Janataa24 NEWS DESK
Gubbi: ತುಮಕೂರು ಜಿಲ್ಲೆಯ ಹೆಸರು ತುಮಕೂರು ಎಂದೇ ಉಳಿಯಲಿ– ಶಾಸಕ ಎಸ್ ಆರ್ ಶ್ರೀನಿವಾಸ್.

ಗುಬ್ಬಿ: ಗೃಹ ಸಚಿವ ಜಿ ಪರಮೇಶ್ವರ್ ಅವರು ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಆದರೆ ತುಮಕೂರು ತುಮಕೂರು ಹಾಗೆ ಉಳಿಯಲಿ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಡಬ ಹೋಬಳಿಯ ಪುರ ಕಾಲೋನಿ, ಬೆಲವತ್ತ, ಅತಿಕಟ್ಟೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ
ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಮಾಡುವ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ ಪರಮೇಶ್ವರ್ ಅವರು ಪ್ರಸ್ತಾಪ ಮಾಡಿದ್ದಾರೆ ಆದರೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕಾಗುತ್ತದೆ. ಈ ವಿಚಾರವು ಚರ್ಚೆಯ ಹಂತದಲ್ಲಿದೆ. ಈಗಾಗಲೇ ತುಮಕೂರು ಕೈಗಾರಿಕಾ ಕಾರಿಡರ್ ಅಭಿವೃದ್ಧಿ ಆಗುತ್ತಿದ್ದು ದೇಶದ ಗಮನ ಸೆಳೆಯುತ್ತಿದೆ.ತುಮಕೂರು ತುಮಕೂರು ಹಾಗೆ ಉಳಿಯಲಿ ಬೆಂಗಳೂರು ಉತ್ತರ ಆಗುವುದು ಬೇಡ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಸರ್ಕಾರ ಜಾತಿ ಗಣತಿಯನ್ನು ಘೋಷಣೆ ಮಾಡಿದ್ದು ಇದನ್ನು ನಾನು ಸ್ವಾಗತಿಸುತ್ತೇನೆ, ಜಾತಿ ಗಣತಿ ಮಾಡುವುದರಿಂದ ಎಲ್ಲ ಸಮಾಜಗಳಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಧ್ಯವಾಗುತ್ತದೆ. ಹಲವು ಗೊಂದಲಗಳು ಸೃಷ್ಟಿಯಾಗಿದ್ದವು ಹಿಂದೆ ಮಾಡಿದ ಕಾಂತರಾಜ್ ಆಯೋಗದ ವರದಿಯು ಮನೆಮನೆಗೆ ಭೇಟಿ ಮಾಡಿ ಗಣತಿ ಮಾಡಿರಲಿಲ್ಲ. ಈಗ ಸರಿಯಾದ ಮಾರ್ಗದಲ್ಲಿ ಮನೆ ಮನೆಗೆ ತೆರಳಿ ಗಣತಿಯನ್ನು ಮಾಡುವುದರಿಂದ ನಿಖರ ದತ್ತಾಂಶ ದೊರೆಯುತ್ತದೆ ಇದರಿಂದ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ದಯಾನಂದ್ ಹಾಗೂ ಸದಸ್ಯರು, ನಿಟ್ಟೂರು ಶಂಕರಾನಂದ, ರಾಜಶೇಖರ್, ಅತ್ತಿಕಟ್ಟೆ ಚೇತನ್,ಹಲವು ಮುಖಂಡರು ,ಗ್ರಾಮಸ್ಥರು ಹಾಜರಿದ್ದರು.
ವರದಿ:ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.