವ ಸದಸ್ಯರ ಸಹಕಾರದೊಂದಿಗೆ ಉಳಿದ ಅಲ್ಪ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

 

 

ಈ ಸಂದರ್ಭದಲ್ಲಿ ಪ,ಪಂ ಸದಸ್ಯರಾದ ಮೊಹಮ್ಮದ್ ಸಾಧಿಕ್, ರೇಣುಕಾ ಸ್ವಾಮಿ, ಮೋಹನ್ ಕುಮಾರ್, ಅಣ್ಣಪ್ಪ ಸ್ವಾಮಿ, ಶಿವಕುಮಾರ್, ಶಶಿಕುಮಾರ್, ಮಂಗಳಮ್ಮ, ಮಮತಾ ಸೇರಿದಂತೆ ಇತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *