Document

Turuvekere: ಶ್ರೀ ಮುನೀಶ್ವರ ಗುರುಕುಲ ವಿದ್ಯಾ ಮಂದಿರದ ದಶಮಾನೋತ್ಸವ ಸಮಾರಂಭಕ್ಕೆ ಕ್ಷಣಗಣನೆ.

 

Janataa24 NEWS DESK

 

 

Turuvekere: ಶ್ರೀ ಮುನೀಶ್ವರ ಗುರುಕುಲ ವಿದ್ಯಾ ಮಂದಿರದ ದಶಮಾನೋತ್ಸವ ಸಮಾರಂಭಕ್ಕೆ ಕ್ಷಣಗಣನೆ.
Turuvekere: ಶ್ರೀ ಮುನೀಶ್ವರ ಗುರುಕುಲ ವಿದ್ಯಾ ಮಂದಿರದ ದಶಮಾನೋತ್ಸವ ಸಮಾರಂಭಕ್ಕೆ ಕ್ಷಣಗಣನೆ.

ತುರುವೇಕೆರೆ: ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿರುವ ಸುಕ್ಷೇತ್ರ ಮುನೇಶ್ವರ ನಗರದ ಶ್ರೀ ಮುನೇಶ್ವರ ಗುರುಕುಲ ವಿದ್ಯಾ ಮಂದಿರ ಶಾಲಾ ದಶಮಾನೋತ್ಸವ ಸಮಾರಂಭ ದಿನಾಂಕ 20.05.2025 ಮಂಗಳವಾರ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯನ್ನು ಶ್ರೀ ಮುನೇಶ್ವರ ಗುರುಕುಲ ವಿದ್ಯಾ ಮಂದಿರದಲ್ಲಿ ಕ್ಷೇತ್ರ ಸಂಸ್ಥಾಪಕರಾದ ಸಿ ಎ ಶಿವಪ್ಪ ಇವರ ನೇತೃತ್ವದಲ್ಲಿ ನಡೆಸಲಾಯಿತು. ದಶಮಾನೋತ್ಸವ ಸಂಭ್ರಮದ ಅಂಗವಾಗಿ ಮುನಿಶ್ರೀ ದೀಪ್ತಿ ರತ್ನ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಪವಿತ್ರಧಾಮ ಸುಕ್ಷೇತ್ರ ಮುನೇಶ್ವರ ನಗರ ಚಿಮ್ಮನಹಳ್ಳಿಯಲ್ಲಿ ಶ್ರೀ ಮುನೇಶ್ವರ ಸ್ವಾಮಿ ಚಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಶ್ರೀ ಮುನೇಶ್ವರ ಗುರುಕುಲ ವಿದ್ಯಾ ಮಂದಿರವು ತನ್ನ ದಶಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಇದೇ ತಿಂಗಳು 20ನೇ ಮಂಗಳವಾರದಂದು ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಈ ಕಾರ್ಯಕ್ರಮದಲ್ಲಿ ಮಹತ್ವಪೂರ್ಣ ಮುನಿಶ್ರೀ ದೀಪ್ತಿ ರತ್ನ ಎಂಬ ಹೆಸರಿನಲ್ಲಿ ಸಂಸ್ಥೆಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಳ ದಾಖಲಾತಿಯೊಂದಿಗೆ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ.

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ನೀಡುವ ನಿಟ್ಟಿನಲ್ಲಿ ಗುರುಕುಲದ ಪ್ರಯತ್ನಗಳು ಈ ಸಂಚಿಕೆಯ ಮುಖಾಂತರ ಹೊರ ಹೊಮ್ಮಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದಂತ ಕೆ ಎಚ್ ಮುನಿಯಪ್ಪ ಅವರು ಉದ್ಘಾಟಿಸಲಿದ್ದು, ದಿವ್ಯ ಸಾನಿಧ್ಯವನ್ನು ಮಾಗಡಿ ತಾಲೂಕಿನ ಶ್ರೀ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಶ್ರೀ ಶ್ರೀ ಸಿದ್ದರಾಜು ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ವಹಿಸಿ, ಸ್ಮರಣ ಸಂಚಿಕೆಯನ್ನು ಡಾ. ಹರೀಶ್ ಕುಲಾಧಿಪತಿಗಳು, ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಬೆಂಗಳೂರು, ಇವರು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ ಇದರ ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮುಡ್ಬಿ, ಭಾರತ ಸರ್ಕಾರದ ಐ ಆರ್ ಎಸ್ ನಿವೃತ್ತ ಅಧಿಕಾರಿ, ಭೀಮಶಂಕರ್, ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸಾರಿಗೆ ಇಲಾಖೆಯ ಆಲೂರಿನ ಚಿನ್ನಸ್ವಾಮಿ,

ಬೆಂಗಳೂರಿನ ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಮುಖ್ಯ ಮಾಹಿತಿ ಅಧಿಕಾರಿ, ಮಧು ಕಿರಣ್ ಇವರುಗಳಿಗೆ ಗೌರವಿಸಿ ಹಾಗೂ ವಿಜಯ್ ಪದ್ಮನಾಬ್ ಆಧ್ಯಾತ್ಮಿಕ ಚಿಂತಕರು ಹಾಗೂ ಮೋದಿ ವಿಚಾರ್ ಮಂಚ್, ಸಮಾಜ ಸೇವಕರು ಬೆಂಗಳೂರು,ವಿದ್ವಾನ್ ಶ್ರೀನಿವಾಸ್ ಮೂರ್ತಿ ಮೈಸೂರು ಶ್ರೀ ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರು, ಎಂ ಆರ್ ಜಯರಾಮ್ ಮುಖ್ಯ ಲೆಕ್ಕಾಧಿಕಾರಿಗಳು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಬೆಂಗಳೂರು, ಕೆ ಸಿ ನರಸಿಂಹಮೂರ್ತಿ ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತ್ ತುಮಕೂರು.

ಇವರುಗಳಿಗೆ *ಮುನಿಶ್ರೀ ದೀಪ್ತಿ ರತ್ನ*ಪ್ರಶಸ್ತಿಯನ್ನು ನೀಡಲಾಗುವುದು ಈ ಎಲ್ಲಾ ಕಾರ್ಯಕ್ರಮಗಳು ಮಹಾಮಹಿಮ ಶ್ರೀ ಮುನೇಶ್ವರ ಸ್ವಾಮಿ ದಾಸೋಹ ಮಠದ ಆಶ್ರಯದಲ್ಲಿ ನಡೆಯಲಿದೆ ಹಾಗಾಗಿ ಸರ್ವರಿಗೂ ಆತ್ಮಪೂರ್ವಕ ಸ್ವಾಗತ ಕೋರುತ್ತಾ, ಈ ಶಾಲಾ ದಶಮಾನೋತ್ಸವದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನದ ಜೊತೆಗೆ *ಶ್ರೀ ಅಪರ್ಣಾದೇವಿ ಪುಷ್ಕರಣಿ*ಮತ್ತು ವಿದ್ಯಾರ್ಥಿನಿಲಯದ ಶೀಲನ್ಯಾಸ ಸಮಾರಂಭ ಕೂಡ ಇದೆ ಎಂದು ಕ್ಷೇತ್ರ ಸಂಸ್ಥಾಪಕರಾದ ಸಿ ಎ ಶಿವಯ್ಯ ಅವರು ಮಾಧ್ಯಮದ ಮುಖೇನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಇದೇ ವೇಳೆ ಕುಣಿಗಲ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ಅಧಿಕಾರಿ ಕುಮಾರ್ ಮಾತನಾಡಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಶ್ರೀ ಮುನೇಶ್ವರ ಸ್ವಾಮಿ ಚಾರಿಟಿ ಅಂಡ್ ಎಜುಕೇಶನ್ ಟ್ರಸ್ಟ್, CBSE ಶಿಲಾಬಸ್ ಹೊಂದಿದ್ದು ತಾಲೂಕಿಗೆ ಎರಡನೆಯದಾಗಿದೆ, ಇದಲ್ಲದೆ ನಮ್ಮ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಟ್ರಸ್ಟ್ನಲ್ಲಿ , ನರ್ಸರಿ, ಎಲ್ ಕೆ ಜಿ, ಯುಕೆಜಿ, ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ನೋಟ್ ಪುಸ್ತಕ, ಟೆಕ್ಸ್ಟ್ ಬುಕ್, ಉಚಿತವಾಗಿ ನೀಡುತ್ತಿದೆ, ಜೊತೆಗೆ ಡಿಜಿಟಲ್ ಶಿಕ್ಷಣ ಕೂಡ ಲಭ್ಯವಿದ್ದು,

 

ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟ ಹಾಗೂ ಸಂಜೆಯ ವೇಳೆ ಲಘು ಉಪಹಾರ ಸಹ ಇದ್ದು ಇದಕ್ಕಾಗಿ ಯಾವುದೇ ವೆಚ್ಚವನ್ನು ಈ ಟ್ರಸ್ಟ್ ವಿಧಿಸುವುದಿಲ್ಲ, ಈಗಾಗಲೇ ಈ ಶಾಲೆಯಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿಯೊಂದು ಗ್ರಾಮದಿಂದಲೂ ವಿದ್ಯಾರ್ಥಿಗಳನ್ನು ಕರೆತರಲು ವಾಹನದ ವ್ಯವಸ್ಥೆ ಸಹ ಇದೆ ಇದಲ್ಲದೆ ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಅತಿ ಶೀಘ್ರದಲ್ಲಿ ಕಲ್ಪಿಸಿಕೊಡಲಾಗುವುದು, ಇದರ ಕಟ್ಟಡ ನಿರ್ಮಾಣಕ್ಕಾಗಿ ಕಾರ್ಯಕ್ರಮದಂದು ಶಂಕುಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಕೆಯ ಜಂಟಿ ನಿರ್ದೇಶಕರಾದ ಡಾ.ಮಂಟೆಸ್ವಾಮಿ, ತುರುವೇಕೆರೆ ತಾಲೂಕಿನ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಆದ ಕುಂ ಈ ಅಹಮದ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಎನ್ ಆಗಮಿಸಲಿದ್ದಾರೆ ಎಂದರು.

 

ಒಟ್ಟಾರೆ ಶೈಕ್ಷಣಿಕವಾಗಿ ಗ್ರಾಮಾಂತರ ಭಾಗದಲ್ಲಿ ಶ್ರೀ ಮುನೇಶ್ವರ ಸ್ವಾಮಿ ಚಾರಿಟಿ ಅಂಡ್ ಎಜುಕೇಶನ್ ಟ್ರಸ್ಟ್ ಗ್ರಾಮಾಂತರ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರ ಮೂಲಕ ಮುನ್ನಡೆಯುತ್ತಿದೆ, ಇಂತಹ ಶಿಕ್ಷಣ ಟ್ರಸ್ಟಿಗೆ ಮಾರ್ಗ ಕಲ್ಪಿಸುವ ರಸ್ತೆ ಮಾತ್ರ ಹದಗೆಟ್ಟಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆ ಈ ಟ್ರಸ್ಟ್ ಗ್ರಾಮಾಂತರ ಭಾಗದಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈಗಲಾದರೂ ಅತ್ತ ಕಡೆ ಗಮನಹರಿಸಿ ದಿನನಿತ್ಯ ಶಾಲೆಗೆ ವಿದ್ಯಾರ್ಥಿಗಳು ಸಂಚರಿಸುವ ವಾಹನಗಳಿಗೆ ಉತ್ತಮವಾದ ರಸ್ತೆಯನ್ನು ಕಲ್ಪಿಸಿ ಕೊಡುತ್ತದೆಯೇ ಎಂದು ಕಾದುನೋಡಬೇಕು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರಜ್ವಲ್, ಪ್ರಾಂಶುಪಾಲರಾದ ನಾಗೇಶ್, ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ್, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ವರ್ಗ,ಬಡಾವಣೆ ಶಿವರಾಜ್, ಸೋಮೇನಹಳ್ಳಿ ಆಕಾಶ್, ಗುಡ್ಡೆನಹಳ್ಳಿ ಶಶಿಕುಮಾರ್, ಇನ್ನು ಹಲವರು ಉಪಸ್ಥಿತರಿದ್ದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *