Document

ಚೇಳೂರು ಬಂದ್ ಯಶಸ್ವಿ

Janataa24 NEWS DESK




ಗುಬ್ಬಿ: ತಾಲೂಕಿನ ಚೇಳೂರು ಗ್ರಾಮವನ್ನು ಬಂದ್ಮಾಡಲಾಗಿತ್ತು. ಬೆಸ್ಕಾಂ ಇಲಾಖೆಯು ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಸಾವಿರಾರು ರೈತರು ಚೇಳೊರಿನ ಪ್ರಮುಖ ಬೀದಿಗಳಲ್ಲಿ ಬೆಸ್ಕಾಂ ಇಲಾಖೆಯ ವಿರುದ್ಧ ಘೋಷಣೆಯನ್ನು ಕೂಗುತ್ತಾ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

IMG 20231012 WA0004



ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರವು ರೈತರ ಬದುಕಿನ ನಡುವೆ ಕಣ್ಣ ಮುಚ್ಚಾಲೆ ಆಟವಾಡುತ್ತಿದೆ.
ರಾಜ್ಯ ಸರ್ಕಾರದ ಐದು ಉಚಿತ ಯೋಜನೆಗಳಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರಿದ್ದು ಸಾವಿರಾರು ಸಂಖ್ಯೆ ರೈತರು ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುತ್ತದೆ. ಆದ್ದರಿಂದ ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುವುದು ಸೂಕ್ತವಾಗಿದೆ.


ಚೇಳೂರು ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ಸಹ ಹಹಾಕಾರ ಉಂಟಾಗುತ್ತಿದೆ. ಮುಂಬರುವ ಬೇಸಿಗೆಯಲ್ಲಿ ಹೇಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುತ್ತೀರಾ? ಎಂದು ಅಧಿಕಾರಿಗಳಿಗೆ ತಿಳಿಸಿದರು.
ಲೋಡ್ ಶೇಡ್ಡಿಂಗ್ ಜಾಸ್ತಿ ಆಗುತ್ತಿದ್ದು ಅಧಿಕ ವಿದ್ಯುತ್ ಸಾಮರ್ಥ್ಯವುಳ್ಳ ಟ್ರಾನ್ಸ್ಫಾರ್ಮರ್ ಗಳ ಅಳವಡಿಕೆ ಮಾಡಬೇಕಿದೆ.

IMG 20231012 WA0002


ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತುಮಕೂರು ಇ ಇ ಪ್ರಶಾಂತ್ ಮಾತನಾಡಿ ಮಳೆಯ ಕೊರತೆಯಿಂದಾಗಿ ಜಲಾಶಯಗಳು ಬರಿದಾಗಿರುವುದರಿಂದ ವಿದ್ಯುತ್ ಸಮಸ್ಯೆಯು ಉಂಟಾಗಿದೆ.
ಕರ್ನಾಟಕ ರಾಜ್ಯಕ್ಕೆ ಒಟ್ಟು 17000 ಮೆಗಾ ವ್ಯಾಟ್ ವಿದ್ಯುತ್ ಬೇಕಾಗುತ್ತದೆ
ಆದರೆ ಇದೀಗ 3800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಪಾವಗಡದಲ್ಲಿ ಸೋಲಾರ್ ಪಾರ್ಕನ್ನು ನಿರ್ಮಾಣ ಮಾಡಲಾಗಿದೆ.
ಪಂಜಾಬ್ ಹರ್ಯಾಣ ರಾಜ್ಯಗಳಿಂದ ನಾಲ್ಕು ಐದು ದಿನಗಳೊಳಗೆ 1200 ಮೆಗಾ ವ್ಯಾಟ್ ವಿದ್ಯುತ್ತನ್ನು ಖರೀದಿಸಿ ಆದಷ್ಟು ಬೇಗ ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

IMG 20231012 WA0005



ಎ ಇ ಇ ಕರಿಯಪ್ಪ ಮಾತನಾಡಿ ತೋಟದ ಮನೆಗಳಿಗೆ ನಿರಂತರ ಜ್ಯೋತಿ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರದಿಂದ ಯಾವುದೇ ಸೂಚನೆಗಳಿಲ್ಲ.
ತ್ರೀ ಫೇಸ್ ಜೊತೆಯಲ್ಲಿ ರೈತರಿಗೆ ಸೂಕ್ತ ವಿದ್ಯುತ್ ನೀಡಲು ಸಹಕರಿಸುತ್ತೇವೆ ಎಂದು ತಿಳಿಸಿದರು.
ನಂತರ ರೈತರು ಬಂದ್ ಮತ್ತು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮನವಿ ಪತ್ರ ಸಲ್ಲಿಸಿದರು.



ಈ ಸಂದರ್ಭದಲ್ಲಿ ರೈತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೆಹಳ್ಳಿ ಕುಮಾರ್, ಕೃಷ್ಣ ಜಟ್ಟಿ, ಕೊಡಿಯಲ ಬಸವರಾಜು,
ಮುಖಂಡರಾದ ಹಿತೇಶ್, ಕೆಂಪರಾಜು, ಇಂದು ಕುಮಾರ್,ಹೇಮಂತ್, ಶಿವಕುಮಾರ್, ನಟರಾಜ್ ನಲ್ಲೂರು, ಎಕೆಪಿ ರಾಜು, ಹರೀಶ್ ಇತರರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *