Janataa24 NEWS DESK
ತುಮಕೂರು ಪಾವಗಡ ಸುದ್ದಿ
ಪಾವಗಡ ಬಲಜಿಗರ ಚಿತ್ತ ಜೆಡಿಎಸ್ ನತ್ತ
ಪಾವಗಡ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವು ನಿರ್ಧರಿಸುವಲ್ಲಿ ಜಾತಿ ರಾಜಕಾರಣ ಕೇಂದ್ರ ಬಿಂದುವಾಗುತ್ತಿದೆ.

ಯಾವ ಪಕ್ಷದ ಕಡೆಗೆ ಯಾವ ಜಾತಿಯ ಅಥವಾ ಸಮುದಾಯದ ಒಲವು ಹೇಗಿದೆ ?
ಮೀಸಲು ಕ್ಷೇತ್ರದ ಪೈಕಿ ತಾಲೂಕಿನ ಯಾವ ಕ್ಷೇತ್ರದಲ್ಲಿ ಯಾವ ಸಮುದಾಯ ನಿರ್ಣಾಯಕ ಲೆಕ್ಕಾಚಾರದಲ್ಲಿ ಬಲಜಿಗ ಸಮುದಾಯ ಗಮನಸೆಳೆಯುತ್ತಿದೆ.

ಚುನಾವಣಾ ದಿನಾಂಕ ದಿನ ದಿನೆ ಹತ್ತಿರವಾದಂತೆ ಪಾವಗಡ ಮೀಸಲು ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೊಡಗಿದೆ.
ಬುಧವಾರ ಪಟ್ಟಣದ ಯೋಗಿನಾರಾಯಣ ಸ್ವಾಮಿ ಸಮುದಾಯ ಭವನ ದಲ್ಲಿ ಬಲಜಿಗ ಸಮುದಾಯ ಸಹ ಶಕ್ತಿ ಪ್ರದರ್ಶನ ತೋರಿಸಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಮೆ 10 ರಂದು ನಡೆಯಲ್ಲಿರುವ ಮತದಾನದಲ್ಲಿ ನನಗೆ ಮತ ನೀಡಿ ಎಂದು ನೆರೆದ ಬಲಜಿಗ ಸಮುದಾಯದ ಮುಖಂಡರಲ್ಲಿ ಮತಯಾಚಿಸಿದರು.

ರೈತರ ಸಮಸ್ಯೆಗಳನ್ನು ಹೋಗಲಾಡಿಸ ಬೇಕಾದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಜನರ ಸಮಸ್ಯೆ ಹೋಗಲಾಡಿಸ ಬೇಕಾದರೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದರು.
ಬಲಜಿಗ ಯುವ ಮುಖಂಡ ಗಗನ್ ಮಾತನಾಡಿ ಜೆಡಿಎಸ್ ಪಕ್ಷದಲ್ಲಿ ಬಲಜಿಗ ಸಮುದಾಯದರು ಯಾರು ಇಲ್ಲ ಎಂಬುದಾಗಿ ಕೆಲ ನಮ್ಮ ಸಮುದಾಯದವರು ಅಪ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದರೆ ಇಂದು ಸೇರಿದ ನಮ್ಮ ಬಲಜಿಗ ಸಮುದಾಯದ ಕುಟುಂಬ ಸಮೇತ ಈ ಸಭೆಗೆ ಬಂದಿರುವುದು ನೋಡಿದರೆ ಜೆಡಿಎಸ್ ಬೆಂಬಲಕ್ಕೆ ಅತಿಹೆಚ್ಚು ನಮ್ಮ ಸಮುದಾಯದವರು ಹೆಚ್ಚಾಗಿರುವುದು ತಿಳಿದು ಬಂದಿದೆ ಎಂದರು.

ನಂತರ ಜೆಡಿಎಸ್ ಮುಖಂಡ ಚನ್ನಮಲ್ಲಪ್ಪ. ಹಿರಿಯ ಮುಖಂಡ ತಿಮ್ಮರೆಡ್ಡಿ.ಗೌರವ ಅಧ್ಯಕ್ಷ ರಾಜ್ ಶೇಖರ್.ಅಧ್ಯಕ್ಷ ಬಲರಾಮ್ ರೆಡ್ಡಿ. ಸೊಗಡು ವೆಂಕಟೇಶ್. ಎನ್.ಎ.ಈರಣ್ಣ.ಮಾತನಾಡಿದರು.
ಈ ವೇಳೆ ಬಲಜಿಗ ಸಮುದಾಯದ ಮುಖಂಡರಾದ ಗೋವಿಂದ ಬಾಬು.ಗಡ್ಡಂ ತಿಮ್ಮಾರಾಜು. ಜೆರಾಕ್ಸ್ ರಮೇಶ್. ಕಾಂತ. ಮಹಾಲಕ್ಮೀ, ಪ್ರಭು, ಅಂಬಿಕಾ,
ದಾಕ್ಷಾಯಿಣಿ, ಶಾಂತಿನಗರ ಸುಬ್ಬರಾಯಪ್ಪ,ತೆಂಗಿನಕಾಯಿ ವೆಂಕಟೇಶ್.
ವರದಿ
ಪಾವಗಡ:ಇಮ್ರಾನ್ ಉಲ್ಲಾ