Document

Turuvekere: ಅಂಬೇಡ್ಕರ್ ರವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಪ್ರತಿಭಟನೆ.

Janataa24 NEWS DESK 

 

Turuvekere: ಅಂಬೇಡ್ಕರ್ ರವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವರ ಪ್ರತಿಕೃತಿ ದಹನ ಮಾಡಿ ಬೃಹತ್ ಪ್ರತಿಭಟನೆ.
Turuvekere: ಅಂಬೇಡ್ಕರ್ ರವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಪ್ರತಿಭಟನೆ.

ತುರುವೇಕೆರೆ: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವಹೇಳನಕಾರಿ ಹೇಳಿಕೆಯಿಂದ ಆಕ್ರೋಶಗೊಂಡ ದಲಿತ ಸಮುದಾಯ ಇಂದು ತುರುವೇಕೆರೆ ಪಟ್ಟಣದ ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿವರೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಭೀಮೋತ್ಸವ ಸಮಿತಿ, ಛಲವಾದಿ ಮಹಾಸಭಾ, ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

 

 

ಈ ಸಂದರ್ಬದಲ್ಲಿ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ ದಲಿತ ನಾಯಕರು ಈ ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕು ಮತ್ತು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು‌‌ ಇದೆ ವೇಳೆ ಪಟ್ಟಣದ ಬಾಣಸಂದ್ರ ವ್ರತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಅವರ ಪ್ರತಿ ಕೃತಿ ದಹನ ಮಾಡಿ ಧಿಕ್ಕಾರ ಕೂಗುತ್ತಾ ನಂತರ ಪಾದಯಾತ್ರೆ ಮೂಲಕ ತಾಲೂಕು ಆಡಳಿತ ಕಾರ್ಯಾಲಯಕ್ಕೆ ಆಗಮಿಸಿ ಗ್ರೇಡ್ 2 ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

 

 

ಇದೇ ವೇಳೆ ಮಾತನಾಡಿದ ಡಿಎಸ್ಎಸ್ ಹಿರಿಯ ಮುಖಂಡ ಬೀಚನಹಳ್ಳಿ ರಾಮಣ್ಣ ಮಾತನಾಡಿ ಈಗಾಗಲೇ ಕೇಂದ್ರ ಸರ್ಕಾರ ಒಮ್ಮೆ ಸಂವಿಧಾನ ಬದಲಾವಣೆ ಮಾಡುತ್ತೆ ಎಂದು ತಿಳಿಸಿತ್ತು‌.ತದನಂತರ ಅದನ್ನು ತಿರಸ್ಕರಿಸುವ ಕೆಲಸ ಮಾಡಿತ್ತು ಈಗ ಕೇಂದ್ರ ಮಂತ್ರಿ ಅಮಿತ ಶಾಹ ಅವರು ಅಂಬೇಡ್ಕರ್ ಅವರ ಹೆಸರು ಹೇಳುವದು ವ್ಯಸನ ಎಂದು ಹೇಳಿದ್ದಾರೆ..ಅದು ನಮಗೆ ವೈಸನ ಅಲ್ಲಾ ಅದು ನಮಗೆ ಯಾವತ್ತು ಚಿರಸ್ಮರಣೀಯ ಎಂದು ತಿಳಿಯಬೇಕಾಗಿದೆ.ಇನ್ನು ಅಮಿತ ಶಾಹ ಅವರು ತಕ್ಷಣವೇ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಕರ್ನಾಟಕ ಬಂದ್ ಮಾಡಿ ರಾಜ್ಯ ವ್ಯಾಪ್ತಿ ಉಗ್ರವಾದ ಹೋರಾಟ ನಡೆಸಿ ಪ್ರತಿಭಟಿಸಲಾಗುವದು ಎಂದು ತಿಳಿಸಿದರು.

 

 

ಮುಂದುವರೆದು ತುರುವೇಕೆರೆ ತಾಲೂಕು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕರಾದ ಕೃಷ್ಣ ಮಾದರ್ ಮಾತನಾಡಿ ಭಾರತ ಭೂಮಿಯ ಆಸ್ಮಿತೆ ನೆನೆದ ಹಾಗೆ ಬಾಬಾ ಸಾಹೇಬರನ್ನು ನೆನೆಯುವುದು ಅಂದರೆ ಜೊತೆಗೆ ಸ್ಮರಿಸೋಕೆ ಒಂದು ಯೋಗ್ಯತೆ ಘನತೆ ಗೌರವ ಬೇಕು ಈಗಾಗಲೇ ಅನೇಕ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಗೊಳಿಸಿ ದುಡಿದು ತಿನ್ನುವವರ ಬಾಯಿಗೆ ಮಣ್ಣು ಹಾಕಿ ಬೀದಿಗೆ ತಂದಿದ್ದಾರೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗೆ ಅಂಬೇಡ್ಕರ್ ರವರ ಬಗ್ಗೆ ಅವರಿಗಿರುವ ಕೊಳಕು ಮನಸ್ಥಿತಿಯನ್ನು ತೋರುತ್ತಿದೆ ಸ್ವಾತಂತ್ರ್ಯ ಸಂವಿಧಾನದ ತ್ಯಾಗ ಬಲಿದಾನದ ಇತಿಹಾಸ ಅರಿಯದ ಅಮಿತ್ ಷಾ ಗೆ ನಮ್ಮ ಧಿಕ್ಕಾರ ಎಂದರು.

 

 

ನಂತರ ಮಾತನಾಡಿದ ಚಲವಾದಿ ಮಹಾಸಭಾ ದ ಡೊಂಕಿಹಳ್ಳಿ ರಾಮಣ್ಣ ಮಾತನಾಡಿ ಸಂವಿಧಾನದ ಬಗ್ಗೆ ಜಾಗೃತಿ ಆಗುತ್ತಿರುವುದನ್ನು ಕಂಡು ಸಹಿಸಿಕೊಳ್ಳಲು ಆಗದೆ ಇವರ ಆರ್ ಎಸ್ ಎಸ್ ಮನಸ್ಥಿತಿ ಅಜೆಂಡವನ್ನು ಈ ಭಾರತದ ದೇಶದ ಪಾರ್ಲಿಮೆಂಟಿನಲ್ಲಿ ನಿಂತು ಈ ರೀತಿ ಹೇಳಿಕೆ ಕೊಡುತ್ತಾನೆಂದರೆ ಎಷ್ಟರಮಟ್ಟಿಗೆ ಈತನ ಕೊಳಕು ಮನಸ್ಥಿತಿಯೇ ಇದೆ ಎಂಬುದು ಕಾಣುತ್ತದೆ ಈಗಾಗಲೇ ಗೃಹ ಮಂತ್ರಿ ಆಗಿರುವ ಅಮಿತ್ ಶಾ ತಾನು ಕೊಲೆ ಮಾಡಿದ ಪಾಪಕ್ಕೆ, ಜೈಲು ಸೇರಿ ನಂತರ ಗಡಿಪಾರು ಹಾಗಿದ್ದ ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನದ ಭಿಕ್ಷೆಯಲ್ಲಿ ಚುನಾಯಿತನಾಗಿ ಇಂದು ಕೇಂದ್ರ ಸರ್ಕಾರದ ಗೃಹ ಸಚಿವನಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ನೆನೆಯುವುದು ಈತನಿಗೆ ಪ್ಯಾಶನ್ ಆಗಿದೆ ಅದಕ್ಕಾಗಿ ಇಂತಹ ದುರಹಂಕಾರ ಹೇಳಿಕೆ ನೀಡಿರುವುದು ಎಂದರು.

 

 

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಮಹಿಳಾ ಒಕ್ಕೂಟ ಸಂಚಾಲಕರಾದ ನಂದಿನಿ ಮಾತನಾಡಿ ಈ ಭಾರತೀಯ ಸಂಸ್ಕೃತಿಯಲ್ಲಿ ಈಗಾಗಲೇ ಅದೇ ಸಂವಿಧಾನದ ಅಡಿಯಲ್ಲಿ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ ಜೊತೆಗೆ ಅದೆಷ್ಟೋ ಹೆಣ್ಣುಮಕ್ಕಳು ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸಿದ್ದಾರೆ ಅಮಿತ್ ಷಾ ಅವರೇ ಒಂದನ್ನು ನೆನಪಿಟ್ಟುಕೊಳ್ಳಿ ನಮ್ಮ ಡಿಎಸ್ಎಸ್ ಸುಮ್ಮನೆ ಕಣ್ಣು ಮುಚ್ಚಿ ಕೈ ಕೈಕಟ್ಟಿ ಕುಳಿತಿಲ್ಲ ಇನ್ನೆರಡು ದಿನಗಳ ಒಳಗಾಗಿ ನಮ್ಮ ಭಾರತೀಯರಿಗೆ ಕ್ಷಮೆ ಕೇಳಿ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಇಲ್ಲವಾದರೆ ತಾಲೂಕಿನಾದ್ಯಂತ, ಜಿಲ್ಲಾಧ್ಯಂತ,ರಾಜ್ಯಾದ್ಯಂತ ರಾಷ್ಟ್ರಾದ್ಯಂತ ಉಗ್ರವಾದ ಉಗ್ರವಾದ ಹೋರಾಟವನ್ನು ನಮ್ಮ ಎಲ್ಲಾ ದಲಿತ ಸಂಘರ್ಷ ಸಮಿತಿಗಳು, ಕನ್ನಡ ಪರ ಸಂಘಟನೆಗಳು ಮಹಿಳಾಪರ ಸಂಘಟನೆಗಳು, ವಿವಿಧಪರ ಸಂಘಟನೆಗಳು ಒಗ್ಗೂಡಿ ಬೃಹತ್ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ದಲಿತ ಮುಖಂಡರುಗಳಾದ ಬಡಾವಣೆ ಶಿವರಾಜ್, ಡಾ. ಚಂದ್ರಯ್ಯ ಮಾಯಸಂದ್ರ ಸುಬ್ರಹ್ಮಣ್ಯ, ಸಿಐಟಿಯು ಸತೀಶ್, ದಶಂಸ ಜಿಲ್ಲಾ ಮಹಿಳಾ ಒಕ್ಕೂಟದ ನಂದಿನಿ ಸೋಮಲಾಪುರ, ಬಿಗಿನಹಳ್ಳಿ ಪುಟ್ಟರಾಜು, ಕುಣಿಕೇನಹಳ್ಳಿ ಜಗದೀಶ್, ರಾಮಣ್ಣ, ಸುನಿಲ್ ,ಮಹಿಳಾ ತಾಲೂಕು ಸಂಚಾಲಕರಾದ ಅನ್ನಪೂರ್ಣಮ್ಮ, ಹರಿದಾಸನಹಳ್ಳಿ ಸಾವಿತ್ರಮ್ಮ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮಿದೇವಮ್ಮ, ಕೋಳಗಟ್ಟ ಕೇಶವ್, ಬಾಳೆಕಾಯಿ ಶೇಖರ್, ಅರಕೆರೆ ಚಂದ್ರು, ಮೇಲ್ನಳ್ಳಿ ಹರೀಶ್, ರಾಯಣ್ಣ, ಸೂಳೆಕೆರೆ ಮಹೇಶ್, ರಾಮಚಂದ್ರಪ್ಪ, ಲೋಕೇಶ್ ,ಕಲಾವಿದರ ಸಂಘದ ಅಧ್ಯಕ್ಷರು,ಇನ್ನು ಹಲವು ವಿವಿಧಪರ ಸಂಘಟನೆಗಳ ಮುಖಂಡರು ದಲಿತ ಪರ ಸಂಘಟನೆ ಮುಖಂಡರುಗಳು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

 

 

 

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *