Document

ಪರಮೇಶ್ವರ್ ಕಾಲಿಗೆ ಬಿದ್ದು ನಮಸ್ಕರಿಸಿದ ವಿಜಯೇಂದ್ರ.

Janataa24: NEWS DESK

by vijayendra g parameshwar

ತುಮಕೂರು: ಎಡೆಯೂರು ದೇವಸ್ಥಾನದಲ್ಲಿ ಬಿ.ವೈ. ವಿಜಯೇಂದ್ರ ಅವರು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನಕ್ಕೆ ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಅವರು ಆಗಮಿಸಿದ್ದರು. ಅದೇ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್‌ನ ಜಿ.ಪರಮೇಶ್ವರ್ ಅವರು ಆಗಮಿಸಿದ್ದು, ಇಬ್ಬರು ಮುಖಂಡರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಇಬ್ಬರು ನಾಯಕರು ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಉಭಯ ಪಕ್ಷದ ನಾಯಕರಿಬ್ಬರು ಯಡಿಯೂರು ಸಿದ್ದಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.

by vijayendra g parameshwar 1

ಪರಮೇಶ್ವರ್ ತಮಗೆ ಸನ್ಮಾನಿಸಲು ಬಂದ ಶಾಲನ್ನು ವಿಜಯೇಂದ್ರರಿಗೆ ಹೊದಿಸಿ ಆಶೀರ್ವಾದ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಜಯೇಂದ್ರ ಅವರು ಪರಮೇಶ್ವರ ಕಾಲಿಗೆ ಬಿದ್ದು ನಮಸ್ಕರಿಸಿದರು.

Document

Leave a Reply

Your email address will not be published. Required fields are marked *