Document

Caste Census: ಜಾತಿಗಣತಿ-ಜನಗಣತಿ ಗೆ ಅಸ್ತು ಎಂದ ನರೇಂದ್ರ ಮೋದಿ.

Janataa24 NEWS DESK 

Caste Census: ಜಾತಿಗಣತಿ-ಜನಗಣತಿ ಗೆ ಅಸ್ತು ಎಂದ ನರೇಂದ್ರ ಮೋದಿ.

Caste Census: ಜಾತಿಗಣತಿ-ಜನಗಣತಿ ಗೆ ಅಸ್ತು ಎಂದ ನರೇಂದ್ರ ಮೋದಿ.

ನವದೆಹಲಿ: ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ದೇಶಾದ್ಯಂತ ಜಾತಿ ಗಣತಿ ಮತ್ತು ಜನಗಣತಿ ಮಾಡಲು ನಿರ್ಧಾರ ಮಾಡಿದೆ.

 

ರಾಜಕೀಯ ವ್ಯವಹಾರಗಳ ಸಚಿವ ಸಂಪುಟ (Cabinet Committee on Political Affairs) ಸಭೆ ಬಳಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಟಿ ನಡೆಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಅಂತೆಯೇ ಕೇಂದ್ರ ಸರ್ಕಾರವೇ ದೇಶದಲ್ಲಿ ಸರ್ವೇ ನಡೆಸಿ ಜಾತಿಗಣತಿ ಮತ್ತು ಜನಗಣತಿಯನ್ನು ನಡೆಸಲಿದೆ.

 

ಜಾತಿಗಣತಿ ಘೋಷಣೆ ವೇಳೆ ಕೇಂದ್ರ ಸಚಿವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ 1947 ರಿಂದ ಜಾತಿ ಗಣತಿ ನಡೆದಿಲ್ಲ. ಅದಕ್ಕೆ ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಕೇವಲ ಜಾತಿ ಸಮೀಕ್ಷೆ ಮಾಡಿದೆ. ಅದು ಕೂಡ ರಾಜಕೀಯ ಉದ್ದೇಶದಿಂದ. ಅನೇಕ ರಾಜ್ಯದಲ್ಲಿ ಜಾತಿ ಸಮೀಕ್ಷೆಗಳು ರಾಜಕೀಯ ಉದ್ದೇಶಕ್ಕೆ ನಡೆದಿವೆ ಎಂದು ಆರೋಪಿಸಿದರು.

 

ಅಲ್ಲದೇ ಜಾತಿ ಗಣತಿಯ ಮೂಲವನ್ನು ಜನಗಣತಿಯಲ್ಲೇ ಸೇರಿಸಬೇಕು. ಈ ಬಗ್ಗೆ ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

 

Caste Census: ಕೇಂದ್ರದ ಜಾತಿ ಜನಗಣತಿ ನಿರ್ಧಾರವನ್ನ ಸ್ವಾಗತ ಮಾಡ್ತೇನೆ– ರಾಹುಲ್ ಗಾಂಧಿ.

 

ಕೇಂದ್ರ ಸರ್ಕಾರದ ಜಾತಿ ಜನಗಣತಿ (Caste Census) ನಿರ್ಧಾರ ತಡವಾದರೂ ನಾನು ಇದನ್ನೂ ಸ್ವಾಗತ ಮಾಡುತ್ತೇನೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.

 

ದೆಹಲಿಯಲ್ಲಿ (Delhi) ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ಸಮಯದಲ್ಲೇ ಜಾತಿ ಜನಗಣತಿ ಯಾಕೆ ಘೋಷಣೆ ನಿರ್ಧಾರ ಯಾಕೆ ಮಾಡಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇದು ಜನರ ಜಾತಿಗಣತಿ ಆಗಬೇಕು, ಅಧಿಕಾರಿಗಳ ಗಣತಿ ಆಗಬಾರದು. ಇದನ್ನು ಹೇಗೆ ಮಾಡ್ತಾರೆ ಎಂದು ಹೇಳಬೇಕು ಎಂದರು.

 

ಪ್ರಧಾನಿ ಮೋದಿ ಅವರು ಕೇವಲ 4 ಜಾತಿಗಳು ಎಂದಿದ್ದರು. ಈಗ ಏಕಾಏಕಿ ಜಾತಿಗಣತಿ ಬಗ್ಗೆ ಘೋಷಣೆ ಮಾಡಿದ್ದಾರೆ. ಕೇವಲ ಮೀಸಲಾತಿ ಪ್ರಾಮುಖ್ಯತೆ ನೀಡುವುದಲ್ಲ. ಪ್ರತಿಯೊಬ್ಬರಿಗೆ ನ್ಯಾಯ ಸಿಗುವಂತೆ ಮಾಡಬೇಕಾಗಿದೆ ಹೇಳಿದರು.

 

ಜಾತಿಗಣತಿ ಹಾಗೂ ಜನಗಣತಿಗೆ ಅವಧಿ, ಸಮಯ ನಿರ್ಧಾರ ಮಾಡಬೇಕು. ಬಜೆಟ್‌ನಲ್ಲಿ ಹಣವನ್ನು ನಿಗದಿಪಡಿಸಬೇಕು. ಬಜೆಟ್‌ನ್ನು ಹಣ ತೆಗೆದಿರಿಸುವ ಬಗ್ಗೆ ಮಾಹಿತಿ ನೀಡಬೇಕು. ನಮ್ಮ ಆಗ್ರಹ, ಒತ್ತಡಕ್ಕೆ ಪ್ರಧಾನಿ ಮೋದಿ ಅವರು ಸ್ಪಂದಿಸಿದಕ್ಕೆ ಅವರಿಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.

ನಮ್ಮ ಪಕ್ಷ ಸಮೀಕ್ಷೆಗೆ ಆಗ್ರಹಿಸಿ ದೇಶದಲ್ಲೆಡೆ ಅಭಿಯಾನ ಆರಂಭಿಸಿದ್ದೆವು. ಜಾತಿಗಣತಿಯಿಂದಾಗಿ ಅಭಿವೃದ್ದಿಗೆ ಹಲವು ದಾರಿಗಳು ತೆರಯುತ್ತವೆ. ಕರ್ನಾಟಕದ ಜಾತಿಗಣತಿ ಮುಂದಿನ ದಿನಗಳಲ್ಲಿ ಮಾದರಿಯಾಗಲಿದೆ. ಪ್ರಧಾನಿ ಮೋದಿ ಕೈಗೊಂಡ ನಿರ್ಧಾರ ಮಹತ್ವದಾಗಿದೆ ಎಂದರು.

 

ದಲಿತರು ಆದಿವಾಸಿಗಳಿಗೆ ಅವಕಾಶ ಸಿಗುತ್ತಿಲ್ಲ. 90% ಜನರು ಅವಕಾಶ ವಂಚಿತರಿದ್ದಾರೆ. ಗಿಗ್ ವರ್ಕರ್‌ಗಳಿಗೆ ನಾವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾನೂನು ತರುತ್ತಿದ್ದೇವೆ ಎಂದು ತಿಳಿಸಿದರು.

 

ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಮೃತಪಟ್ಟವರ ಮನೆಗಳಿಗೆ ತೆರಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ್ದೇನೆ. ಉಗ್ರರು (Terrorists) ಮಾನವೀಯತೆ ಇಲ್ಲದೇ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ. ಇದು ಹೇಗೆ ಆಯ್ತು ಅಂತಾ ಕೇಳಲ್ಲ. ಯಾರು ಇದನ್ನು ಮಾಡಿದ್ದಾರೆ. ಎಲ್ಲಿದ್ದಾರೆ, ಯಾರೇ ಆಗಿದ್ದರು ಅವರಿಗೆ ಸೂಕ್ತ ತಿರುಗೇಟು ನೀಡಬೇಕು. ಭಾರತದ ಜೊತೆಗೆ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ನೆನಪಿರಬೇಕು ಎಂದರು.

 

ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಪಕ್ಷಗಳ ಸಭೆಯಲ್ಲಿ ನಾವು ಹೇಳಿದ್ದೇವೆ. ವಿಪಕ್ಷಗಳು ಸರ್ಕಾರಕ್ಕೆ 100% ಬೆಂಬಲ ನೀಡಿದ್ದೇವೆ. ನರೇಂದ್ರ ಮೋದಿ (Narendra Modi) ಅವರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಕೃತ್ಯ ಮಾಡಿದವರು ಬೆಲೆ ತೆರಬೇಕು. ಇದನ್ನು ಸಂತ್ರಸ್ತರ ಕುಟುಂಬ ಸಂದೇಶ ನೀಡಲು ಹೇಳಿದ್ದಾರೆ. ದಾಳಿಯಲ್ಲಿ ಮೃತರಾದವರಿಗೆ ಹುತಾತ್ಮರ ದರ್ಜೆ, ಗೌರವ ನೀಡಬೇಕು ಎಂದು ಕೇಂದ್ರಕ್ಕೆ ಆಗ್ರಹಿಸಿದರು.

 

ಮೋದಿ ಅವರು ಸಮಯ ವ್ಯರ್ಥ ಮಾಡಬಾರದು. ಇಂತಹ ದಾಳಿಗಳನ್ನು ಸಹಿಸಲ್ಲ ಎನ್ನುವ ಸಂದೇಶ ನೀಡಬೇಕು. ಗೊಂದಲಗಳಲ್ಲಿ ನಿರ್ಧಾರ ಕೈಗೊಳ್ಳಬಾರದು. ಸ್ಪಷ್ಟವಾದ ನಿಲುವು ತೆಗೆದುಕೊಳ್ಳಬೇಕು. ಉಗ್ರರ ದಾಳಿ ವಿರುದ್ಧ ಪ್ರಧಾನಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅವರ ಎಲ್ಲಾ ನಿರ್ಧಾರಕ್ಕೂ ವಿಪಕ್ಷಗಳು ಕೈಜೋಡಿಸುತ್ತೇವೆ ಎಂದು ಬೆಂಬಲ ಸೂಚಿಸಿದರು.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *