Document

SUMMER: ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಅಧಿಕಾರಿಗಳಿಗೆ ಸೂಚನೆ– ಎಸ್ ಆರ್ ಶ್ರೀನಿವಾಸ್.

Janataa24 NEWS DESK 

 

 

SUMMER: ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಅಧಿಕಾರಿಗಳಿಗೆ ಸೂಚನೆ– ಎಸ್ ಆರ್ ಶ್ರೀನಿವಾಸ್.

 SUMMER: ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಅಧಿಕಾರಿಗಳಿಗೆ ಸೂಚನೆ– ಎಸ್ ಆರ್ ಶ್ರೀನಿವಾಸ್.

ಗುಬ್ಬಿ : ಬೇಸಿಗೆ ಹತ್ತಿರ ಬರುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

 

ತಾಲ್ಲೂಕಿನ ಪಟ್ಟರಾವುತ್ತನಹಳ್ಳಿ ಹಾಗೂ ಚಿಕ್ಕಹೆಡಿಗೆಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ‌‌ ಹಾಗೂ ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು

 

ಈಗಾಗಲೇ ಅಧಿಕಾರಿಗಳಜೊತೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗುವ ಗ್ರಾಮಗಳನ್ನು ಮುಂಜಾಗ್ರತಾ ಕ್ರಮವಾಗಿ ಪಟ್ಟಿ ಮಾಡಲಾಗಿದೆ ಹಾಗೂ ಅಗತ್ಯವಿರುವ ಕೊಳವೆ ಬಾವಿಗಳಿಗೆ ಪಟ್ಟಿ ಮಾಡಿ ಮಂಜೂರು ಮಾಡಲು ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಾಗಿದೆ ಎಂದ ಅವರು

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಡ್ರೈವರ್ ಮತ್ತು ನಿರ್ವಹಕರುಗಳಿಗೆ ಕಪ್ಪುಮಸಿ ಬಳಿದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದರು.

ಈ ಸಂಬಂಧ ಸಮಸ್ಯೆ ಆಗದಂತೆ ಮಹಾರಾಷ್ಟ್ರದ ಸಚಿವರೊಂದಿಗೆ ಮಾತನಾಡಲಾಗಿದೆ ಈಗ ಯಾವುದೇ ಸಮಸ್ಯೆ ಬಾರದಂತೆ ಯಥಾ ಸ್ಥಿತಿಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಕಾರ್ಯಕ್ರಮಗಳಿಗೆ ಯಾರೆ ಕರೆದರೂ ಹೋಗಬೇಕಾಗುತ್ತದೆ. ಪಕ್ಷಬೇಧ ಮಾಡಬಾರದು ಡಿಕೆ ಶಿವಕುಮಾರ್ ರವರು ಮೊದಲಿನಿಂದಲೂಸಿದ್ದಾಂತ ಇಟ್ಟುಕೊಂಡು ಬದ್ಧತೆಯಿಂದ ರಾಜಕಾರಣ ಮಾಡುತ್ತ ಬಂದಿದ್ದಾರೆ. ವಿರೋಧ ಪಕ್ಷದವರು ಸುಮ್ಮನೆ ಗೂಬೆಕೂರಿಸುವ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ವಿದ್ಯುತ್ ಸಮಸ್ಯೆ ಇಡೀ ರಾಜ್ಯದಲ್ಲಿ ಉದ್ಭವಿಸಿದ್ದು

ಇದಕ್ಕೆ ಪೂರಕವಾಗಿ ಹೆಚ್ಚುವರಿ ಉಪಸ್ಥಾವರ ಘಟಕಗಳನ್ನು ಸ್ಥಾಪನೆ ಮಾಡಿ ರೈತರಿಗೆ ಸಮರ್ಪಕ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.

 

ಈ ಸಂದರ್ಭದಲ್ಲಿ ಪುಟ್ಟರಾಜು, ಟಿ ಜಿ ಲಿಂಗಪ್ಪ, ಮಂಜುನಾಥ್, ಬಸವರಾಜು, ಸೌಭಾಗ್ಯ, ದೊಡ್ಡಯ್ಯ, ವತ್ಸಲಾ ಕುಮಾರ್, ಸಿದ್ದರಾಜು, ಮಹಾಲಕ್ಷ್ಮಮ್ಮ , ಮಂಜುಳ, ಗಂಗಾಧರ್, ಸಿದ್ದರಾಜು, ಗುತ್ತಿಗೆದಾರ ಉಮೇಶ್ ಕೋದಂಡಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Document

Leave a Reply

Your email address will not be published. Required fields are marked *