Document

Tiptur: ಎರಡನೇ ಬಾರಿಯೂ ಸಹ KUWJ ಯಲ್ಲಿ ಗೆಲುವು ಸಾಧಿಸಿದ ಜಿಲ್ಲಾ ಕಾರ್ಯದರ್ಶಿ ತುರುವೇಕೆರೆ ನಂದೀಶ್ ಗೆ ಅಭಿನಂದನೆ. 

JANATAA24 NEWS DESK 

 

 

Tiptur: ಎರಡನೇ ಬಾರಿಯೂ ಸಹ KUWJ ಯಲ್ಲಿ ಗೆಲುವು ಸಾಧಿಸಿದ ಜಿಲ್ಲಾ ಕಾರ್ಯದರ್ಶಿ ತುರುವೇಕೆರೆ ನಂದೀಶ್ ಗೆ ಅಭಿನಂದನೆ.

Tiptur: ಎರಡನೇ ಬಾರಿಯೂ ಸಹ KUWJ ಯಲ್ಲಿ ಗೆಲುವು ಸಾಧಿಸಿದ ಜಿಲ್ಲಾ ಕಾರ್ಯದರ್ಶಿ ತುರುವೇಕೆರೆ ನಂದೀಶ್ ಗೆ ಅಭಿನಂದನೆ. 
ತಿಪಟೂರು: ತಿಪಟೂರಿನ ಹಾಸನ ಸರ್ಕಲ್ ನಂದಿನಿ ಡೈರಿ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ನಂದೀಶ್ ಅವರಿಗೆ ಸರಳತೆಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

 

ಅಭಿನಂದನಾ ಕಾರ್ಯಕ್ರಮ ಶುಭ ವಿಶ್ವಕರ್ಮ ರವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.

 

ಜಿಲ್ಲಾ ಗೌರಧ್ಯಕ್ಷರಾದ ಡಾ! ಭಾಸ್ಕರ್ ಮಾತನಾಡಿ ಜನರ ಸಮಸ್ಯೆಗಳ ಕುರಿತು ವರದಿ ಮಾಡುವ ಮೂಲಕ ಪತ್ರಕರ್ತರು ಸಮಾಜದ ಬೆನ್ನೆಲುಬಾಗಿದ್ದಾರೆ ವೈಯಕ್ತಿಕ ಜೀವನ ಬದಿಗಿಟ್ಟು ನಿತ್ಯ ಕೆಲಸ ಮಾಡುತ್ತಾರೆ ಅವರ ಸೇವೆ ಅನನ್ಯ. ಅದರಲ್ಲೂ ಇಂತಹ ಗ್ರಾಮೀಣ ಭಾಗದ ಯುವ ಪ್ರತಿಮೆ ತುರುವೇಕೆರೆ ನಂದೀಶ್ ರವರು ಇವರ ಸೇವೆಗೆ ತಕ್ಕ ಗೆಲುವು ಎಂದು ಅಭಿನಂದಿಸಿದರು.

 

ಇದೇ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷರಾದ ಬೆಣ್ಣೆಹಳ್ಳಿ ರಾಜು ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಎರಡು ಬಾರಿ ಸಹ ಗೆಲವು ಸಾಧಿಸಿದ ನಂದೀಶ್ ರವರ ಅಷ್ಟು ಸುಲಭದ ಮಾತಲ್ಲ ಈ ಗೆಲುವು ಅವರ ಪತ್ರಿಕಾ ವೃತ್ತಿ ಹಾಗೂ ಎಲ್ಲರನ್ನೂ ಸಮಾನ ಮನೋಭಾವದಿಂದ ಮಾತನಾಡಿಸುವ ಸರಳವಾದ ವ್ಯಕ್ತಿತ್ವ ಅವರದು ಹಾಗಾಗಿ ಪತ್ರಕರ್ತರು ಅವರನ್ನು ಬೆಂಬಲಿಸಿದ್ದೆ ಆಯ್ಕೆ ಮಾಡಿ ಗೆಲ್ಲಿಸಿದ್ದಾರೆ ಎಂದು ಅಭಿನಂದಿಸಿದರು.

 

ಕವಿ ಸಾಹಿತಿ ಬಳೆಕಟ್ಟೆ ಶಂಕ್ರಪ್ಪನವರು ಮಾತನಾಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ವರದಿ ಮಾಡಿದಾಗ ನನಗೆ ಆ ಬಗ್ಗೆ ಹೆಮ್ಮೆ ಎನಿಸುತ್ತದೆ ಇಂತಹ ವರದಿಗಳನ್ನು ಗ್ರಾಮೀಣ ಭಾಗದ ನಂದೀಶ್ ರವರು ಸುಮಾರು ವರ್ಷದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ನಂತರ ಕೇರಾ ಮತ್ತು ಪ್ರಿಂಟ್ ಮೀಡಿಯಾ ಸಂಘದ ವತಿಯಿಂದ ನಂದೀಶ್ ರವರಿಗೆ ಶಾಲುವದಿಸಿ ಗೌರವ ಪೂರ್ವಕ ಸನ್ಮಾನಿಸಿ ಅಭಿನಂದಿಸಿದರು.

 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎರಡನೇ ಬಾರಿ ಸಹ ಅಧಿಕ 155 ಮತಗಳನ್ನು ನೀಡಿ ಸಹಕರಿಸಿದ ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ವಂದಿಸಿ ಮಾತನಾಡಿ ಕಾರ್ಯನಿರತ ಪತ್ರಕರ್ತ ಸಂಘವು ಡಿ ವಿ ಗುಂಡಪ್ಪನವರು ಸ್ಥಾಪನೆ ಮಾಡಿದ್ದು ಇದೀಗ ರಾಜ್ಯದ್ಯಂತ ವ್ಯಾಪಿಸಿದೆ. ಪತ್ರಿಕೋದ್ಯಮ ಸಮಾಜದ 4ನೇ ಅಂಗವಾಗಿದೆ ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರ ಕೊಡಿಗೆ ಅಪಾರವಾಗಿದೆ ಧ್ವನಿಲ್ಲದವರ ಪರವಾಗಿ ಪತ್ರಕರ್ತರು ನಿಲ್ಲಬೇಕು. ಪತ್ರಕರ್ತರು ಯಾವುದೋ ರಾಜಕೀಯಕ್ಕೆ ಹಾಗೂ ಯಾವುದೋ ಒತ್ತಡಕ್ಕೆ ಮಣಿಯದೆ ನೈಜ್ಯವಾಗಿ ಸುದ್ದಿ ಬಿತ್ತರಿಸಬೇಕು.

 

ಪತ್ರಕರ್ತರಿಗೆ ಚುನಾವಣೆ ನಡೆಬಸಬಾರದು ಎಂಬುದು ನನ್ನ ಅಭಿಪ್ರಾಯ ಏಕೆಂದರೆ ಅವಿರೋಧವಾಗಿ ಆಯ್ಕೆಯಾದಾಗ . ಪತ್ರಕರ್ತರಲ್ಲೇ ಭಿನ್ನಾಭಿಪ್ರಾಯ ಮೇಲು-ಕೀಳು ಎಂಬ ಮನೋಭಾವದಿಂದ ಪತ್ರಕರ್ತರ ಮನಸ್ಥಿತಿ ಬರುತ್ತದೆ ಎಂದು ನನ್ನ ಅಭಿಪ್ರಾಯ. ಹಾಗಾಗಿ ಪತ್ರಕರ್ತರ ಎಂದ ಮೇಲೆ ಎಲ್ಲರೂ ಒಂದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬುದು ನನ್ನ ಅಭಿಪ್ರಾಯ ಎಂದುರು.

 

ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಸರ್ವೇಶ್, ಕರ್ನಾಟಕ ಭೀಮ್ ಆರ್ಮಿ ಗವಿರಂಗಯ್ಯ, ಮಂಜುನಾಥ್ ಡಿ ಪತ್ರಕರ್ತರು, ರಘು, ಸ್ವಾಮಿ, ಚಿನ್ನು ಮುರಳಿ, ಇನ್ನು ಮುಂತಾದವರು ನಂದೀಶ್ ರವರನ್ನು ಗೌರವಪೂರ್ವಕ ವಂದಿಸಲಾಯಿತು.

 

ವರದಿ: ಮಂಜುನಾಥ್ ಡಿ ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *