JANATAA24 NEWS DESK
CBI: ಸಿಬಿಐ ದಾಳಿಯಿಂದ ಕರ್ನಾಟಕದಲ್ಲಿ ಜಪ್ತಿಯಾದ ಹಣವೆಷ್ಟು ಗೊತ್ತಾ?
ಬೆಂಗಳೂರು: ದೇಶದಾದ್ಯಂತ ಅ.4 ರಂದು ಅಂತಾರಾಷ್ಟ್ರೀಯ ಸೈಬರ್ ಗ್ಯಾಂಗ್ಗಳಿಗೆ ಸಂಬಂಧಿಸಿ ಸಿಬಿಐ ದಾಳಿ ಮಾಡಿತ್ತು. ಸಿಬಿಐ ಎಂಟು ರಾಜ್ಯಗಳಲ್ಲಿ 115 ಕಡೆ ದಾಳಿ ಮಾಡಿ ಹಲವು ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿತ್ತು. ಆಪರೇಷನ್ ಚಕ್ರ ಹೆಸರಿನಲ್ಲಿ ನಡೆದ ದಾಳಿಯಲ್ಲಿ ಹಲವು ಕಡೆಗಳಲ್ಲಿ ನಗದು ಮೊತ್ತವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಸೈಬರ್ ಗ್ಯಾಂಗ್ಗಳಿಗೆ ಸಂಬಂಧಿಸಿ ಸಿಬಿಐ ಕರ್ನಾಟಕದ 12 ಕಡೆ ದಾಳಿ ಮಾಡಿದೆ. ಸಿಬಿಐ, ಇಂಟರ್ಪೋಲ್, ಎಫ್ಬಿಐ ಕೆನಡಾ ಪೊಲೀಸ್ ಹಾಗೂ ಆಸ್ಟ್ರೇಲಿಯಾ ಸಹಯೋಗದಲ್ಲಿ ದಾಳಿ ನಡೆದಿದೆ. ಈ ವೇಳೆ ರಾಜ್ಯದಲ್ಲಿ 1.8 ಕೋಟಿ ರೂ. ಹಾಗೂ 1.5 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.
ಸಿಬಿಐ ದಾಳಿ ವೇಳೆ ರಾಜ್ಯದಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಬ್ಯಾಂಕ್ಗಳಲ್ಲಿ 1.89 ಕೋಟಿ ರೂ. ಇರುವುದು ಪತ್ತೆಯಾಗಿದೆ. ಸದ್ಯ ಸಿಬಿಐ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.