Janataa24 NEWS DESK

ಗೃಹಲಕ್ಷ್ಮಿಗೆ ತಾಲ್ಲೂಕಿನಲ್ಲಿ 51.971 ಸಾವಿರ ಫಲಾನುಭವಿಗಳ ಆಯ್ಕೆ ಎಂದು ಶಾಸಕ ಹೆಚ್.ವಿ.ವೆಂಕಟೇಶ್ ತಿಳಿಸಿದರು.
ಪಾವಗಡ: ಗೃಹಲಕ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಆಥಿರ್ಕವಾಗಿ ಚೇತರಿಸಿಕೊಳ್ಳಲು ಸಹಾಯಧನವನ್ನು ನೀಡುತ್ತಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿಗೆ ತಾಲ್ಲೂಕಿನಲ್ಲಿ 51.971 ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಶಾಸಕ ಹೆಚ್.ವಿ.ವೆಂಕಟೇಶ್ ತಿಳಿಸಿದರು.

ಕಾಂಗ್ರೆಸ್ ನ ಉಚಿತ ಯೋಜನೆಗಳು ನೋಡಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ನಿದ್ದೆ ಕೆಟ್ಟಿದೆ.
ಚುನಾವಣೆ ಹತ್ತಿರದಲ್ಲಿ ಮೋಧಿ ಗ್ಯಾಸ್ 200.400 ಕಡಿಮೆ ಮಾಡಿ ಜನರಿಗೆ ಮರಳು ಮಾಡಲು ಹೊರಟಿದ್ದಾರೆ.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದೆವೆ.
ರಾಜ್ಯದಲ್ಲಿ ಬಡವರು ಅಭಿವೃದ್ಧಿ ಗೂಳ್ಳುವುದು ಬಿಜೆಪಿ .ಜೆಡಿಎಸ್ ಬೇಕಿಲ್ಲ.ಮುಂದಿನ ಜಿಲ್ಲಾ ಪಂಚಾಯತ ತಾಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ಸಿಗಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ 40% ದಂದೆ ಇಲ್ಲಾ.ಬಡವರ ಪರ ಕೆಲಸ ಮಾಡುವ ಉದ್ದೇಶ ವುಳ್ಳ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ.
ಬಿಜೆಪಿ ಅವದಿಯಲ್ಲಿ ಹಿಂದೂ ಮುಸ್ಲಿಂ ಜಾತಿಗಳ ಮಧ್ಯ ವಿಷ ಹರಡಿಸುವುದೆ ಒಂದು ಸಾಧನೆ ಅಗಿತ್ತು.
ಸರ್ಕಾರ ನೀಡುತ್ತಿರುವ ಎರಡು ಸಾವಿರ ನಮ್ಮ ಮನೆಯ ಯಾವುದೇ ಒಂದು ಸಮಸ್ಯೆ ಹೋಗಲಾಡಿಸಲು ಮುಂದಾಗುತ್ತದೆ.
ಬಡವರಿಗೆ ಇಂತಹ ಯೋಜನೆ ನೀಡುವುದರಿಂದ ಸರ್ಕಾರ ದಿವಾಳಿ ಅಗುತ್ತದೆ ಎಂಬುದಾಗಿ ಬಿಜೆಪಿ ಯವರು ಹೇಳುತ್ತಾರೆ.

ಅದರೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಗೊತ್ತು ಯಾವರೀತಿ ಯೋಜನೆಗೆ ಹಣ ಕ್ರೂಡೀಕರಣ ಗೊಳಿಸಬೇಕು ಎಂಬುದು ಗೂತ್ತು ಎಂದರು.
ಈ ವೇಳೆ ಮಾಜಿ ಸಚಿವರಾದ ವೆಂಕಟರಮಣಪ್ಪ. ತಹಶಿಲ್ದಾರ್ ವರದರಾಜ್. ಪುರಸಭೆಯ ಸದಸ್ಯರು ಇತರರು ಇದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ