Document

Gubbi: ಜಾತಿಗಣತಿಯಲ್ಲಿ ಮೂಲ ಜಾತಿಯನ್ನು ನಮೂದಿಸಿ.

Janataa24 NEWS DESK 

 

Gubbi: ಜಾತಿಗಣತಿಯಲ್ಲಿ ಮೂಲ ಜಾತಿಯನ್ನು ನಮೂದಿಸಿ.

Gubbi: ಜಾತಿಗಣತಿಯಲ್ಲಿ ಮೂಲ ಜಾತಿಯನ್ನು ನಮೂದಿಸಿ.

ಗುಬ್ಬಿ: ಒಳ ಮೀಸಲಾತಿ ವರ್ಗಿಕರಣಕ್ಕೆ ಮೇ ಮೊದಲ ವಾರದಲ್ಲಿ ಜಾತಿಗಣತಿ ಆರಂಭವಾಗಲಿದ್ದು ಪರಿಶಿಷ್ಟ ಜಾತಿಯ ಉಪಜಾತಿಗಳು ಜಾತಿಗಣತಿಗೆ ಜಾತಿಗಣತಿಯಲ್ಲಿ ತಮ್ಮ ಮೂಲ ಜಾತಿಯನ್ನು ನಮೂದಿಸುವ ಮೂಲಕ ಜಾತಿಯನ್ನು ಖಾತ್ರಿ ಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ರಾಜ್ಯ ಸಮಿತಿಯ ಸದಸ್ಯ ಕುಂದೂರು ತಿಮ್ಮಯ್ಯ ತಿಳಿಸಿದರು.

 

ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

ಜಾತಿ ಗಣತಿಗೆ ದತ್ತಾಂಶದ ಸಂಗ್ರಹಕ್ಕಾಗಿ ಗಣಿತಿದರಾರು ನಿಮ್ಮ ಮನೆಯ ಬಾಗಿಲಿಗೆ ಬಂದಾಗ ತಮ್ಮ ಜಾತಿಯನ್ನು ನೋಂದಾಯಿಸುವ ಸಂದರ್ಭದಲ್ಲಿಎ ಕೆ, ಎ ಡಿ ಎಂದು ನಮೋದಿಸದೆ ಮಾದಿಗರಾಗಿದ್ದಲ್ಲಿ ಮಾದಿಗ ಎಂದು ಹೊಲಯರಾಗಿದ್ದಲ್ಲಿ ಹೊಲಯ ಎಂದು ಕೊರಚ,ಭೋವಿ,ಲಂಬಾಣಿ,ಅಲೆಮಾರಿ, ಜಾತಿಗಳು ತಮ್ಮ ಮೂಲ ಜಾತಿಯನ್ನು ನಮೂದಿಸಬೇಕು ಇದರಿಂದಾಗಿ ಒಳ ಮೀಸಲಾತಿ ಜಾರಿಗೆ ನಿಖರವಾದ ದತ್ತಾಂಶಗಳು ದೊರೆಯುತ್ತದೆ ಎಂದು ತಿಳಿಸಿದರು.

 

ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಏಪ್ರಿಲ್ 26ರಿಂದ ತಾಲೂಕಿನ ಅತ್ಯಂತ ಮನೆ ಮನೆಗೆ ಹೋಗಿ ಜಾತಿಗಣತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದು ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿಗಳನ್ನು ನಮೂದಿಸಬೇಕು ನಗರ ಪ್ರದೇಶದಲ್ಲಿ ವಾಸಿಸುವ ಗ್ರಾಮೀಣ ಭಾಗದ ಜನರು ತಮ್ಮ ಜಾತಿಯನ್ನು ಮುಚ್ಚಿಡದೆ ತಮ್ಮ ಗ್ರಾಮಗಳಿಗೆ ತೆರಳಿ ಅಥವಾ ಆನ್ಲೈನ್ ಮೂಲಕ ಜಾತಿಯನ್ನು ನಮೂದಿಸಬೇಕು ಭವಿಷ್ಯದ ಪೀಳಿಗೆ ತಲೆಮಾರುಗಳಿಗೆ ಅನುಕೂಲ ಮಾಡಿಕೊಡಬೇಕು ಇದರಿಂದ ಶೈಕ್ಷಣಿಕವಾಗಿ, ಉದ್ಯೋಗಕ್ಕಗಿ,ರಾಜಕೀಯವಾಗಿ,ಆರ್ಥಿಕವಾಗಿ, ಅನುಕೂಲ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಕುಂದೂರು ಮುರಳಿ, ಸಂಘಟನಾ ಸಂಚಾಲಕ ನರಸೀಯಪ್ಪ, ಚೇತನ ಅತ್ತಿಕಟ್ಟೆ, ಹೊಸಕೆರೆ ನರಸಿಂಮೂರ್ತಿ, ದೊಡ್ಡಮ್ಮ, ಶಿವಮ್ಮ, ಬಸವರಾಜು, ಪದಾಧಿಕಾರಿಗಳು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *