Janataa24 NEWS DESK
Job Alert: SSLC ಪಾಸಾದವರಿಗೆ NABARDನಲ್ಲಿ ಉದ್ಯೋಗಾವಕಾಶ.

ನಬಾರ್ಡ್ ಬ್ಯಾಂಕ್ ನಲ್ಲಿ ದೇಶದಾದ್ಯಂತ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಸೂಚನೆ ಹೊರಡಿಸಿದೆ.
ಬೇರೆ ಬೇರೆ ರಾಜ್ಯಗಳ ನಬಾರ್ಡ್ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಅರ್ಹ, ಆಸಕ್ತ ಅಭ್ಯರ್ಥಿಗಳು ನಬಾರ್ಡ್(NABARD) ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು .
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ನಲ್ಲಿ ಗ್ರೂಪ್ ಸಿ ವಿಭಾಗದ ಕಚೇರಿ ಅಟೆಂಡೆಂಟ್ಗಳ ಪೋಸ್ಟ್ಗಳು ಖಾಲಿ ಇವೆ. ದೇಶದ್ಯಾಂತ ಇರುವ ಸಹ ಸಂಸ್ಥೆಗಳಲ್ಲಿ ಈ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಇದರ ಸಂಸ್ಥೆ ಇದ್ದು ಒಟ್ಟು 8 ಪೋಸ್ಟ್ಗಳಿವೆ. ಕನ್ನಡಿಗರು ಈ ಹುದ್ದೆಗೆ ಪ್ರಯತ್ನ ಮಾಡಬಹುದು. ಇನ್ನು ಈ ಉದ್ಯೋಗದ ಇತರೆ ಮಾಹಿತಿ ಮುಂದೆ ನೀಡಲಾಗಿದೆ.
ಹುದ್ದೆಯ ಹೆಸರು;
• ಕಚೇರಿ ಅಟೆಂಡೆಂಟ್ ಉದ್ಯೋಗ
• ಒಟ್ಟು ಖಾಲಿ ಹುದ್ದೆಗಳು: 108
• ಕರ್ನಾಟಕದ ಹುದ್ದೆಗಳು: 08
ಮಾಸಿಕ ವೇತನ: 35,000₹
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
• ಪ್ರಿಲಿಮ್ಸ್ ಎಕ್ಸಾಮ್
• ಮುಖ್ಯ ಪರೀಕ್ಷೆ
• ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಎಲ್ಪಿಟಿ)
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ವಿಶೇಷ ಚೇತನರು= 50 ರೂಪಾಯಿ
ಉಳಿದ ಎಲ್ಲ ಕೆಟಗರಿಗಳಿಗೆ= 500 ರೂಪಾಯಿ
ಶೈಕ್ಷಣಿಕ ಅರ್ಹತೆ
10ನೇ ತರಗತಿ ಪೂರ್ಣಗೊಳಿಸಿರಬೇಕು
ಉನ್ನತ ವ್ಯಾಸಂಗ ಗಣನೆಗೆ ತೆಗೆದುಕೊಳ್ಳಲ್ಲ
ವಯೋಮಿತಿ
18 ರಿಂದ 30 ವರ್ಷಗಳು (2/10/1994 ರಿಂದ 01/10/2006 ಇದರ ಒಳಗೆ ಜನಿಸಿರಬೇಕು)
ವಯೋಮಿತಿ ಸಡಿಲಿಕೆ
ಎಸ್ಸಿ, ಎಸ್ಟಿ- 5 ವರ್ಷಗಳು
ಒಬಿಸಿ ಅಭ್ಯರ್ಥಿಗಳು- 3 ವರ್ಷ
ವಿಧವೆ ಮಹಿಳೆಯರಿಗೆ- 10 ವರ್ಷ
ಮುಖ್ಯವಾದ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- ಅಕ್ಟೋಬರ್ 02, 2024
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 21
• ನಬಾರ್ಡ್ ನಡೆಸುವ ಪರೀಕ್ಷೆಯ ದಿನಾಂಕ- ನವೆಂಬರ್ 21
https://www.nabard.org/careers-notices1.aspx?cid=693&id=26
👆 ಮೇಲೆ ಸೂಚಿಸಿರುವ ಲಿಂಕ್ ಕ್ಲಿಕ್ ಮಾಡಿ ಈಗಲೇ ನಬಾರ್ಡ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.