Document

FoodSafety: ಮಿನರಲ್ ವಾಟರ್ ಬಾಟಲ್‌ಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆ.! ಕುಡಿಯುವ ನೀರು ವಿಷವಾಯ್ತಾ?

Janataa24 NEWS DESK

FoodSafety: ಮಿನರಲ್ ವಾಟರ್ ಬಾಟಲ್‌ಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆ.! ಕುಡಿಯುವ ನೀರು ವಿಷವಾಯ್ತಾ?
FoodSafety: ಮಿನರಲ್ ವಾಟರ್ ಬಾಟಲ್‌ಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆ

ಬೆಂಗಳೂರು: ಎಲ್ಲಾ ಜೀವಿಗಳಿಗೂ ನೀರು (Water) ಅತ್ಯಗತ್ಯ. ಪ್ರಮುಖ ದೈಹಿಕ ಪ್ರಕ್ರಿಯೆಗಳನ್ನು ಬೆಂಬಲಿಸುವುದರ ಜೊತೆಗೆ, ನೀರು ಉತ್ಪಾದಿಸಲು ಸಾಧ್ಯವಾಗದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕುಡಿಯುವ ನೀರು ವಿಷವಾಗುತ್ತಿದೆಯೇ ಅನ್ನೋ ಆತಂಕ ಜನರನ್ನು ಆವರಿಸಿದೆ.

ಹೌದು. ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ಮಿನರಲ್ ವಾಟರ್‌ ಬಾಟಲ್‌ಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ (Food Safety Department) ವರದಿಯಿಂದ ತಿಳಿದುಬಂದಿದೆ.

ಇತ್ತೀಚೆಗೆ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಸುಮಾರು 160 ಮಿನರಲ್‌ ವಾಟರ್‌ ಬಾಟಲ್‌ಗಳನ್ನ (Mineral Water Bottle) ಸ್ಯಾಂಪಲ್‌ ಟೆಸ್ಟ್‌ಗೆ ಕಳುಹಿಸಿತ್ತು. ಈ ಪೈಕಿ ಈಗಾಗಲೇ 100ಕ್ಕೂ ಹೆಚ್ಚು ಬಾಟಲ್‌ಗಳ ವರದಿ ಕೈಸೇರಿದೆ. ಇಲಾಖೆ ಕಳುಹಿಸಿದ್ದ ಮಾದರಿಗಳಲ್ಲಿ 50% ನೀರು ಅನ್‌ಸೇಫ್‌ ಆಗಿದೆ. ಲೋಕಲ್ ಮಿನರಲ್ ವಾಟರ್ ಅನ್ ಸೇಫ್ ಅಂತ ರಿಪೋರ್ಟ್‌ ಬಂದಿರುವುದಾಗಿ ತಿಳಿದುಬಂದಿದೆ.

ಮಿನರಲ್ ವಾಟರ್ ಬಾಟಲ್ ವರದಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ತುಂಬಾ ಸಮಯದಿಂದ ನೀರು ಶೇಖರಣೆ ಮಾಡುವುದರಿಂದ ಪಾಚಿ ಅಂಶಗಳು ಕಂಡುಬಂದಿವೆ. ಅಲ್ಲದೇ ಕೆಲ ಕಂಪನಿಗಳು ಕಲುಷಿತ ನೀರು, ಬೋರ್ವೆಲ್ ನೀರನ್ನು ಬಾಟಲ್ ಮೂಲಕ ಮಾರಾಟ ಮಾಡುತ್ತಿದ್ದದ್ದು ಕಂಡುಬಂದಿದೆ. ನೀರನ್ನು ಶುದ್ದೀಕರಿಸದೇ ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದ ಕಾರಣ ಹಾನಿಕಾರಕ ಅಂಶ ಪತ್ತೆಯಾಗಿರುವುದು ಕಂಡುಬಂದಿದೆ. ಇಂತಹ ಕಲುಷಿತ ನೀರು ಕುಡಿಯೋದ್ರಿಂದ ವಾಂತಿ, ಭೇದಿ, ಜ್ವರ, ಸುಸ್ತು ಕಾಣಿಸಿಕೊಳ್ಳುತ್ತೆ, ಅದ್ರಲ್ಲೂ ಮಕ್ಕಳಿಗೆ ಬೇಗನೇ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಹಾರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *