Document

Pavagada:ರೈತರ ಮೇಲೆ ಪೊಲೀಸರ ದಬ್ಬಾಳಿಕೆ-ಅಳಲು ತೋಡಿಕೊಂಡ ರೈತ ದಂಪತಿ.

Janataa24 NEWS DESK

Pavagada:ರೈತರ ಮೇಲೆ ಪೊಲೀಸರ ದಬ್ಬಾಳಿಕೆ-ಅಳಲು ತೋಡಿಕೊಂಡ ರೈತ ದಂಪತಿ.

Pavagada:ರೈತರ ಮೇಲೆ ಪೊಲೀಸರ ದಬ್ಬಾಳಿಕೆ-ಅಳಲು ತೋಡಿಕೊಂಡ ರೈತ ದಂಪತಿ.

ಪಾವಗಡ ತಾಲೂಕಿನಲ್ಲಿ ಪದೇಪದೇ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರು ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿ.

ತಾಲೂಕಿನ ಆರಕ್ಷ್ಯಾತನ ಹಳ್ಳಿ ಗ್ರಾಮದ ನರಸಿಂಹಯ್ಯ .ತಿಮ್ಮಕ್ಕ. ರ ರೈತ ದಂಪತಿಗಳ ಮೇಲೆ ದೌರ್ಜನ್ಯದಿಂದ ಸರ್ವೆ ನಂಬರ್ 147 ರಲ್ಲಿ ಎಂ ಎಸ್ ಗ್ರೀನ್ ಇನ್ಫೋ ವೈಂಡ್ ಎನರ್ಜಿ ಲಿಮಿಟೆಡ್ ಕಂಪನಿಯವರು ಪರಿಹಾರ ಹಾಗೂ ಯಾವುದೇ ಅಗ್ರಿಮೆಂಟ್ ಇಲ್ಲದೆ ನಮ್ಮ ಗಮನಕ್ಕೆ ತಾರದೆ ಪೊಲೀಸರನ್ನು ನಿಲ್ಲಿಸಿ ಏಕಾಯಕಿ ವಿದ್ಯುತ್ ತಂತಿ ಲೈನ್ ನಮ್ಮ ಜಮೀನಿನಲ್ಲಿ ಎಳೆಯುತ್ತಿದ್ದಾರೆ.

ಇದಕ್ಕೆ ನಾವು ನಮ್ಮ ಪರಿಹಾರ ನಮಗೆ ನೀಡಬೇಕಾದ ಹಣವನ್ನು ನೀಡಿ ನಂತರ ನಿಮ್ಮ ಕೆಲಸ ಮಾಡಿಕೊಳ್ಳಿ ಎಂಬುದಾಗಿ ಹೇಳಿದರು ಸಹ ನಮ್ಮ ಮೇಲೆ ಪೊಲೀಸರಿಂದ ದೌರ್ಜನ್ಯ ಮಾಡಿಸಿ ಅಲ್ಲೇ ಸಹ ಮಾಡಿದ್ದಾರೆ ಎಂಬುದಾಗಿ ರೈತ ನರಸಿಂಹಯ್ಯ ಹಾಗೂ ಪತ್ನಿ ತಿಮ್ಮಕ್ಕ ಮಾಧ್ಯಮದ ಬಳಿ ಅಳಲು ತೋಡಿಕೊಂಡಿದ್ದಾರೆ.

ಹಿಂದೆ ಕಂಪನಿಯವರು ಬಂದು ನಿಮ್ಮ ಜಮೀನಲ್ಲಿ ವಿದ್ಯುತ್ ತಂತಿ ಹಾದು ಹೋಗುವ ಹಿನ್ನೆಲೆಯಲ್ಲಿ ನಿಮಗೆ ಪರಿಹಾರವಾಗಿ 45 ಲಕ್ಷ ಹಣ ನೀಡಿ ಒಂದು ಕೆಲಸ ಸಹ ನಿಮ್ಮ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ನೀಡುತ್ತೇವೆ ಎಂಬುದಾಗಿ ಹೇಳಿದ್ದರು.

ಆದರೆ ಇಂದು ಸೋಮವಾರ ಏಕಾಏಕಿ ಬಂದು ಪೊಲೀಸರ ಸಂಯುಕ್ತದಲ್ಲಿ ದಬ್ಬಾಳಿಕೆ ಮಾಡಿ ವಿದ್ಯುತ್ ತಂತಿ ಎಳೆಯುತ್ತಿದ್ದಾರೆ.

ನರಸಿಂಹ ಅವರ ಹೆಂಡತಿ ತಿಮ್ಮಕ್ಕ ಮೇಲೆ ಮಹಿಳಾ ಪೇದೆ ಗಳಿಂದ ಜಮೀನಿನ ಹೊರಕ್ಕೆ ತಳ್ಳಿದ್ದಾರೆ.

ಪಾವಗಡ ತಾಲೂಕಿನ ವೈ .ಎನ್ ಹೊಸಕೋಟೆ ವ್ಯಾಪ್ತಿಯ ಸಿಪಿಐ ಹರೀಶ್ ಮಾತನಾಡಿ ಜಮೀನಲ್ಲಿ ಪ್ರೊಟೆಸ್ಟ್ ಮಾಡಲು ತಹಸಿಲ್ದಾರ್ ಅವರು ಲಿಖಿತವಾಗಿ ನೀಡಿದ್ದಾರೆ ಆ ಉದ್ದೇಶದಿಂದ ನಾವು ಇಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Document

Leave a Reply

Your email address will not be published. Required fields are marked *