Document

ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಚೆನ್ನೈನಲ್ಲಿ ಚಂಡಮಾರುತಕ್ಕೆ ಸಿಲುಕಿದವರಿಗೆ ನೆರವು

Janataa24 NEWS DESK

IMG 20231216 WA0031

ಪಾವಗಡ: ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಚೆನ್ನೈ ಮಹಾನಗರದ ದಕ್ಷಿಣ ಭಾಗದಲ್ಲಿ ಚಂಡಮಾರುತ ಮಿಚುಂಗ್ ಪರಿಣಾಮದಿಂದ ಸಹಸ್ರ ಸಹಸ್ರ ಜನರಿಗೆ ಅದರಲ್ಲಿಯೂ ಜನರಿಗೆ ನೀರು ತುಂಬಿ ಅವರು ಅನುಭವಿಸುತ್ತಿರುವ ನರಕ ಯಾತನೆಯನ್ನು ಸ್ವತಃ ಕಂಡು ಇಂದು ಸರಿಸುಮಾರು ಸಾವಿರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ.

IMG 20231216 WA0026

ಈ ಸಂದರ್ಭದಲ್ಲಿ ಮುಖ್ಯ ವಾಹನದಿಂದ ಕೊಳಚೆ ಪ್ರದೇಶ ಹಾಗೂ ನೀರು ತುಂಬಿದ ಪ್ರದೇಶಗಳಿಗೆ ಚಿಕ್ಕ ಚಿಕ್ಕ ವಾಹನಗಳಲ್ಲಿ ತುಂಬಿಸಿ ತದನಂತರ ಆಯಾ ಪ್ರದೇಶಗಳಿಗೆ ತೆರಳಿ ಶಿಸ್ತು ಬದ್ಧವಾಗಿ ಹಾಗೂ ಕಂಪ್ಯೂಟರಿ ಕೃತ ಸಹಕಾರದಿಂದ ವಿತರಿಸಲಾಯಿತು.

IMG 20231216 WA0030

ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಸ್ವತಃ ನಿಂತು ಈ ಮಹಾನ್ ಕಾರ್ಯದ ಮೇಲ್ವಿಚಾರಣೆಯನ್ನು ನಡೆಸಿದರು. ಸ್ಥಳೀಯ ಮಾಧ್ಯಮದವರು ಹಾಗೂ ದೃಶ್ಯ ಮಾಧ್ಯಮದವರು ಪೂಜ್ಯ ಸ್ವಾಮೀಜಿಯವರ ಈ ಕಾರ್ಯಕ್ರಮವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಚೆನ್ನೈ ಮಹಾನಗರದ ಮುಖ್ಯ ವಾಹಿನಿಗಳಲ್ಲಿ ಪೂಜ್ಯ ಸ್ವಾಮೀಜಿಯವರ ಹಾಗೂ ಇನ್ಫೋಸಿಸ್ ಫೌಂಡೇಶನ್ ಅವರ ಈ ಸಮಯೋಚಿತ ಕಾರ್ಯಕ್ರಮವನ್ನು ಪ್ರತಿಬಿಂಬಿಸಿದರು.

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *