Janataa24 NEWS DESK
ಗೃಹಲಕ್ಷ್ಮಿ ಚಾಲನೆ ಕಾರ್ಯಕ್ರಮ ಎಲ್ಇಡಿ ಸ್ಕ್ರೀನ್ ಮೂಲಕ ವೀಕ್ಷಣೆ.

ಮಧುಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ ಮೈಸೂರಿನಲ್ಲಿ ಆಗಸ್ಟ್ 30 ರಂದು ಚಾಲನೆ ನೀಡಲಾಯಿತು.

ಮಧುಗಿರಿ ತಾಲೂಕಿನ ಎಲ್ಲ ಗ್ರಾಮ ಪಂ ಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದ್ದು. ಸಾವಿರಾರು ಮಹಿಳೆಯರು ಎಲ್ಇಡಿ ಪರದೆಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಡಿ.ವಿಹಳ್ಳಿ ಗ್ರಾಮ ಪಂ, ದಬ್ಬೆಘಟ್ಟ ಗ್ರಾಮ ಪಂ, ಬಡವನಹಳ್ಳಿ ಗ್ರಾಮ ಪಂ, ರಂಗಾಪುರ ಗ್ರಾಮ ಪಂ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನೋಡಲ್ ಹಾಗೂ ಪಿಡಿಒ ಅಧಿಕಾರಿಗಳ ನೇತೃತ್ವದಲ್ಲಿ ವೀಕ್ಷಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಗ್ರಾಮ ಪಂ ಸಿಬ್ಬಂದಿಗಳು ಹಾಜರಿದು ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಆಸನದ ವ್ಯವಸ್ಥೆಯನ್ನು ಮಾಡಿದರು.
ಬಡವನಹಳ್ಳಿ ಪಿಡಿಒ ಗೌಡಪ್ಪ ಮಾತನಾಡಿ, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಸರಕಾರದ ಪ್ರಮುಖ ಯೋಜನೆ ಇದಾಗಿದೆ, ಎಲ್ಇಡಿ ಸ್ಕ್ರೀನಿಂಗ್ ಮೂಲಕ ಎಲ್ಲಾ ಗ್ರಾಮ ಪಂ ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಿದ್ದು, ಈ ಕಾರ್ಯಕ್ರಮ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪಾಲಾನುಭವಿಗಳು ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂಡಲ್ ಅಧಿಕಾರಿಗಳಾದ ರಂಗಧಾಮಯ್ಯ, ಉದಯ್ ಕುಮಾರ್, ಕವಿತಾ, ಶೈಲಜ ಮತ್ತು ಪಿ.ಡಿ.ಒ ಗಳಾದ ಗೌಡಪ್ಪ, ಶಿವಕುಮಾರ್, ಜುಂಜೇಗೌಡ, ಅಲ್ಮಾಸ್ ಹಾಗೂ ಕಾರ್ಯದರ್ಶಿಗಳಾದ ನವೀನ್, ರಾಕೇಶ್, ಶ್ರೀ ಲಕ್ಷ್ಮಿ ಮತ್ತು ಪಂ ಸಿಬ್ಬಂದಿಗಳು ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.

ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮ ಪಂ ಆವರಣದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಚಾಲನೆಯ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿ ಕವಿತಾ, ಪಂ ಅಧ್ಯಕ್ಷೆ ಭಾನುಪ್ರಿಯ, ಉಪಾಧ್ಯಕ್ಷೆ ಜಯಮ್ಮ ಹಾಗೂ ಪಿಡಿಒ ಗೌಡಪ್ಪ ಚಾಲನೆ ನೀಡಿದರು.
ವರದಿ
ಮಧುಗಿರಿ: ಅಬಿದ್