Document

Turuvekere: ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.

Janataa24 NEWS DESK 

 

Turuvekere: ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್. ಜಮೀನಿನ ಮಾಹಿತಿಯನ್ನು ವಿವರವಾಗಿ ತಿಳಿಸಿದ ದಂಡಾಧಿಕಾರಿ ಅಹಮದ್.

Turuvekere: ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.
ತುರುವೇಕೆರೆ: ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಸತತ 40 ದಿನಗಳ ಅಹೋ ರಾತ್ರಿ ಧರಣಿ ನಡೆಯುತ್ತಿದ್ದು ಇಂದು ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಭೇಟಿ ನೀಡಿ ಆಹೋರಾತ್ರಿ ಧರಣಿ ಕೊನೆಗೊಂಡಿದೆ.

ಇದೇ ವೇಳೆ ಆಹೋರಾತ್ರಿ ಸತ್ಯಾಗ್ರಹ ಕುರಿತು ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸತತ ನಾಲ್ಕು ವರ್ಷದಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಪರಿಸರ ಫಲವತ್ತಾದ ಕೃಷಿ ಭೂಮಿ ವ್ಯವಸಾಯಕ್ಕೆ ಬಾರದಂತೆ ಹಾಳಾಗಿದೆ ತೆಂಗು ಅಡಿಕೆ ಇತರೆ ಬೆಳೆಗಳು ಬಾರದೆ ಹಾಳಾಗುತ್ತಿದ್ದು ಗಣಿಗಾರಿಕೆ ಧೂಳಿನಿಂದ ಗಾಳಿ ನೀರು ಪರಿಸರ ಕಲುಷಿತಗೊಂಡಿದ್ದು ಜನ ಜಾನುವಾರಗಳ ಮೇಲೆ ದುಷ್ಪರಿಣಾಮ ಬೀರಿ ಗಂಭೀರ ವಾತಾವರಣ ಜೊತೆಗೆ ಕೋಳಘಟ್ಟ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಸ್ಥರಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆಯಲ್ಲಿ ಬಳಸುತ್ತಿರುವ ಅತಿ ಶಬ್ದ ಪಡಿಸುವಂತಹ ಸಿಡಿಮದ್ದಿನ ಶಬ್ದದಿಂದ ವಾಸದ ಮನೆಗಳು ಬಿರುಕು ಬಿಡುವಂತಹ ಜೊತೆಗೆ ಕೊಳವೆ ಬಾವಿಗಳ ಅಂತರ್ಜಲ ಕಡಿಮೆಯಾಗಿ ಪ್ರಾಣಿ ಪಕ್ಷಿಗಳು ತೊಂದರೆ ಅನುಭವಿಸುವಂತಾಗಿದ.

Turuvekere: ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.

Turuvekere: ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.

ಇನ್ನೂ ಗಣಿ ಮಾಲೀಕನಿಂದ ರೈತನ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದ್ದು ಗ್ರಾಮಸ್ಥರ ಮೇಲೆ ಪೊಲೀಸರು ಸುಳ್ಳು ಮೊಗದ್ದಮೆ ಹೂಡುತ್ತಿದ್ದಾರೆ ಇದರಿಂದ ಗ್ರಾಮಸ್ಥರಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ, ರೈತರು ಮತ್ತು ಜನಸಾಮಾನ್ಯರಿಗೆ ಮಕ್ಕಳಿಗೆ ಇದು ಮರಣ ಶಾಸನವಾಗಲಿದೆ ಇದಕ್ಕೆ ಸಂಬಂಧಪಟ್ಟಂತೆ ಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆ ನಾನು ಚರ್ಚಿಸುತ್ತೇನೆ ಎಂದು ಹೇಳಿ ಈಗಾಗಲೇ ಜಿಲ್ಲಾಧಿಕಾರಿಯವರು ತಾತ್ಕಾಲಿಕವಾಗಿ ಸ್ಥಗಿತಿಗೊಳಿಸಿರುವ ಈ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದು ಒತ್ತಾಯ ಮಾಡುತ್ತೇನೆ ಇದಲ್ಲದೆ ತಾಲೂಕಿನ ಶಾಸಕರು ಇದರ ಬಗ್ಗೆ ಗಮನಹರಿಸಬೇಕು ಎಂದರು.

ಮುಂದುವರೆದು ಮಾತನಾಡಿದ ಅವರು ಸ್ಥಳದಲ್ಲಿದ್ದ ತುರುವೇಕೆರೆ ತಾಲೂಕು ದಂಡಾಧಿಕಾರಿಯಾದ ಅಹಮದ್ ಅವರನ್ನು ಕರೆಯಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದು ತಹಸಿಲ್ದಾರ್ ಅಹಮದ್ ಅವರ ಮುಖಾಂತರ ಸ್ಥಳೀಯ ರೈತ ಮುಖಂಡರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಿದರು.

ಇದಲ್ಲದೆ ಇದೆ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ಅವರು ತಹಶೀಲ್ದಾರ್ ರವರನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳ ಗೋಮಾಳವಾಗಿದ್ದು ಪಕ್ಕದಲ್ಲಿ ಕೆರೆಯು ಕೂಡ ಇದ್ದು ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಬಾಯಾರಿಕೆಯನ್ನು ನೀಗಿಸುವಂತಹ ಸ್ಥಳವಾಗಿದ್ದು ಈ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೊಡಬಹುದೇ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅಹಮದ್ ಅವರು ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಗೋಮಾಳದ ಜಮೀನಾಗಿದ್ದು ಈ ಹಿಂದೆ 49/1ರಲ್ಲಿ 49/2 ನಂಬರಿನ ಎರಡು 2 ಎಕರೆ ಜಮೀನನ್ನು ರೈತಾಪಿ ವರ್ಗದ ಬಡ ಕುಟುಂಬ ಎಂಬ ಕಾರಣಕ್ಕೆ, ಮಹಾಲಿಂಗಪ್ಪ ಎಂಬುವರಿಗೆ ಸರ್ವೆ ನಂಬರ್ 55 ರಲ್ಲಿ ಎರಡು ಎಕರೆ ಶಿವನಂಜಪ್ಪ ಎಂಬುವರಿಗೆ ದುಡಿಮೆ ಮಾಡಿಕೊಳ್ಳಲು ಜಮೀನನ್ನು ಮಂಜೂರು ಮಾಡಲಾಗಿತ್ತು.

ದುಡಿಮೆ ಮಾಡಿಕೊಳ್ಳಲು ಕೊಡಲಾಗಿದ್ದ ಈ ಜಮೀನನ್ನು ಅನುಭವದಾರರು ಮಂಡ್ಯ ಜಿಲ್ಲೆಯ,ರಾಜು ಕೆ. ಬಿನ್ ಲೇಟ್ ಕೆ ಬಿ ಕೆಂಪೇಗೌಡ ಎಂಬುವರಿಗೆ 20 ವರ್ಷಕ್ಕೆ ಅವರಿಗೆ ಮಂಜೂರಾಗಿರುವ ಜಮೀನನ್ನು ಗಣಿಗಾರಿಕೆ ಮಾಡಿಕೊಳ್ಳಲು ಗುತ್ತಿಗೆ ನೀಡಿರುವುದನ್ನು ವಿವರವಾಗಿ ತಿಳಿಸಿದರು.

ಮುಂದುವರೆದು ಮಾತನಾಡಿದ ತಹಶೀಲ್ದಾರ್ ಇದಲ್ಲದೆ ಈ ಹಿಂದೆ ಕಲ್ಲು ಗಣಿಗಾರಿಕೆಯನ್ನು ಜಿಲ್ಲಾಧಿಕಾರಿಯವರು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು ಗಣಿ ಮಾಲೀಕ ಕೋರ್ಟ್ ಮೊರೆ ಹೋಗಿ ಅನುಮತಿ ಪಡೆದು ಮತ್ತೆ ಗಣಿಗಾರಿಕೆಯನ್ನು ಚಾಲನೆ ಗೊಳಿಸಿದ್ದರು ಮತ್ತೆ ಧರಣಿ ನಿರತ ರೈತರೊಂದಿಗೆ ಚರ್ಚಿಸಿ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಕಲೆಹಾಕಿ ಸ್ಥಳ ಪರಿಶೀಲನೆ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಮತ್ತು ಕಂದಾಯ ಇಲಾಖೆಯ ನಿಯಮಗಳ ಉಲ್ಲಂಘನೆ ಮಾಡಿ ಗಣಿಗಾರಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ಗುತ್ತಿಗೆ ಪ್ರದೇಶದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ವರದಿಯನ್ನು ಸಲ್ಲಿಸುವವರೆಗೂ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ನಾವೇ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರಂತೆ ಜಿಲ್ಲಾಧಿಕಾರಿಯವರು ತಾತ್ಕಾಲಿಕವಾಗಿ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ನಿನ್ನೆಯಷ್ಟೇ ಆದೇಶಿಸಿದ್ದಾರೆ ಎಂದರು.

ಹಾಗಾದರೆ ಗೋಮಾಳ ಜಮೀನಿನಲ್ಲಿ ಉಳುಮೆ ಮಾಡಿಕೊಳ್ಳಲು ಈ ಹಿಂದೆ ರೈತರಿಗೆ ಜಮೀನು ಮಂಜೂರು ಮಾಡಿರುವುದು ತಪ್ಪಾ? ಅಥವಾ ಮಂಜೂರು ಮಾಡಿರುವ ಜಮೀನನ್ನು ಕಲ್ಲು ಗಣಿಗಾರಿಕೆಗೆ 20 ವರ್ಷಗಳ ಕಾಲ ಗುತ್ತಿಗೆ ಮಂಜೂರು ಮಾಡಿರುವುದು ಸರಿಯಾ? ಎಂಬ ಪ್ರಶ್ನೆ ಈಗ ಕಾಡತೊಡಗಿದೆ ಒಟ್ಟಾರೆ ಈ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಜಮೀನನ್ನು ಮತ್ತೆ ರೈತ ವಾಪಸ್ ಪಡೆದು ತನ್ನಲ್ಲಿ ಉಳಿಸಿಕೊಳ್ಳುತ್ತಾರೋ ಅಥವಾ ಸರ್ಕಾರ ಕಲ್ಲು ಗಣಿ ಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬಹುದೇ ಎಂಬುದೇ ಒಂದು ಪ್ರಶ್ನೆಯಾಗಿ ಉಳಿದಿದೆ.

 

ಇದೇ ಸಂದರ್ಭದಲ್ಲಿ ಕೋಳಘಟ್ಟ ಗ್ರಾಮದ ಸುತ್ತಮುತ್ತಲಿನ ರೈತ ಮುಖಂಡರು, ರೈತಾಪಿ ವರ್ಗದವರು ವಿವಿಧ ತಾಲೂಕಿನಿಂದ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರುಗಳು, ಮಹಿಳಾ ಪದಾಧಿಕಾರಿಗಳು, ಪೊಲೀಸ್ ಇಲಾಖೆ, ದಲಿತ ಸಂಘರ್ಷ ಸಮಿತಿ, ವಿವಿಧಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ .

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *