Document

Turuvekere: ಪಟ್ಟಣದಲ್ಲಿ ಪತ್ರಿಕಾ ಭವನಕ್ಕೆ ನಿವೇಶನ– ಶಾಸಕ ಎಂ ಟಿ ಕೃಷ್ಣಪ್ಪ ಭರವಸೆ. 

Janataa24 NEWS DESK 

 

Turuvekere: Will Grant A Land for press house– MLA MT Krishnappa.

 

Turuvekere: ಪಟ್ಟಣದಲ್ಲಿ ಪತ್ರಿಕಾ ಭವನಕ್ಕೆ ನಿವೇಶನ– ಶಾಸಕ ಎಂ ಟಿ ಕೃಷ್ಣಪ್ಪ ಭರವಸೆ. 

ತುರುವೇಕೆರೆ: ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಾಗೂ ಲಯನ್ಸ್ ಕ್ಲಬ್ ಮತ್ತು ಇನ್ನರ್ವಿಲ್ ಕ್ಲಬ್ ಆಫ್ ಸಂಕಲ್ಪ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಪಟ್ಟಣದಲ್ಲಿರುವ ಗ್ಲೋಬಲ್ ಎಂಬೆಸ್ಸಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು.

 

ಈ ಕಾರ್ಯಕ್ರಮವನ್ನು ತಾಲೂಕಿನ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ಇದೇ ವೇಳೆ ಮಾತನಾಡಿದ ಅವರು ಪತ್ರಕರ್ತರು ನಮ್ಮಗಳಿಗೆ ತಾಲೂಕಿನ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಅವರ ವರದಿಯ ಮೂಲಕ ತಿಳಿಸಿ ನಮ್ಮನ್ನು ಹೆಚ್ಚಿನ ಅಭಿವೃದ್ಧಿಯ ಕಡೆ ಮುಖ ಮಾಡಲು ಇವರುಗಳು ಮುಖ್ಯ ಪಾತ್ರ ವಹಿಸಿರುತ್ತಾರೆ.

 

ಜೊತೆಗೆ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ನಮಗೆ ತಿಳಿಯುವಂತೆ ಮಾಡುತ್ತಾರೆ ಇದರಿಂದಾಗಿ ಮೂಲಭೂತ ಸೌಕರ್ಯದ ಬಗ್ಗೆ ನಮ್ಮಗಳಿಗೆ ತಿಳಿಸುವುದರಿಂದ ನಮ್ಮಂತ ಶಾಸಕರು ಮತ್ತು ಅಧಿಕಾರಿಗಳಾಗಲಿ ತಾಲೂಕಿನಲ್ಲಿ ಯಾವುದೇ ಸಮಸ್ಯೆಗಳಾಗಲಿ ಅಥವಾ ಮೂಲಭೂತ ಸೌಕರ್ಯ ಅಭಿವೃದ್ಧಿಯ ಬಗ್ಗೆ ತಿಳಿದು ಅಭಿವೃದ್ಧಿ ಮಾಡಲು ಪತ್ರಕರ್ತರ ಕಾರ್ಯ ಬಹಳ ಮುಖ್ಯವಾದದ್ದು ಆಗ ತಾನೇ ನಾವು ಯಾವುದೇ ಸಮಸ್ಯೆ ಅಭಿವೃದ್ಧಿಗಳನ್ನಾಗಲಿ ಮಾಡಲು ಸಾಧ್ಯ, ಜೊತೆಗೆ ಈ ಪತ್ರಿಕಾ ಮಾಧ್ಯಮ ರಂಗ ಎಲ್ಲರಿಗೂ ಸಹ ಬಹಳ ಮುಖ್ಯವೂ ಹೌದು ದಯಮಾಡಿ ಪತ್ರಿಕಾ ಮಾಧ್ಯಮದಲ್ಲಿ ಇರುವವರು ಪತ್ರಿಕಾ ಮೌಲ್ಯಗಳನ್ನು ಮರೆಯಬಾರದು ಎಂದರು.

 

ಮುಂದುವರೆದು ಮಾತನಾಡಿದ ಅವರು ತಾಲೂಕಿನಲ್ಲಿ ನೂತನವಾಗಿ ಪತ್ರಿಕಾ ಭವನವನ್ನು ನಿರ್ಮಿಸಲು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ವೇದಿಕೆಯಲ್ಲಿ ಹಾಜರಿದ್ದ ತಾಲೂಕು ದಂಡಾಧಿಕಾರಿ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರುಗಳಿಗೆ ಪತ್ರಿಕಾ ಭವನಕ್ಕೆ ಬೇಕಾಗುವ ನಿವೇಶನಕ್ಕೆ ಬೇಕಾಗುವ ಜಾಗವನ್ನು ಗುರುತಿಸುವಂತೆ ಸೂಚಿಸಿ ಆದಷ್ಟು ಬೇಗ ಪತ್ರಿಕಾ ಭವನಕ್ಕೆ ಜಾಗವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

 

ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಚೀ,ನಿ, ಪುರುಷೋತ್ತಮ್ ಅವರು ಮಾತನಾಡಿ ಪತ್ರಿಕಾ ರಂಗ ಎಂಬುದು ಈ ದೇಶದ ನಾಲ್ಕು ಅಂಗಗಳು ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ಹಾಗೂ ನಾಲ್ಕನೇ ಭಾಗವಾಗಿ ಪತ್ರಿಕಾಂಗ ಕೂಡ ಒಂದು ಭಾಗವಾಗಿದೆ ಪತ್ರಿಕಾ ರಂಗ ಎಂಬುದು ಮಾಧ್ಯಮ ಲೋಕದಲ್ಲಿ ಬಹಳ ಮುಖ್ಯವಾದ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ ನಮ್ಮ ಪತ್ರಿಕಾ ರಂಗದಿಂದ ನಮ್ಮ ದೇಶದಲ್ಲಿ ಅದೆಷ್ಟು ಮೂಲಭೂತ ಸೌಕರ್ಯ ವಂಚಿತ ಹಾಗೆ ದೇಶದ ಯಾವುದೇ ಸಮಸ್ಯೆಗಳಾಗಲಿ ವರದಿಗಳಿಂದಾಗಿ ಅಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಮ್ಮ ಪತ್ರಿಕಾ ರಂಗ ಮುಖ್ಯ ಪಾತ್ರ ವಹಿಸಿದೆ ಎಂದರು.

 

 

ಇದೇ ವೇಳೆ ಇನ್ನು ವಿಚಾರ ಸಂಕೀರ್ಣ ಕುರಿತು ಮಾತನಾಡಿದ ಚಿಂತಕರು, ಸಾಹಿತಿಗಳು, ಆದ ಡಾ. ಅಮ್ಮಸಂದ್ರ ಸುರೇಶ್ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಲ್ಪಿಸಲಾಗುವುದು ಎಂದು ಹೇಳಿದೆ ಆದರೆ ನನ್ನ ಸಂಶೋಧನೆಯ ಪ್ರಕಾರ ಇದರ ಅಗತ್ಯಕ್ಕಿಂತ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಹಳ ಮುಖ್ಯವಾಗಿ ಬೇಕಾಗುವ ಸೌಕರ್ಯಗಳನ್ನು ಸರ್ಕಾರವೇ ಮಾಡಬೇಕು ಯಾಕೆಂದರೆ ಜಿಲ್ಲಾ ವರದಿಗಾರರು ಪ್ರತಿಯೊಂದು ಹಳ್ಳಿಯಲ್ಲಿ ಹಾಗುವ ಸಮಸ್ಯೆಗಳನ್ನ ವರದಿ ಮಾಡುತ್ತಾರೆ ಆದರೆ ಅವರಿಗೆ ಸಮಸ್ಯೆಗಳನ್ನು ತಿಳಿಯಪಡಿಸುವುದೇ ನಮ್ಮ ಗ್ರಾಮೀಣ ಭಾಗದ ಪತ್ರಕರ್ತರು ಅಂದರೆ ಹೋಬಳಿ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ವರದಿಯನ್ನ ಹೆಕ್ಕಿ ತಂದು ತಲುಪಿಸುವುದು ಗ್ರಾಮೀಣ ಭಾಗದ ಪತ್ರಕರ್ತರು ಅವರು ಸಮಸ್ಯೆಗಳ ವರದಿಯನ್ನು ತರದಿದ್ದರೆ ಸಮಸ್ಯೆಗಳ ಬಗ್ಗೆ ಹೇಗೆ ವರದಿ ಮಾಡಲು ಸಾಧ್ಯ.?

ಹಾಗಾಗಿ ಸರ್ಕಾರವೇ ನೇರವಾಗಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ವರದಿ ಮಾಡಲು ಬೇಕಾಗುವ ಕಂಪ್ಯೂಟರ್ ಗಳನ್ನು, ಹಾಗೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದಲೇ ವಿಮಾ ಸೌಲಭ್ಯ ಮತ್ತು ನಿವೇಶನಗಳನ್ನು ಸರ್ಕಾರ ದ ವತಿಯಿಂದಲೇ ಕೊಡಬೇಕು ಎಂದರು, ಜೊತೆಗೆ ಪ್ರತಿಯೊಬ್ಬ ಪತ್ರಕರ್ತರು ವರದಿ ಮಾಡುವಾಗ ಯಾವುದೇ ಕಾರ್ಯಕ್ರಮದ ಸುದ್ದಿಯನ್ನು ಜೊತೆಗೆ ತಾಲೂಕಿನ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತೀರಾ ಅದು ನಮ್ಮ ಕೆಲಸವೂ ಹೌದು, ಆದರೆ ಹೆಚ್ಚಾಗಿ ರೈತರಿಗೆ ಸಂಬಂಧಪಟ್ಟಂತೆ ಬೆಳೆಗಳ ಅಳಿವು ಉಳಿವುಗಳ ಬಗ್ಗೆ ಗೊಬ್ಬರ ಸಮಸ್ಯೆಗಳ ಬಗ್ಗೆ ಒಟ್ಟಾರೆ ಹೇಳಬೇಕೆಂದರೆ ಕೃಷಿಗೆ ಸಂಬಂಧಪಟ್ಟ ಹೆಚ್ಚಿನ ವಿಷಯಗಳನ್ನು ವರದಿ ಮಾಡಬೇಕು ಎಂದು ತಿಳಿಸಿಕೊಟ್ಟರು, ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಾಲೂಕಿನಲ್ಲಿರುವ ಹಿರಿಯ ಪತ್ರಕರ್ತರಿಗೆ, ಚಿಂತಕರಿಗೆ, ಸಂಪಾದಕರಿಗೆ, ಪತ್ರಿಕಾ ಛಾಯಾಗ್ರಹಕರಿಗೆ, ಜೊತೆಗೆ ಪತ್ರಿಕೆ ಹಂಚಿಕೆ ಮಾಡುವವರಿಗೂ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು ಇನ್ನು ಇದೇ ವೇಳೆ ಮನೆ ಮನೆಗೆ ತೆರಳಿ ಪತ್ರಿಕೆ ಹಂಚುವವರಿಗೆ ತಾಲೂಕಿನ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ವೈಯಕ್ತಿಕವಾಗಿ ಪತ್ರಿಕೆಯನ್ನು ಮನೆ ಮನೆಗೆ ಹಂಚುವವರಿಗೆ ಅವರ ಕೈಲಾದ ಧನ ಸಹಾಯ ಮಾಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ದುಂಡ ಹಾಗೂ ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ನಿರ್ದೇಶಕರು, ಕೆಯುಡಬ್ಲ್ಯೂ ಜೆ, ನಂದೀಶ್, ಮುಖ್ಯ ಅತಿಥಿಗಳಾಗಿ ಟಿಇ ರಘುರಾಮ್, ಸಿದ್ದಲಿಂಗ ಸ್ವಾಮಿ ನಿರ್ದೇಶಕರು ರಾಜ್ಯ ಕಾರ್ಯ ಕಾರಣಿ ಸಮಿತಿ ಕೆ ಯು ಡಬ್ಲ್ಯೂ ಜೆ ,ಮತ್ತು ವಿಶೇಷ ಆಹ್ವಾನಿಕರಾಗಿ ತಾಲೂಕು ದಂಡಾಧಿಕಾರಿ ಕುo,ಇ, ಅಹಮದ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಸೋಮಶೇಖರ್, ಜೊತೆಗೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಂಗನಾಥ್, ರೋಟರಿ ಕ್ಲಬ್ ಅಧ್ಯಕ್ಷರಾದ ಸಾ, ಶಿ, ದೇವರಾಜು, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ಅಧ್ಯಕ್ಷರಾದ ನೇತ್ರ ಸಿದ್ದಲಿಂಗ ಸ್ವಾಮಿ,

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆಶಾ ರಾಜಶೇಖರ್, ಹಾಗೂ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷರಾದ ಗಂಗಾಧರ್ ದೇವರ ಮನೆ, ಇನ್ನು ಸನ್ಮಾನಿತರುಗಳಾದ ಎ ಎನ್ ಧನಂಜಯ್ ಸಂಪಾದಕರು ಬೆಂಕಿಯ ಬಲೆ ಪತ್ರಿಕೆ, ಟಿ ಹೆಚ್ ಸುರೇಶ್ ಪತ್ರಿಕಾ ಛಾಯಾಗ್ರಾಹಕರು ತುಮಕೂರು, ಬೈರೇಶ್ ಪತ್ರಕರ್ತರು, ತುಮಕೂರು, ಡಿ ಎನ್ ಮಂಜುನಾಥ್ ಸಂಪಾದಕರು ಸುದ್ದಿ ಸಂಗಾತಿ ಧ್ವನಿ ಪತ್ರಿಕೆ ಬೆಂಗಳೂರು, ದುಂಡ ಹೋಬಳೇಶ್ ಹೊಸದಿಗಂತ ಪತ್ರಿಕೆಯ ಪತ್ರಕರ್ತರು, ಜೊತೆಗೆ ತಾಲೂಕಿನ ಕಾರ್ಯಕಾರಿಣಿ ಮಂಡಳಿ ತಾಲೂಕು ಘಟಕದ ಸರ್ವ ಸದಸ್ಯರು ಹಾಗೂ ಸೇವಾ ನಿರತ ತಾಲೂಕಿನ ಪತ್ರಕರ್ತರಗಳು ತಾಲೂಕಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ಅಧಿಕಾರಿ ಹಾಗೂ ನೌಕರರ ವರ್ಗ, ಮತ್ತು ನಾಗರಿಕ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ವರದಿ, ಮಂಜುನಾಥ್ ಕೆ ಎ ತುರುವೇಕೆರೆ .

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *