Document

Reservation: ಯಾರಿಗೆ ಬೇಕಿದೆ ಮೀಸಲಾತಿ…?

JANATAA24 NEWS DESK 

 

 

Reservation: ಯಾರಿಗೆ ಬೇಕಿದೆ ಮೀಸಲಾತಿ…?

Reservation- Who needs a reservation...?

ಮಲ ಹೊರುವ ಪದ್ಧತಿಯಲ್ಲ, ಒಳಚರಂಡಿ/ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದರಲ್ಲ, ಚಪ್ಪಲಿ ಹೊಲೆಯುವುದರಲ್ಲ, ಪೌರಕಾರ್ಮಿಕರ ಕಸ ಗುಡಿಸುವ ಕೆಲಸದಲ್ಲ, ಹೆಣ ಉಳುವುದರಲ್ಲ ಇಲ್ಲ ಸುಡುವುದರಲ್ಲ, ಜಾತಿಯಲ್ಲಿ ಹುಟ್ಟಿದ್ದೇ ತಪ್ಪು ಎಂದು ಕಾಡುವ ಪಾಪ ಪ್ರಜ್ಞೆಯಲ್ಲ ಮತ್ತು ಜೀತ ಪದ್ಧತಿಗಳಲ್ಲ ಹೇಳಿ ಯಾರಿಗೆ ಬೇಕಿದೆ ಜೋರಾಗಿ ಹೇಳಿ ಮೀಸಲಾತಿ… ಹೇಳಿ ಯಾರಿಗೆ ತಾನೇ ಬೇಕಿದೆ ಮೀಸಲಾತಿ! ಬೇಕಿರುವುದು ನಿಮಗೆಲ್ಲ ಉದ್ಯೋಗದಲ್ಲ ಅದರಲ್ಲೂ ಉನ್ನತ ಉದ್ಯೋಗದಲ್ಲ …? ಶಿಕ್ಷಣದಲ್ಲ…?ರಾಜಕೀಯದಲ್ಲ…? ಹೇಳಿ ಮತ್ತೆಲ್ಲ ಇವುಗಳಲ್ಲೂ ಕೇಳಬೇಕಲ್ಲ ನೀವು ಮೀಸಲಾತಿ. ಅವರ್ಯಾಕೆ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಮಗೂ ಕೊಡಿ ಈ ಕೆಲಸವನ್ನು ಅದರಲ್ಲೂ ಮೀಸಲಾತಿ ಎಂದು ಕೇಳಿದ್ದೀರಾ…? ಕೇಳಿಲ್ಲವ , ಕೇಳಿರದಿದ್ದರೆ ಈಗಲೇತಪ್ಪದೆ ಕೇಳಿ ಮೀಸಲಾತಿ ಅವೆಲ್ಲ ಕೆಲಸಗಳಲ್ಲೂ..

ಶೇ. 90ಕ್ಕಿಂತ ಹೆಚ್ಚು ಶೋಷಿತ ಸಮುದಾಯದವರೇ

ವಿಶೇಷವಾಗಿ ದಲಿತರೆ ಈ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಇನ್ನೂ ದಲಿತ ಮಹಿಳೆಯರು ಭಾರತೀಯ ಸಮಾಜದಲ್ಲಿ ಅನುಭವಿಸುತ್ತಿರುವ ಸಾಂಸ್ಥಿಕ ದೌರ್ಜನ್ಯ, ಸಾಮಾಜಿಕ ಕ್ರೌರ್ಯ ಮತ್ತು ಚಾರಿತ್ರಿಕ ನೋವನ್ನು ಇನ್ನಷ್ಟು ಆಳವಾಗಿ ಮತ್ತು ತೀವ್ರವಾಗಿ ಹೇಳುತ್ತೇನೆ.ಬೇರೆ ಜಾತಿಯ ಹೆಣ್ಣು ಮಕ್ಕಳ ಮೇಲಿನ ಹತ್ಯಾಚಾರಕ್ಕೂ ದಲಿತ ಹೆಣ್ಣುಮಕ್ಕಳ ಮೇಲಿನ ಹತ್ಯಾಚಾರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.ಓದುವ ಜಾಗದಲ್ಲಿ, ಕೆಲಸದ ಜಾಗದಲ್ಲಿ, ಚಿಂದಿ ಆಯುವಾಗ, ಅಪಹರಿಸಿ, ಎದರಿಸಿ, ಬಡತನವ ಬಂಡವಾಳ ಮಾಡಿಕೊಂಡು, ಮುಗ್ಧತೆ ಮತ್ತು ಅನಕ್ಷರತೆಯನ್ನು ದಾಳವಾಗಿ ಬಳಸಿಕೊಂಡು, ಅಸಹಾಯ ಕತೆಯನ್ನು ಲಾಭ ಮಾಡಿಕೊಂಡು ಅತಿ ಹೆಚ್ಚು ಹತ್ಯಾಚಾರಗಳು ನಡೆಯುತ್ತವೆ. ಬೇರೆ ಯಾವುದೇ ಸಮುದಾಯದ ಮೇಲೆ ಹತ್ಯಾಚಾರ ಆದರೆ ಕೂಡಲೇ ಆ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತವೆ ಆದರೆ ದಲಿತ ಸಮುದಾಯ ಅನಕ್ಷರಸ್ಥ ಹಾಗೂ ಶೋಷಿತ ಸಮುದಾಯ ಇನ್ನೂ ಕನಿಷ್ಠ ಸಂಘಟನೆಯು ಆಗಿಲ್ಲ. ಆದರೂ ಒಂದೇ ಬಾರಿ ಧ್ವನಿ ಎತ್ತಿ ನ್ಯಾಯ ಕೇಳುವುದಿಲ್ಲ. ದಲಿತ ಹೆಣ್ಣು ಮಕ್ಕಳ ದೇಹದ ಮೇಲಿನ ಗಾಯ, ದಾಳಿ, ದಲಿತರ ಹೇಳಿಕೊಳ್ಳಲಾಗದ ನೋವು, ಅಸಹಾಯಕತೆ, ಹತ್ಯಾಚಾರ ಆಗಿದೆ ಎಂದು ಹೇಳಿದರು ನಿನ್ನದೇ ತಪ್ಪು ಎಂದು ಪೂರ್ವಾಗ್ರಹವಾಗಿ ಕಟ್ಟಿರುವ ಸಮಾಜದ ಕಟ್ಟುಪಾಡು, ನ್ಯಾಯ ಕೇಳಿದ ಪೊಲೀಸರೇ ಹತ್ಯಾಚಾರ ಮಾಡಿದ ಪ್ರಕರಣಗಳು, ಬಲಾಢ್ಯರ ಎದುರು ನಿಲ್ಲಲಾಗದ ಅಸಾಯಕಥೆ. ಮೀಸಲಾತಿಯ ನೈಜ ಅಗತ್ಯ

ಭಾರತದಲ್ಲಿ ಮೀಸಲಾತಿಯ ಕುರಿತು ಚರ್ಚೆಗಳು ಬಂದಾಗಲೆಲ್ಲಾ, “ಮೀಸಲಾತಿಯನ್ನು ಜಾತಿಯ ಆಧಾರದ ಮೇಲೆ ನೀಡುವ ಬದಲು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೀಡಬೇಕು” ಎಂಬ ವಾದಗಳು ಕೇಳಿಬರುತ್ತವೆ. ಆದರೆ, ಈ ವಾದವು ಸಮಾಜದ ಕಟು ವಾಸ್ತವಗಳಾದ ಜಾತಿ ದೌರ್ಜನ್ಯ, ನಿರಂತರ ಹಿಂಸೆ ಮತ್ತು ಶೋಷಿತರ ಆತ್ಮಗೌರವದ ಮೇಲಿನ ದಾಳಿಯನ್ನು ಮುಚ್ಚಿಹಾಕುವ ಯತ್ನವಾಗಿದೆ. ಜಾತಿಯ ಕ್ರೂರತೆಯನ್ನು ಮರೆ ಮಾಚಿ ಬಿಳಿ ಬಟ್ಟೆಯನ್ನು ಹಾಕಿ ಶಾಂತಿ ಪ್ರಿಯರು ಎಂದು ಹೇಳಿದಹಾಗೆ.

ಮೀಸಲಾತಿ ಎಂಬುದು ಬಡತನ ನಿರ್ಮೂಲನ ಅಸ್ತ್ರವೇ? ಅದರ ಪೂರ್ವಗ್ರಹ ಇತಿಹಾಸ ತಿಳಿದಿದ್ದೀರ..? ತಿಳಿದರೆ ನೀವು ಪ್ರಾಯಶ್ಚಿತ ಮಾಡಿಕೊಳ್ಳಬೇಕಲ್ಲವೇ? ಮೀಸಲಾತಿಯು ಆಡಳಿತಾತ್ಮಕ ಅಧಿಕಾರ ಹಂಚಿಕೆ ಮತ್ತು ಶತಮಾನಗಳಿಂದ ಅನುಭವಿಸಿದ ಚಾರಿತ್ರಿಕ ಶೋಷಣೆಗೆ ಸಂವಿಧಾನದ ಮೂಲಕ ನೀಡಿದ ರಕ್ಷಣಾ ಕವಚವಸ್ಟೆ. ಆ ಕವಚವು ರಾಜಕಾರಣಿಗಳ ಮತದಾನದ ಭಾಷಣದ ಅಸ್ತ್ರವಾಗಿದೆಯೇ ವಿನಃ ದಲಿತರನ್ನು ರಕ್ಷಿಸುವ ಗುರಾಣಿಯಾಗಿಲ್ಲ. ಇಲ್ಲ ಅವರನ್ನು ಮೇಲೆತ್ತುವ ಬಲಿಷ್ಟ ಕೈಗಳಾಗಿಲ್ಲ.2020ರಿಂದ 2022ರ ಮಿನಿಸ್ಟ್ರಿ ಆಫ್ ಹೋಮ್ ಅಫೈರ್ ಬಿಡುಗಡೆ ಮಾಡಿರುವ

ಅಂಕಿ-ಅಂಶಗಳ ಹಿಂದಿರುವ ರಕ್ತ ಮತ್ತು ಕಣ್ಣೀರು ಅನುಭವಿಸದ ನಮಗೆ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿ ಕೊಳ್ಳಬೇಕಲ್ಲವೇ? ತಡೆಯಲು ಏನು ಮಾಡಬೇಕು ಎಂದು ಯೋಚಿಸುವುದು ಮನುಷ್ಯ ಧರ್ಮವಲ್ಲವೇ..?

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಮತ್ತು ಸರ್ಕಾರದ ಅಧಿಕೃತ ದತ್ತಾಂಶಗಳು ಭಾರತದಲ್ಲಿ ದಲಿತರು ಎದುರಿಸುತ್ತಿರುವ ನರಕಯಾತನೆಯನ್ನು ಬಿಚ್ಚಿಡುತ್ತವೆ. 2020 ರಿಂದ 2022 ರ ಅವಧಿಯಲ್ಲಿ ಎಸ್‌ಸಿ ಮೇಲಿನ ಅಪರಾಧಗಳು 50,291 ರಿಂದ 57,582 ಕ್ಕೆ (ಸರಾಸರಿ+14.50% ಏರಿಕೆ ಆಗಿದೆ) ಹಾಗೂ ಎಸ್‌ಟಿ ಮೇಲಿನ ಅಪರಾಧಗಳು 8,272 ರಿಂದ 10,064 ಕ್ಕೆ (ಸರಾಸರಿ+21.66% ) ಏರಿಕೆಯಾಗಿವೆ.

ಆದರೆ ಈ ಸಂಖ್ಯೆಗಳು ಕೇವಲ ಅಂಕಿ-ಅಂಶಗಳಲ್ಲ ಅವುಗಳ ಹಿಂದೆ ಹೆಪ್ಪುಗಟ್ಟಿದ ನೋವಿದೆ ಅದನ್ನು ಅರಿಯುವ ಸಂವೇಧನಶೀಲರು ನಾವಾಗಬೇಕಿದೆ. ದೇಶದಲ್ಲಿ ಪ್ರತಿ 18 ನಿಮಿಷಕ್ಕೊಮ್ಮೆ ಒಬ್ಬ ದಲಿತನ ವಿರುದ್ಧ ಅಪರಾಧ ನಡೆಯುತ್ತಿದೆ. ಪ್ರತಿ ದಿನ 13 ದಲಿತರ ಕೊಲೆಯಾಗುತ್ತಿದೆ, ಪ್ರತಿ ವಾರ 5 ದಲಿತರ ಮನೆಗಳಿಗೆ ಬೆಂಕಿ ಇಡಲಾಗುತ್ತಿದೆ, 6 ದಲಿತರ ಅಪಹರಣವಾಗುತ್ತಿದೆ, ಕುಡಿಯುವ ನೀರು, ದೇವಾಲಯ ಸರ್ವೇ ಸಾಮಾನ್ಯ. ಇನ್ನು ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು 2020 ರಲ್ಲಿ 1,137 ಇದ್ದದ್ದು 2022 ರಲ್ಲಿ 1,347 ಕ್ಕೆ (+18.47%) ಹೆಚ್ಚಾಗಿವೆ. ಎಷ್ಟೋ ದೌರ್ಜನ್ಯಗಳು ಠಾಣೆಯ ಮೆಟ್ಟಿಲನ್ನೇ ಏರದೆ ಮುಚ್ಚಿಹೋಗುತ್ತಿರುವುದು ಅನುಭವಿಸುವ ಯಾತನೆಗೆ ಸಾಕ್ಷಿ.

ದಲಿತ ಮಹಿಳೆ ಬೇರೆಯ ಜಾತಿಯ ಮೂರು ಪಟ್ಟು ಹಿಂಸೆಯನ್ನೂ, ಕಿರುಕುಳವನ್ನು, ಅಪಹರಣ, ಬೆದರಿಕೆ, ಮಾನಸಿಕ ಹಿಂಸೆ, ಹತ್ಯಾಚಾರವನ್ನು,ಶೋಷಣೆಯನ್ನು

ದಲಿತ ಮಹಿಳೆಯರು ಜಾತಿ, ಲಿಂಗ ಮತ್ತು ಬಡತನ ಎಂಬ ಮೂರು ಹಂತದ ತಾರತಮ್ಯವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಶೇ. 70ರಷ್ಟು ದಲಿತ ಮಹಿಳೆಯರು ಅಕ್ಷರಸ್ಥರಲ್ಲ. ಬಡತನ ಮತ್ತು ಜಾತಿಬಲದ ದೌರ್ಜನ್ಯದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಬಾಲ್ಯದಲ್ಲೇ ಶೋಷಣೆಗೆ ತಳ್ಳಲ್ಪಡುತ್ತಿದ್ದಾರೆ. ಅತ್ಯಾಚಾರ ಮತ್ತು ದೈಹಿಕ ದೌರ್ಜನ್ಯಗಳು ಕೇವಲ ಕಾಮದ ಅಭಿವ್ಯಕ್ತಿಯಲ್ಲ, ಬದಲಿಗೆ ದಲಿತ ಸಮುದಾಯವನ್ನು ‘ತಮ್ಮ ಗೆರೆ ದಾಟದಂತೆ’ ಹೆದರಿಸಿ, ಅಧೀನತೆಯಲ್ಲಿಡುವ ದಮನಕಾರಿ ಅಸ್ತ್ರವಾಗಿ ಬಳಕೆಯಾಗುತ್ತಿವೆ.

ಗ್ರಾಮೀಣ ಭಾರತದ ದೈನಂದಿನ ಅಪಮಾನ ನೀರು ಕುಡಿದಂತೆ ಎಲ್ಲರಿಗೂ ಗೊತ್ತಿದ್ದರು ಅವರೇನು ಬಿಡ್ರಿ ಎಲ್ಲ ಸಂವಿಧಾನದಲ್ಲಿ ಎಲ್ಲ ಅಂಬೇಡ್ಕರ್ ಕೊಟ್ಟಿದ್ದಾರೆ ಎನ್ನುವ ಉಡಾಫೆ ಮಾತು.

ಹಳ್ಳಿಯಲ್ಲಿ ಇಂದಿಗೂ ಮೂರರಲ್ಲಿ ಒಂದು ಗ್ರಾಮೀಣ ಶಾಲೆಗಳಲ್ಲಿ ದಲಿತ ಮಕ್ಕಳನ್ನು ಇತರ ಮಕ್ಕಳೊಂದಿಗೆ ಕುಳಿತುಕೊಳ್ಳಲು ಬಿಡುವುದಿಲ್ಲ.

ಶೇ. 27.6ರಷ್ಟು ಹಳ್ಳಿಗಳಲ್ಲಿ ದಲಿತರಿಗೆ ಪೊಲೀಸ್ ಠಾಣೆ, ಗ್ರಾಮ ಪಂಚಾಯತ್, ಸರ್ಕಾರಿ ಕಚೇರಿ ಪ್ರವೇಶಿಸುವುದಕ್ಕೂ ಅಡ್ಡಿಪಡಿಸಲಾಗುತ್ತಿದೆ.

ಪ್ರತಿ ನಾಲ್ಕು ಹಳ್ಳಿಗಳಲ್ಲಿ ಒಂದರಲ್ಲಿ ಆರೋಗ್ಯ ಸಿಬ್ಬಂದಿ ದಲಿತರ ಮನೆ ಬಾಗಿಲಿಗೆ ಹೋಗುವುದಿಲ್ಲ.

ಅರ್ಧದಷ್ಟು ಗ್ರಾಮಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಗೆ ಪ್ರವೇಶವಿಲ್ಲ.

ಶೇ. 70ರಷ್ಟು ಹಳ್ಳಿಗಳಲ್ಲಿ ಮೇಲ್ಜಾತಿ ಮತ್ತು ದಲಿತರು ಒಟ್ಟಿಗೆ ಕುಳಿತು ಊಟ ಮಾಡುವ ವಾತಾವರಣವಿಲ್ಲ. ಕ್ಷೌರ ಅಂಗಡಿ, ಹೋಟೆಲ್ ಪ್ರವೇಶ, ದೇವಾಲಯ ಪ್ರವೇಶ, ಅಂತರ್ಜಾತಿ ವಿವಾಹ ಆದರೆ ಹೆತ್ತ ಮಗಳು ಗರ್ಭಿಣಿ ಎನ್ನುವುದ ಮಾನವೀಯತೆ ಮರೆತು, ಹೆತ್ತ ಮಗಳು ಎನ್ನದೇ ಮರ್ಯಾದಗೇಡು ಹತ್ಯೆ ಮಾಡುವ ಕ್ರೂರಿಗಳ ಸಮಾಜದಲ್ಲಿದ್ದೇವೆ. ಇದೆಲ್ಲ ಜಾತಿ ಕಾರಣಕ್ಕೆ ಅಲ್ಲವೇ? ಅದರಲ್ಲೂ ಕೀಳು ಮೇಲಿನ ಸೆಣೆಸಾಟದಲ್ಲಿ ತಾನು ಮೇಲೆಂದು ತೋರಿಸಿಕೊಳ್ಳುವುದಕ್ಕೆ ಅಲ್ಲವೇ..?

 

ಮೀಸಲಾತಿ ಜಾತಿ ಕಾಯಕಕ್ಕೆ ನಿಗದಿತ, ಅಧಿಕಾರಕ್ಕೆ ಮಾತ್ರ ‘ಅರ್ಹತೆ’ಯ ಪ್ರಶ್ನೆ ಯಾಕೆ…?

ಮಲ ಹೊರುವ ಪದ್ಧತಿ, ಒಳಚರಂಡಿ/ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದು, ಚಪ್ಪಲಿ ಹೊಲೆಯುವುದು, ಪೌರಕಾರ್ಮಿಕರ ಕೆಲಸ ಮತ್ತು ಜೀತ ಪದ್ಧತಿಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಶೋಷಿತ ಸಮುದಾಯದವರೇ ಇದ್ದಾರೆ. ಈ ಕಠಿಣ ಮತ್ತು ಜೀವಾಪಾಯದ ಕೆಲಸಗಳನ್ನು ಮಾಡಲು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ‘ಅರ್ಹತೆ’ಯ ಅಗತ್ಯವಿಲ್ಲದೇ ಅವರನ್ನೇ ನಿಯೋಜಿಸಲಾಗುತ್ತದೆ. ಆದರೆ, ಇದೇ ಸಮುದಾಯದ ವ್ಯಕ್ತಿ ಶಿಕ್ಷಣ ಪಡೆದು ದೇಶದ ನೀತಿ ರೂಪಿಸುವ ಐಎಎಸ್ (IAS) ಅಥವಾ ಐಪಿಎಸ್ (IPS) ಪೀಠಕ್ಕೆ ಕುಳಿತುಕೊಳ್ಳಲು ಬಂದಾಗ ‘ಮೀಸಲಾತಿ’ ಮತ್ತು ‘ಅರ್ಹತೆ’ಯ (Merit) ಪ್ರಶ್ನೆ ಎತ್ತಲಾಗುತ್ತದೆ.

ಕೇಂದ್ರ ಸರ್ಕಾರದ ವರದಿಯ ಪ್ರಕಾರ ಐಎಎಸ್ ಅಧಿಕಾರಿಗಳಲ್ಲಿ ಶೇ. 92 ಮತ್ತು ಐಪಿಎಸ್ ಅಧಿಕಾರಿಗಳಲ್ಲಿ ಶೇ. 90ರಷ್ಟು ಮಂದಿ ಸಾಮಾನ್ಯ ವರ್ಗದವರೇ ಆಗಿದ್ದು, ದಲಿತ, ಆದಿವಾಸಿ ಮತ್ತು ಒಬಿಸಿ ಪ್ರಾತಿನಿಧ್ಯ ಶೇ. 8 ರಿಂದ 10ರ ಒಳಗೇ ಉಳಿದಿದೆ. ಭಾರತದಲ್ಲಿ

ಆದಾಯ ಬದಲಾಗಬಹುದು, ಆದರೆ ಈ ದೇಶದಲ್ಲಿ ಬದಲಾಗದೆ ಇರುವುದು ಜಾತಿ ಗುರುತು ಮಾತ್ರ. ಯಾರಾದರೂ ಮೊದಲು ಯಾರ ಮಗ ಎನ್ನುವಾಗಲೇ ಹೆಸರಲ್ಲೇ ಜಾತಿಯ ತಿರುಳು ಮೆತ್ತಿರುತ್ತದೆ, ಏನು ಕೆಲಸ ಮಾಡುತ್ತಿದ್ದಾರೆ ಎಂದಾಗ ತಿರುಳು ಕಳಚುತ್ತಾ ಕೊನೆಗೆ ನೇರವಾಗಿ ಯಾವ ಜಾತಿ ಎನ್ನುವ ಹಂತಕ್ಕೆ ಬಂದ ಕೂಡಲೇ ಮುಖದ ಹಾವಭಾವಗಳು ಬುಸುಗುಡುವ ಹಾವಾಗುತ್ತವೆ.

ಹಾಗಾದರೆ ಯಾರಿಗೆಲ್ಲ ಮೀಸಲಾತಿ ಪ್ರಯೋಜನ ಸಿಗುತ್ತಿದೆ?ಇತರ ಹಿಂದುಳಿದ ವರ್ಗಗಳು 27% (OBC)

ಪ್ರವರ್ಗ-೧ (Category 1): 4%

ಪ್ರವರ್ಗ-೨ಎ :(Category 2A): 15%

ಪ್ರವರ್ಗ-೨ಬಿ: (Category 2B): 4%

ಪ್ರವರ್ಗ-೩ಎ: (Category 3A): 4%

ಪ್ರವರ್ಗ-೩ಬಿ: (Category 3B): 5%)

ಮಹಿಳೆಯರಿಗೆ: 33%

ಪರಿಶಿಷ್ಟ ಜಾತಿ (SC) :15%

ಆರ್ಥಿಕವಾಗಿ ಹಿಂದುಳಿದ ವರ್ಗಗಳು: (EWS)10%

ಪರಿಶಿಷ್ಟ ಪಂಗಡ (ST) :7.5%

ಗ್ರಾಮೀಣ ಅಭ್ಯರ್ಥಿಗಳಿಗೆ: 15%

ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ: 5%

ಮಾಜಿ ಸೈನಿಕರಿಗೆ: 10% (ಸಿ ದರ್ಜೆ) / 20% (ಡಿ ದರ್ಜೆ)

ವಿಕಲಚೇತನರಿಗೆ: 5%

ಕಲ್ಯಾಣ ಕರ್ನಾಟಕ (371J): ಆಯಾ ಜಿಲ್ಲೆಗಳ ಶೇಕಡಾವಾರು ಆಧಾರದ ಮೇಲೆ ಪ್ರತ್ಯೇಕ ಮೀಸಲಾತಿ. ದಲಿತರಿಗೆ ಜಾತಿಯಲ್ಲಿ ಹುಟ್ಟಿದ ಶ್ರೇಷ್ಠತೆಗೆ ಪೂಜಾರಿ/ಅರ್ಚಕನ ಕೆಲಸ ಸಿಗುತ್ತದೆಯ ಮೆರಿಟ್ ಆಧಾರದ ಮೇಲೆ…?

ಜಾತಿಯೂ ಬರಿ ದಾಖಲೆಗಳಲ್ಲಿ ಅಥವಾ ಹೆಸರಿನಲ್ಲಿ ಅಷ್ಟೇ ಇಲ್ಲ, ಭಾಷೆ, ಆಹಾರ, ದೇಹದ ರಚನೆ , ಶಿಕ್ಷಣ, ಉಡುಗೆ, ತೊಡುಗೆ, ನಡವಳಿಕೆ ಪ್ರತಿಯೊಂದರಲ್ಲೂ ಜಾತಿ ತೀವ್ರತೆ ಇದೆ.

ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ ಬದಲಾಗಬಹುದು, ಆದರೆ ಆತನ ಜಾತಿಯ ಗುರುತು ಸಮಾಜದಲ್ಲಿ ಬದಲಾಗುವುದಿಲ್ಲ.

ಸಮಾಜದಲ್ಲಿ ನಡೆಯುವ ಮರ್ಯಾದೆ ಗೇಡು ಹತ್ಯೆಗಳು , ಸಾಮಾಜಿಕ ಬಹಿಷ್ಕಾರಗಳು ಆರ್ಥಿಕ ಸ್ಥಿತಿಯನ್ನು ನೋಡಿ ನಡೆಯುವುದಿಲ್ಲ, ಜಾತಿಯನ್ನು ನೋಡಿ ನಡೆಯುತ್ತವೆ. ಹೀಗಿರುವಾಗ “ಮೀಸಲಾತಿ ರದ್ದುಗೊಳಿಸಿ” ಅಥವಾ “ಆದಾಯದ ಮೇಲೆ ನೀಡಿ” ಎಂದು ವಾದಿಸುವುದು ದಲಿತರ ದೈನಂದಿನ ರಕ್ತ-ಕಣ್ಣೀರನ್ನು ನಗಣ್ಯಗೊಳಿಸುವ ಬಾಲಿಶತನ. ಸಂವಿಧಾನ ನೀಡಿದ ಮೀಸಲಾತಿಯು ಶೋಷಿತರ ಉಸಿರು ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಗತ್ಯವಾದ ಸಾಮಾಜಿಕ ನ್ಯಾಯದ ಹಕ್ಕು. ಅದನ್ನು ಪ್ರಶ್ನಿಸುವ ಮೊದಲು ನಿಮ್ಮ ಮನಸ್ಸನ್ನು ಒಮ್ಮೆ ಪ್ರಶ್ನಿಸಿ ಕೊಳ್ಳಬೇಕಲ್ಲವೇ..?

ಜಮೀನು, ಸಂಪತ್ತು ನಿಮಗಿಂದು ಸಿಕ್ಕಿರುವುದು ಜಾತಿಯ ಮೀಸಲಾತಿ ಕಾರಣಕ್ಕೆ ಅಲ್ಲವೇ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಸ್ಪೃಶ್ಯರು)

 

ವರದಿ: ದೇವರಾಜು R  ತುಮಕೂರು

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *