Janataa24 NEWS DESK
Turuvekere: ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ಬಳಿ ಇರುವ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಗೆ ಕೂಗಳತೆ ದೂರದಲ್ಲೇ ಪುಟ್ಟ ಮಕ್ಕಳು ಅಭ್ಯಾಸ ಮಾಡುವ ಅಂಗನವಾಡಿ ಕೇಂದ್ರ ಇದೆ, ಆದರೆ ಈ ಅಂಗನವಾಡಿ ಕಸ ಹಾಕುವ ಕಸ ವಿಲೇವಾರಿ ಕೇಂದ್ರವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಅದೆಷ್ಟೋ ದಿನಗಳಿಂದ ಕಸ ವಿಲೇವಾರಿ ಆಗದೆ ಅಂಗನವಾಡಿಯಿಂದ ಕೇವಲ 20 ಮೀಟರ್ ದೂರದಲ್ಲಿ ಕಸದ ರಾಶಿ ಎದ್ದು ಕಾಣುತ್ತಿದೆ, ಇಷ್ಟು ದಿನ ಈ ಕಸದ ರಾಶಿ ಅಂಗನವಾಡಿ ಇಂದ 20 ಮೀಟರ್ ದೂರದಲ್ಲಿ ಇತ್ತು, ಆಗಲೂ ಈ ಕಸದ ರಾಶಿಯನ್ನು ತೆರವು ಮಾಡಲು ಯಾರಿಂದಲೂ ಸಾಧ್ಯವಾಗದೆ ಹಾಗೆ ಇದೆ, ಆದರೆ ಇದೇ ಕಸದ ರಾಶಿ ಇಂದು ಅಂಗನವಾಡಿ ಬಾಗಿಲ ಮುಂಭಾಗನೇ ಬಂದು ನಿಂತಿದೆ, ಇನ್ನೂ ದಿನನಿತ್ಯ ಅಂಗನವಾಡಿ ಕೇಂದ್ರಕ್ಕೆ ಬರುವ ಪುಟ್ಟ ಮಕ್ಕಳ ಆರೋಗ್ಯ ಹೇಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ.

ಇನ್ನು ಅಂಗನವಾಡಿಯ ಕೇಂದ್ರದಿಂದ 20 ಮೀಟರ್ ದೂರದಲ್ಲಿರುವ ಈ ಕಸದ ವಿಲೇವಾರಿ ಮಾಡುವ ಬಗ್ಗೆ ಜನಪ್ರತಿನಿಧಿಗಳು ಸಹ ಇದಕ್ಕೆ ಸಂಬಂಧಪಟ್ಟ ಪಂಚಾಯ್ತಿಯ ಅಧಿಕಾರಗಳ ಗಮನಕ್ಕೆ ತಂದರು ಸಹ ಏನೂ ಕೂಡ ಪ್ರಯೋಜನವಾಗಿಲ್ಲ ಎಂಬ ವಿಷಯ ಕೆಲವು ಮೂಲಗಳಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ. ಹಾಗಾದರೆ ಇನ್ನೇನು ಒಂದೆರಡು ದಿನದಲ್ಲೇ ಈ ಕಸದ ರಾಶಿ ಅಂಗನವಾಡಿಯ ಕೇಂದ್ರದೊಳಗೆ ಬರುವುದರೊಳಗೆ ಯಾವುದೇ ಅನುಮಾನವಿಲ್ಲ, ಹಾಗಾಗಿ ಸಾರ್ವಜನಿಕರಿಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಬರುವ ಪುಟ್ಟ ಮಕ್ಕಳ ಪೋಷಕರಲ್ಲಿ ಅಂಗನವಾಡಿ ಕೇಂದ್ರವೇನಾದರೂ ಗ್ರಾಮ ಪಂಚಾಯಿತಿ ಕಚೇರಿಯ ಒಳಗೆ, ಅಥವಾ ತಾಲೂಕು ಪಂಚಾಯಿತಿಯ ಕಚೇರಿಯ ಒಳಗೆ ಏನಾದರೂ, ಸ್ಥಳಾಂತರವಾಗಲಿದೆಯೇ ಎಂಬ ಕಟ್ಟ ಕಡೆಯ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇನ್ನು ಈ ಅಂಗನವಾಡಿ ಕೇಂದ್ರದ ವಿಶೇಷತೆಗೆ ಬಂದರೆ ಇದೇ ಅಂಗನವಾಡಿಯಲ್ಲಿ ತಿಂಗಳಿಗೆ ಹಲವು ಬಾರಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಅಂಗನವಾಡಿಯ ಕಾರ್ಯಕರ್ತೆಯರು, ಅಧಿಕಾರಿಗಳು, ಇದೆ ಕೇಂದ್ರದಲ್ಲಿ ಸಭೆಗಳನ್ನು ಸಹ ನಡೆಸುತ್ತಾರೆ, ಹಾಗಾದರೆ ಸಭೆ ನಡೆಸುವ ಸಮಯದಲ್ಲಾದರೂ ಅಂಗನವಾಡಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕಸ ಕಣ್ಣಿಗೆ ಕಾಣುವುದಿಲ್ಲವೋ ಎಂಬ ಅನುಮಾನ ಕೂಡ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಇನ್ನು ಈ ಪಂಚಾಯಿತಿಯ ವಿಚಾರ ತೆಗೆದುಕೊಳ್ಳೋಣ, ಹಾಗೆ ನೋಡುವುದಾದರೆ ಈ ಅಂಗನವಾಡಿ ಕೇಂದ್ರವು ಪಂಚಾಯಿತಿಯಿಂದ ಕೇವಲ 50 ರಿಂದ 60 ಮೀಟರ್ ದೂರದಷ್ಟೇ ಇರುವುದು , ಅದು ಪಂಚಾಯತಿಯ ಕೇಂದ್ರ ಕಚೇರಿಯೂ ಕೂಡ , ಹಾಗಾದರೆ ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯಗಳು ಸಿಗುತ್ತವೆ ಎಂಬುದು ಬರೀ ನೆಪ ಮಾತ್ರಕ್ಕೆ ಅನ್ನಿಸುತ್ತೆ, ಗ್ರಾಮ ಪಂಚಾಯಿತಿಯೇ ಹೀಗೆ ಇನ್ನು ಗ್ರಾಮ ಪಂಚಾಯಿತಿಗಳನ್ನು ನಿರ್ವಹಣೆ ಮಾಡುತ್ತಿರುವ ತಾಲೂಕು ಪಂಚಾಯಿತಿ ಕಥೆ ಯಾವ ಮಟ್ಟದಲ್ಲಿ ಇರಬಹುದು, ಇನ್ನು ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿಯಿಂದ ಮಾಡುವ ಅಭಿವೃದ್ಧಿ ಕಾರ್ಯಗಳು ಯಾವ ರೀತಿಯಲ್ಲಿ ಆಗುತ್ತವೆ ಎಂಬುದನ್ನ ಊಹಿಸಲು ಸಾಧ್ಯವಿಲ್ಲ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಸಂಬಳಕ್ಕಾಗಿಯೇ ಕಾದು ಕುಳಿತಿದ್ದಾರಾ? ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಪಿಸುಗುಟ್ಟುತ್ತಾ ಇದೆ. ಬರೀ ಕಸ ವಿಲೇವಾರಿಯ ಕಥೆ ಹೀಗಾದರೆ ಗ್ರಾಮ ಪಂಚಾಯಿತಿಯಿಂದ ಇನ್ನೂ ಯಾವೆಲ್ಲ ಅನುಕೂಲಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಾಲೂಕು ಪಂಚಾಯಿತಿ ಅಧಿಕಾರಿಗಳೇ, ಗ್ರಾಮ ಪಂಚಾಯಿತಿ ಅಧಿಕಾರಿಗಳೇ, ಪುಟ್ಟ ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದೀರಾ, ಜೊತೆಗೆ ಮೂಲಭೂತ ಸೌಕರ್ಯದ ಬಗ್ಗೆ ಜನಪ್ರತಿನಿಧಿಗಳು ಸಹ ಹೆಚ್ಚು ಗಮನ ಇಡಬೇಕು, ಕೇವಲ ನಿಮ್ಮ ಅಧಿಕಾರ 5 ವರ್ಷಕ್ಕೆ ಮಾತ್ರ ಸೀಮಿತವಾಗದೆ, ನಿಮ್ಮ ಸೀಮಿತಾವದಿಯಲ್ಲಿ ಸಾರ್ವಜನಿಕರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯದ ಅಭಿವೃದ್ಧಿ ಕಡೆ ಗಮನ ಹರಿಸಿ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en