Document

Turuvekere: ದಲಿತ ಹೋರಾಟ ಹುಟ್ಟು ಹಾಕಿದ ಪ್ರೊಫೆಸರ್ ಬಿ.ಕೃಷ್ಣಪ್ಪ ಅವರ 22ನೇ ವರ್ಷದ ಪುಣ್ಯ ಸ್ಮರಣೆ .

Janataa24 NEWS DESK 

 

Turuvekere: ದಲಿತ ಹೋರಾಟ ಹುಟ್ಟು ಹಾಕಿದ ಪ್ರೊಫೆಸರ್ ಬಿ.ಕೃಷ್ಣಪ್ಪ ಅವರ 22ನೇ ವರ್ಷದ ಪುಣ್ಯ ಸ್ಮರಣೆ .

 

Turuvekere: ದಲಿತ ಹೋರಾಟ ಹುಟ್ಟು ಹಾಕಿದ ಪ್ರೊಫೆಸರ್ ಬಿ.ಕೃಷ್ಣಪ್ಪ ಅವರ 22ನೇ ವರ್ಷದ ಪುಣ್ಯ ಸ್ಮರಣೆ .

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ ) 47/74/75 ಸಂಘಟನೆ ವತಿಯಿಂದ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವರ ಕುಮಾರ್ ಮತ್ತು ತುರುವೇಕೆರೆ ತಾಲೂಕು ಸಂಚಾಲಕರಾದ ಮಲ್ಲೂರ್ ತಿಮ್ಮೇಶ್ ಇವರ ನೇತೃತ್ವದಲ್ಲಿ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು ಇದೇ ವೇಳೆ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನಶಿವರ ಕುಮಾರ್ ಮಾತನಾಡಿ,

ಪ್ರೊಫೆಸರ್ ಬಸಪ್ಪಕೃಷ್ಣಪ್ಪ (1938-1997) ಅವರು ಕನ್ನಡದಲ್ಲಿ ದಲಿತ ಸಾಹಿತ್ಯ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರು ಮತ್ತು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದವರು ನಂತರ ( ಕರ್ನಾಟಕದಲ್ಲಿ ಸಂಘರ್ಷ ಸಮಿತಿ ) ತೀವ್ರಗಾಮಿ ದಲಿತ ವಕೀಲರ ಗುಂಪು ಎಂದು ಹೆಸರಿಸಲಾಯಿತು ಅವರು ಪ್ರಾಂಶುಪಾಲರಾಗಿ ನಿವೃತ್ತರಾಗುವ ಮೊದಲು 30 ವರ್ಷಗಳ ಕಾಲ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯನವರ ಕಾಲೇಜಿನಲ್ಲಿ ಕಲಿಸಿದರು ಅವರನ್ನು ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕ ಎಂದು ಸಹ ಗುರುತಿಸಲಾಗಿದೆ.

 

ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಹೋರಾಟದ ನಂತರ ದಲಿತ ಸಮುದಾಯಕ್ಕೆ ಕೊಟ್ಟ ಸಂದೇಶ ನಾನು ಹೋರಾಟದ ಹಣತೆಯನ್ನು ಹಚ್ಚಿದ್ದೇನೆ ಇದನ್ನು ಎಂತಹ ದೊಡ್ಡ ಬಿರುಗಾಳಿ ಬಂದರು ಆರದಂತೆ ನೋಡಿಕೊಳ್ಳಿ ಎಂಬ ಸಂದೇಶವನ್ನು ಕೊಟ್ಟರು ಇವರು ಶೋಷಿತರ ಧ್ವನಿಯಾಗಿ ದೀನ ದಲಿತರ ಆಶಾಕಿರಣವಾಗಿ ಹೋರಾಟದ ಹೆಜ್ಜೆಗಳನ್ನು ಇಟ್ಟಿದ್ದರು ಎಂದರು.

 

ಇದೇ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಮಲ್ಲೂರು ತಿಮ್ಮೇಶ್, ದಲಿತ ಮುಖಂಡರುಗಳಾದ ಬೋರಪ್ಪ, ಮುನಿಯರು ರಂಗಸ್ವಾಮಿ, ಶಿವನಂಜಪ್ಪ, ಹಿರಿಯ ಮುಖಂಡರಾದ ಕೆಂಪಣ್ಣ, ಗೋವಿಂದಪ್ಪ, ಯುವ ಮುಖಂಡರಾದ ಗೋವಿಂದರಾಜು,ಯೋಗೇಶ್,ಶಿವರಾಜು ಇನ್ನು ಅನೇಕರು ಉಪಸ್ಥಿತರಿದ್ದರು….

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *