Janataa24 NEWS DESK

ಗುಬ್ಬಿ: ತಾಲೂಕಿನ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಂಡನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಂಡನಹಳ್ಳಿ ಗ್ರಾಮದ ರಾಜೇಶ್ ಎಂಬ ವ್ಯಕ್ತಿಯು ಸವರ್ಣಿಯರ ಮೇಲೆ ಸುಳ್ಳು ಅಟ್ರಾಸಿಟಿ, ಜಾತಿನಿಂದನೆ, ಬೆದರಿಕೆ ಯನ್ನು ಚೇಳೂರು ಪೋಲಿಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡುತ್ತಿದ್ದಾನೆ ಎಂದು ತಾಲೂಕಿನ ದಲಿತ ಸಂಘಟನೆ ಮುಖಂಡರು ಯಾವುದೇ ಪ್ರಕರಣಗಳು ನಡೆಯದಿದ್ದರೂ ಸಹ ಹಣ ಆಮಿಷಕ್ಕೆ ಒಳಗಾಗಿ ದಲಿತ ಎಂಬ ಪದವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಲಿತ ಮುಖಂಡ ಜಿ ಎಚ್ ಜಗನ್ನಾಥ್ ಮಾತನಾಡಿ ದಲಿತರ ಮತ್ತು ಸವರ್ಣಿಯರ ನಡುವೆ ಘರ್ಷಣೆಯಾಗಿರುವುದು ಸುಳ್ಳು ವದಂತಿಯಾಗಿದೆ. ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳುತ್ತಿರುವ ಗ್ರಾಮಗಳಲ್ಲಿ ರಾಜೇಶ್ ನಂತಹ ವ್ಯಕ್ತಿಗಳು ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಸ್ಥಳೀಯ ದಲಿತ ನಿವಾಸಿಗಳ ಮಾಹಿತಿ ಪ್ರಕಾರ ಯಾವುದೇ ಗುಂಪು ಘರ್ಷಣೆ ಸಂಭವಿಸಿಲ್ಲ.
ದಲಿತ ಎಂಬ ಪದವನ್ನು ಸುಖ ಸುಮ್ಮನೆ ಬಳಸಿಕೊಂಡು ಗ್ರಾಮದಲ್ಲಿ ಅಶಾಂತಿ ನೆಲಸಲು ಕಾರಣವಾಗಿರುತ್ತಾನೆ ಎಂದು ಕಿಡಿಕಾರಿದರು.
ರಾಜ್ಯ ಸಂಘಟನಾ ಸಂಚಾಲಕ ಕುಂದರನಹಳ್ಳಿ ನಟರಾಜ್ ಮಾತನಾಡಿ ರಾಜೇಶ್ ಎಂಬ ವ್ಯಕ್ತಿಯು ಗ್ರಾಮದಲ್ಲಿ ಕೆಲವು ದಲಿತರ ಮೇಲೆ ಒಬ್ಬ ದಲಿತನಾಗಿ ದೌರ್ಜನ್ಯವನ್ನು ಎಸೆಗುತ್ತಿದ್ದಾನೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸವರ್ಣಿಯರ ಮೇಲೆ ಅಟ್ರಾಸಿಟಿ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಿಸುವಂತೆ ಒತ್ತಡ ಏರುತ್ತಿದ್ದಾರೆ. ಈ ವಿಚಾರವಾಗಿ ಉನ್ನತ ಅಧಿಕಾರಿಗಳ ಬಳಿ ಒತ್ತಡ ಹೇರುತ್ತಿದ್ದಾರೆ. ಸವರ್ಣಿಯರ ಬಳಿ ಹಣ ಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಅದಲಗೆರೆ ಈಶ್ವರಯ್ಯ ಮಾತನಾಡಿ
ದಲಿತ ಸಂಘಟನೆಯವರು ಅಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ನಿವಾಸಿಗಳ ಮಾಹಿತಿಯನ್ನು ಪಡೆದಿದ್ದೆವೆ. ಸಂವಿಧಾನಾತ್ಮಕವಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ ಯಾವುದೇ ರೀತಿಯ ಗುಂಪು ಘರ್ಷಣೆ ಸಂಭವಿಸಿರುವುದು ಕಂಡುಬಂದಿಲ್ಲ ಅಟ್ರಾಸಿಟಿ ಕಾಯ್ದೆ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಹಣದ ಆಮಿಷಕ್ಕೆ ಒಳಗಾಗಿ ದಲಿತ ಸಮಾಜಕ್ಕೆ ಅಗೌರವ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಗ್ರಾಮಸ್ಥರು ಮಾತನಾಡಿ ಸ್ಥಳೀಯವಾಗಿ ಶಾಂತಿ ಸೌಹಾರ್ದತೆಯಿಂದ ನೂರಾರು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ನಮಗೂ ಸವರ್ಣಿಯರಿಗೂ ಮಧ್ಯೆ ಜಾತಿ ಎಂಬ ವಿಷ ಬೀಜವನ್ನು ಬಿತ್ತುತ್ತಿದ್ದಾನೆ.
ಗ್ರಾಮದಲ್ಲಿ ಕೆಲವು ಬಡ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯವನ್ನು ಎಸೆಗುತ್ತಿದ್ದಾನೆ.
ಗ್ರಾಮದಲ್ಲಿ ಯಾವುದೇ ಗುಂಪು ಘರ್ಷಣೆ ಪ್ರಕರಣ ನಡೆಯದೆ ಇದ್ದರೂ ಹಣಕ್ಕಾಗಿ ಕಿಡಿಗೇಡಿ ಕೆಲಸ ಮಾಡುತ್ತಿದ್ದಾನೆ. ಇಂತಹ ವ್ಯಕ್ತಿಗಳು ದಲಿತ ಸಮಾಜಕ್ಕೆ ಮಾರಕವಾಗಿವಾಗಿದ್ದರೆ ಎಂದು ಕಿಡಿ ಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಂಗನಾಯಕ್, ದೊಡ್ಡಗುಣಿ ಕೀರ್ತಿ, ಕಡಬ ಶಂಕರ್, ಮದಲಾಪುರ ಲೋಕೇಶ್, ಕೋಟೆ ಕಲ್ಲೇಶ್, ಕಿಟ್ಟದಕುಪ್ಪೆ ನಾಗರಾಜು, ಗುಬ್ಬಿ ಬಸವರಾಜು, ಜಿ ಹೊಸಳ್ಳಿ ರವೀಶ್, ಮಹೇಶ್, ನರಸಿಂಹಮೂರ್ತಿ,ಸ್ವಾಮಿ, ಹಾಜರಿದ್ದರು.
ವರದಿ
ಶ್ರೀಕಾಂತ್: ಗುಬ್ಬಿ