Document

Turuvekere: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ವಿಶ್ವ ಪರಿಸರ ದಿನಾಚರಣೆ.

Janataa24 NEWS DESK 

 

Turuvekere: World Environment Day celebration on behalf of Dharmasthala Village Development Scheme.

Turuvekere World Environment day celebrationin tumku tiruvekere

ತುರುವೇಕೆರೆ: ತಾಲೂ5ಕಿನ ಕಸಬಾ,ಬಿ ,ಗೋಣಿ ತುಮಕೂರು ಈ ಮೂರು ವಲಯಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಘದ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮಕ್ಕೆ ತಾಲೂಕಿನ ಯೋಜನಾಧಿಕಾರಿಗಳಾದ ಯಶೋಧರ್, ಹಾಗೂ ಊರಿನ ಗಣ್ಯರ ಮುಖಾಂತರ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.

 

 

ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಯೋಜನಾಧಿಕಾರಿಯವರು ಪರಿಸರದ ಬಗ್ಗೆ ಗ್ರಾ ಮಾಭಿವೃದ್ಧಿ ಯೋಜನೆ ವಹಿಸಿರುವ ಕಾಳಜಿ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕರ ಏಳಿಗೆಗಾಗಿ ಪರಿಸರ ಮುಖ್ಯವಾದುದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದೆಂದರು.

 

 

ಗ್ರಾಮದ ಗಣ್ಯರು ಮಾತನಾಡಿ, ಪರಿಸರ ಸಮೃದ್ಧವಾಗಿ ಶುದ್ಧವಾಗಿ ಇರಬೇಕಾದರೆ ಪರಿಶುದ್ಧವಾದ ಗಾಳಿ ಬೇಕು ಅದಕ್ಕಾಗಿ ಪ್ರತಿಯೊಬ್ಬರು ನಾವು ಗಿಡಗಳನ್ನು ನೆಟ್ಟು ಸಲಹಬೇಕು ,ಇದು ನಮ್ಮ ಜವಾಬ್ದಾರಿ,, ಎಂದರು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಭಾಗವಹಿಸಿದ ಸದಸ್ಯರಿಗೆ ನೇರಳೆ ,ಹಲಸು, ಸೀತಾಫಲ ಬೆಟ್ಟದ ನೆಲ್ಲಿ ,ಹೊಂಗೆ ಮುಂತಾದ ಸುಮಾರು 250 ಗಿಡಗಳನ್ನು ವಿತರಿಸಲಾಯಿತು.

 

 

ಇದೆ ವೇಳೆ ಶಾಲಾ ಮಕ್ಕಳ(School Children’s)ಲ್ಲಿ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸಿ ,ಬಹುಮಾನ(Prize) ವಿತರಿಸಲಾಯಿತು. ಪರಿಸರ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳು, ಊರಿನ ಹಿರಿಯರು ,ಡೈರಿ(Dairy) ಒಕ್ಕೂಟದ ಅಧ್ಯಕ್ಷರು ,ಪಂಚಾಯಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷರು ,ಶಾಲಾ ಮುಖ್ಯ ಉಪಾಧ್ಯಾಯರು(Teachers) ಉಪಸ್ಥಿತರಿದ್ದರು .ತಾಲೂಕಿನ ಕೃಷಿ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿ ,ವಲಯ ಮೇಲ್ವಿಚಾರಕರು ಸ್ವಾಗತಿಸಿ ,ಸೇವಾ ಪ್ರತಿನಿಧಿಗಳು ಧನ್ಯವಾದ ತಿಳಿಸಿದರು.

ವರದಿ: ಮಂಜುನಾಥ್ ತುರುವೇಕೆರೆ

https://www.janataa24.com/turuvekere-jds-leader-turuvekere-challenged-the-gubb

https://youtu.be/qeGpC0_FI_Q?si=_uaZEtU1UCPKiqz6

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *