Janataa24 NEWS DESK
ಪಾವಗಡ
ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಮ್ಮಿಕೊಂಡ 132 ನೇ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಸರಳವಾಗಿ ತಹಶಿಲ್ದಾರ್ ಕೆ.ಎಸ್.ಸುಜಾತ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಿದರು.

ತಹಶಿಲ್ದಾರ್ ಕೆ.ಎಸ್.ಸುಜಾತ ಪೂಜೆ ಸಲ್ಲಿಸಿ ಮಾತನಾಡಿ ನಾವುಗಳು ದೇವರು ಎಂಬುದಾಗಿ ಡಾ.ಅಂಬೇಡ್ಕರ್ ರವರಿಗೆ ಸದಾ ಪೂಜೆ ಸಲ್ಲಿಸಬೇಕು.
ಏಕೆಂದರೆ ಈ ದಿನ ಮಹಿಳೆಯರಾದ ನಾವು ನಿಮ್ಮ ಮುಂದೆ ನಿಂತು ಮಾತನಾಡುವ ಅರ್ಹತೆ ಕಲ್ಪಿಸಿ ಕೊಟ್ಟ ಮಹಾನ್ ವ್ಯೆಕ್ತಿ.
ಇಂದಿನ ದಿನಗಳಲ್ಲಿ ಮಹಿಳೆಯರಿಗೂ ಸಹ ಸಮಾಜದಲ್ಲಿ ಸಮಾನತೆ ಹಕ್ಕನ್ನು ಕಲ್ಪಿಸಿದ ಏಕೈಕ ವ್ಯಕ್ತಿ ಅದು ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಲ್ಲುತ್ತದೆ.

ಚುನಾವಣೆ ಇಲ್ಲದಿದ್ದರೆ ಅದ್ದೂರಿಯಾಗಿ ಅಚರಣೆ ಮಾಡಲಾಗುತ್ತಿತ್ತು.
ಚುನಾವಣೆ ನಂತರ ತಾಲೂಕು ಆಡಳಿತದಿಂದ ಎಲ್ಲರೂ ಸೇರಿ ಅದ್ದೂರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮಾಡೋಣ ಎಂಬುದಾಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ದಲಿತ ಮುಖಂಡ ತಿಳಿಸಿದರು.
ದಲಿತ ಮುಖಂಡ ಸಿ.ಕೆ.ತಿಪ್ಪೇಸ್ವಾಮಿ ಮಾತನಾಡಿ ತರಾತೂರಿಯಲ್ಲಿ ಚುನಾವಣಾ ಇಲಾಖೆಯವರು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ನಂತರ ಚುನಾವಣೆ ಪ್ರಕ್ರಿಯೆ ನಿಗದಿಪಡಿಸಬಹುದಾಗಿತ್ತು ಅದರೆ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಗೊತ್ತಿಲ್ಲವೇ ಇದಕ್ಕೆ ದಲಿತ ಸಂಘಟನೆಗಳು ಖಂಡಿಸುತ್ತಿದ್ದೆವೆ ಎಂದರು.
ದಲಿತ ಮುಖಂಡ ವಳ್ಳೂರು ನಾಗೇಶ್ ಮಾತನಾಡಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಾದಾರಣ ರೂಪದಲ್ಲಿ ಆಚರಣೆ ಮಾಡಲಾಯಿತು.ಈ ಹಿಂದೆಯೇ ದಲಿತ ಸಂಘಗಳ ಒಕ್ಕೂಟಗಳು ಅಂಬೇಡ್ಕರ್ ಜಯಂತಿ ನಂತರ ಚುನಾವಣೆ ಪ್ರಕ್ರಿಯೆಯ ಮಾಡಬೇಕು ಎಂಬುದಾಗಿ ಗಮನಕ್ಕೆ ತಂದರು ಮಾಡದೇ ಇರುವುದು ಸೂಚನೆಯ ಸಂಗತಿ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನಪ್ಪ.ಮೇನೆಜರ್ ಯಮೂನ ನಾಗಭೂಷಣ. ಶೌಕತ್.ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರುಗಳು.

ದಲಿತ ಮುಖಂಡರು ಡಿ.ಎಸ್.ಎಸ್.ನಾರಾಯಣಪ್ಪ.ವಿಜಯ್.ಪೆದ್ದನ್ನ. ಕನ್ನಮೇಡಿ ಕೃಷ್ಣ ಮೂರ್ತಿ.ವೆಂಕಟೇಶ್. ಹಾಗೂ ತಾಲೂಕಿನ ಎಲ್ಲಾ ಡಿಎಸ್ಎಸ್ ಮುಖಂಡರು ಎಲ್ಲಾ ದಲಿತ ಪರ ಸಂಘಗಳು.ಹಾಗೂ ನೌಕರವರ್ಗದವರು ಸೇರಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಭಾಗವಹಿಸಿದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.