Document

Accident: ಕೊರಟಗೆರೆ ಬೈಪಾಸ್ ನಲ್ಲಿ ಬೈಕ್ ಅಪಘಾತ— ಓರ್ವ ಸಾವು.

Janataa24 NEWS DESK 

Bike accident at Koratagere Bypass: One dead.

Accident, bike,

ಕೊರಟಗೆರೆ: ಶನಿವಾರ ಸಂಜೆ ಕೊರಟಗೆರೆಯಲ್ಲಿ ಭರ್ಜರಿ ಮಳೆಯಾಗಿದ್ದು, ಮಳೆಯಲ್ಲಿ ಬೈಕ್(Bike) ಚಲಾಯಿಸುತ್ತಿದ್ದ ಚಾಮರಾಜ ಎಂಬ ಯುವಕ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ತುಮಕೂರಿನ ಕಡೆಯಿಂದ ಬೈಕ್ ಚಲಾಯಿಸುತ್ತಾ ಬಂದು ಏಕಾಏಕಿ ಗುದ್ದಿದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

 

ಓರ್ವ ಕೂಲಿ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಮತ್ತೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ.

 

ಸಾವಿಗೀಡಾದ ಬೈಕ್ ಸವಾರ ಚಾಮರಾಜ(23) ರಾಗಿ ನಿಂಗನಹಳ್ಳಿ, ಮಡಕಸಿರಾ ತಾಲೂಕು, ಆಂಧ್ರ ಪ್ರದೇಶ ಮೂಲದವರೆಂದು ತಿಳಿದುಬಂದಿರುತ್ತದೆ.

ಸ್ಥಳಕ್ಕೆ ಆಗಮಿಸಿದ ಕೊರಟಗೆರೆ ಪೊಲೀಸ್ ಠಾಣೆಯ ಮಂಜುನಾಥ್ ಪಿ (PSI) ಮಂಜುನಾಥ್ ಪಿ (ASI) ಮತ್ತು ಸಿಬ್ಬಂದಿಗಳು, ಸ್ಥಳ ಪರಿಶೀಲನೆ ನಡೆಸಿ ಪ್ರಕರಣವನ್ನು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿರುತ್ತಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/turuvekere-jds-leader-turuvekere-challenged-the-gubb

 

https://youtu.be/69uDD0D8dkQ?si=KJ0CIS2c8GxBTR_x

Document

Leave a Reply

Your email address will not be published. Required fields are marked *