ಪಾವಗಡ: ಇಮ್ರಾನ್ ಉಲ್ಲಾ
ಪಾವಗಡ: ಅಂತ್ಯ ಸುಬ್ರಹ್ಮಣ್ಯ ಸ್ವಾಮಿಗೆ ನಾಗಲಮಡಿಕೆಯಲ್ಲಿ ಪುಷ್ಯಮಾಸದ ಷಷ್ಠಿಯಂದು ನಡೆದ ಬ್ರಹ್ಮರಥೋತ್ಸವಕ್ಕೆ ಭಕ್ತರ ದಂಡು ಹರಿದುಬಂದಿತ್ತು. ಬೆಳಿಗಿನ ಜಾವದಿಂದಲೇ ಏಕವಾರ ರುದ್ರಾಭಿಷೇಕ ಜಲಾಭಿಷೇಕ ಪಂಚಾಮೃತ ಅಭಿಷೇಕಗಳ ನಂತರ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಮಾಡಲಾಯಿತು.
ರಥಾಂಗ ಹೋಮ ಪೂರ್ಣಾಹುತಿ ನಡೆದ ನಂತರ ಶಾಸಕ ಕಂದಾಯ ಅಧಿಕಾರಿಗಳು ನಡೆಸಿದ ಪ್ರಕಾರೋತ್ಸವದ ನಂತರ ರಥಾರೋಹಣ ನಡೆಯಿತು ಭಕ್ತರ ಜಯಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಈ ವರ್ಷ ಜಲಾಶಯ ತುಂಬಿದ್ದು ಉತ್ತರ ಪಿನಾಕಿನಿ ನದಿ ಹರಿಯುತ್ತಿರುವುದರಿಂದ ನದಿನೀರಿನಲ್ಲಿ ಸ್ನಾನ ಹಾಗೂ ದೇವರ ದರ್ಶನ ಮಾಡಿದ ಭಕ್ತರ ಸಂಖ್ಯೆ ಹೆಚ್ಚಿದ್ದು ಹರಿಕೆ ತೀರಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದ್ದು ಕಂಡು ಬಂದಿತ್ತು.

ತಮಿಳುನಾಡು ಆಂಧ್ರ ಪ್ರದೇಶ ಕರ್ನಾಟದ ಭಕ್ತರು ದೇವರ ದರ್ಶನ ಮಾಡಿದರು ಸುಗಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು ಮಹಿಳೆಯರು ಬಟ್ಟೆ ಬದಲಿಸಲು ಪರದಾಡಬೇಕಾಯಿತು ಮೂಲ ಸೌಕರ್ಯದ ಕೊರತೆ ಕಂಡು ಬಂದಿತ್ತು ಸಾವಿರಾರು ಜನ ಭಕ್ತರಿಗೆ ಇದ್ದ ಮೂಲ ಸೌಕರ್ಯಗಳು ತೀರ ಕಡಿಮೆ ಹಾಗೂ ಅವುಗಳ ನಿರ್ವಹಣೆ ಇಲ್ಲವಾಗಿದ್ದರಿಂದ ಅತ್ತಾ ಸುಳಿಯುವವರೇ ಕಡಿಮೆ ಎನ್ನಬಹುದು. ವಂಶಪರಾರಂಪಂವಾಗಿ ರೊದ್ದಂ ಕುಟುಂಬದವರಿಂದ ದೇವತಾ ಕಾರ್ಯಗಳು ಪ್ರಾರಂಭವಾಗಿದ್ದು ಹತ್ತು ದಿನಗಳ ಕಾಲ ಜನವರಿ 7ರವರೆಗೂ ವಿಶೇಷ ಪೂಜೆ ಅಲಂಕಾರ ಹಾಗೂ ಸಮಾರಾಧನೆ ಹಾಗೂ ಸಂಜೆ ಉತ್ಸವಗಳು ನಡೆಯಲಿವೆ.

ಜಾತ್ರೆಯ ಹೆಸರಿನಲ್ಲಿ ವಾಹನಗಳಿಗೆ ಬಾರಿ ಸುಂಕ ವಸೂಲಿ ಭಕ್ತರು ಹಿಡಿ ಶಾಪ ಹಾಕಿದ್ದಾರೆ.ಖಡತದಲ್ಲಿ ಇಪತ್ತು ರೂ ಇದ್ದರೆ ನೂರು ರೂ ವಸೂಲಿ ಮಾಡಿದ್ದಾರೆ. ಅದರಲ್ಲಿ ತಹಶೀಲ್ದಾರ್ ಸೀಲ್ ಸಹ ಇತುವುದು ಬೆಳಕಿಗೆ ಬಂದಿದೆ.ಇದಕ್ಕೆ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ.

ಧಾರ್ಮಿಕ ಕಾರ್ಯಕ್ರಮಗಳನ್ನು ಮುಖ್ಯ ಅರ್ಚಕ ಬದರೀಪ್ರಸಾದ್ ನಡೆಸಿಕೊಟ್ಟರು ಮಧುಗಿರಿ ಉಪವಿಭಾಗಾಧಿಕಾರಿ ಡಾ ರಿಷಿ ಆನಂದ್ ತಾಹಸೀಲ್ದಾರ್ ವರದರಾಜು ಎನ್ ಮೂರ್ತಿ ಇಸ್ಪೆಕ್ಟರ್ ಕಾಂತರೆಡ್ಡಿ, ಭಾಗವಹಿಸಿದ್ದರು.