Document

ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ.

Janataa24 NEWS DESK

IMG 20231225 WA0000
ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ.



ಪಾವಗಡ: ಮುಂಜಾನೆಯ ಚುಮುಚುಮು ಚಳಿಯಲ್ಲಿ ಪುಟ್ಟ ಪುಟ್ಟ ಹುಡುಗರು ಯುವಕರು ಕೊರೆಯುವ ಶೀತಗಾಳಿಯ ಮಧ್ಯೆ ಪತ್ರಿಕಾ ವಿತರಣೆಯನ್ನು ಮಾಡುತ್ತಿರುವುದು ನಿಜಕ್ಕೂ ಇವರ ಧೈರ್ಯ ಹಾಗೂ ಕರ್ತವ್ಯ ನಿಷ್ಠೆಯ ಬಗ್ಗೆ ಖಂಡಿತವಾಗಿ ನಾವು ಅಭಿನಂದಿಸಬೇಕಾಗಿದೆ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಸದಾ ಈ ರೀತಿಯ ಕಾರ್ಯಕ್ರಮಗಳನ್ನು ಸಂಯೋಜಿತವಾಗಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಹಾಗಾಗಿ ಇಂದು ಸುಮಾರು 30 ಪತ್ರಿಕಾ ವಿತರಕರಿಗೆ ಸ್ವೆಟರ್ ಗಳನ್ನು ನೀಡಲಾಯಿತು.

IMG 20231225 WA0003
ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀ ಜಪಾನಂದಾ ಜೀ ಯವರೊಂದಿಗೆ ಪಾವಗಡ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಸುದೇಶ್ ಬಾಬು ಮತ್ತು ಆಶ್ರಮದ ಸ್ವಯಂಸೇವಕರಾದ ಶ್ರೀ ಭರತ್ ರಾಮಮೂರ್ತಿ ಶ್ರೀ ರೋಹಿತ್ ಸುಧಾಕರ್ ಶ್ರೀ ಶ್ರೀನಿವಾಸ್ ಶ್ರೀ ವೆಂಕಟೇಶ್ ರವರು ಭಾಗವಹಿಸಿದ್ದರು.

IMG 20231225 WA0005
ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ

ಈ ಸಂದರ್ಭದಲ್ಲಿ ಮಾತನಾಡುತ್ತಾ ಸ್ವಾಮೀ ಜಪಾನಂದ ಜಿ ಅವರು ಪತ್ರಿಕಾ ವಿತರಕರು ಪತ್ರಿಕೋದ್ಯಮದ ಅತ್ಯಂತ ಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಇವರಿಲ್ಲದಿದ್ದರೆ ಪತ್ರಿಕೋದ್ಯಮವೇ ತತ್ತರಿಸಿ ಹೋಗಿಬಿಡುತ್ತದೆ, ಹಾಗಾಗಿ ಆರಂಭದಿಂದಲೇ ಶ್ರೀ ರಾಮಕೃಷ್ಣ ಸೇವಾ ಶ್ರಮ ಪಾವಗಡ ಇಂತಹ ಶ್ರಮಿಕ ಜೀವಿಗಳಿಗೆ ಸದಾ ಸಹಾಯ ಹಸ್ತವನ್ನು ನೀಡುವುದು ಒಂದು ಪರಂಪರೆಯಾಗಿದೆ.

IMG 20231225 WA0001
ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ

ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿ ನೆರೆದ ಪತ್ರಿಕ ವಿತರಕರಿಗೆ ಶುಭಾಶಯಗಳು ಕೋರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಆರ್ಯವೈಶ್ಯ ಮಂಡಳಿಯ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಅತ್ಯಂತ ನಿಕಟ ವರ್ತಿಗಳು ಹಿತೈಷಿಗಳು ಹಾಗೂ ಶ್ರೀ ರಾಮಕೃಷ್ಣ ವಿದ್ಯಾ ಶಾಲೆ ಮೈಸೂರ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಹಲವಾರು ವರ್ಷಗಳಲ್ಲಿ ಪರಮಪೂಜ್ಯ ಸ್ವಾಮಿ ಸುರೇಶಾನಂದ ಜಿರವರ ಮಾರ್ಗದರ್ಶನದಲ್ಲಿ ಜೀವನವನ್ನು ಆರಂಭಿಸಿದ ಶ್ರೀ ಸುದೇಶ್ ಬಾಬುರವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಪೂಜ್ಯ ಸ್ವಾಮಿ, ಜಪಾನಂದ ಜಿ ಯವರ ಸೇವಾ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿರುವುದನ್ನು ನಾವು ಕಂಡಿದ್ದೇವೆ. ನಮ್ಮೆಲ್ಲರ ಸಹಕಾರ ಬೆಂಬಲ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಆದಮ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು . ಕಾರ್ಯಕ್ರಮದ ನಂತರ ಎಲ್ಲ ವಿಚಾರಕರಿಗೆ ಕಾಫಿ ಮತ್ತು ತಿಂಡಿಯನ್ನು ನೀಡಲಾಯಿತು.

IMG 20231225 WA0004
ಪತ್ರಿಕಾ ವಿತರಕ ಯುವಕರಿಗೆ ಜಪಾನಂದ ಶ್ರೀಗಳಿಂದ ಚಳಿಗಾಲದ ಉಡುಪು ವಿತರಣೆ.



ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *