Janataa24 NEWS DESK
ExpressLinkCanal: ಸೆಕ್ಷನ್ 144ಗೂ ಹೆದರಲಿಲ್ಲ, ಪೊಲೀಸರಿಗೂ ಬಗ್ಗಲಿಲ್ಲ. ರೈತರ ಪ್ರತಿಭಟನೆ ಯಶಸ್ವಿ.

ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಕರೆ ಕೊಟ್ಟಿದ್ದ ರೈತರ ಹೋರಾಟ ಕೊನೆಗೂ ಯಶಸ್ವಿಯಾಯಿತು.
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ನಡೆಯುವ ತಾಲ್ಲೂಕಿನ ಸುಂಕಪುರ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಇದನ್ನು ಲೆಕ್ಕಿಸದ ಸಹಸ್ರಾರು ರೈತರು ಜಿಲ್ಲೆಯ ನಾನಾ ಮೂಲಗಳಿಂದ ಆಗಮಿಸಿದ್ದ ರೈತರು ನಿಟ್ಟೂರಿನಲ್ಲಿ ಬೃಹತ್ ಸಭೆ ಸೇರಿ ಪ್ರತಿಭಟನೆ ನಡೆಸಿದರು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಪೊಲೀಸರು ಪ್ರತಿಭಟನೆಕಾರರನ್ನು ಬಂದಿಸಲು ಯತ್ನಿಸಿದರು. ಆದರೆ ಬಂದಿಸಲು ವಿಫಲವಾದರು.
ರೈತರು ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ಟೈರ್ ಗಳನ್ನು ಸುಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಠಾಧೀಶರು, ರೈತ ಮುಖಂಡರು, ರಾಜಕೀಯ ಮುಖಂಡರು ಸಹಸ್ರಾರು ರೈತರೊಂದಿಗೆ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರೊಂದಿಗೆ ಮಾತಿನ ಚಕಮುಕಿ ನಡೆಯಿತು. ರೈತರು ಉಪ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜ್ಯ ಸರ್ಕಾರಕ್ಕೆ ಇಡೀ ಶಾಪ ಹಾಕಿ ರೊಚ್ಚಿಗೆದ್ದ ರೈತರು ಬೃಹತ್ ಪೈಪುಗಳನ್ನು ಕೆನಾಲ್ಗೆ ನೂಕುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
https://youtu.be/ioBwxkXfLqo?si=i1AACfgQuqhFUQV0
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.