Janataa24 NEWS DESK
Turuvekere: ಗ್ರಾಮ ಪಂಚಾಯಿತಿ ಸದಸ್ಯ ಮತ್ತು ನೀರು ವಿತರಕನ ಮೇಲೆ ಹಲ್ಲೆ.

ತುರುವೇಕೆರೆ: ತಾಲೂಕಿನ ದಂಡಿನ ಶಿವರ ಹೋಬಳಿ ತಾಳಕೆರೆ ಪಂಚಾಯಿತಿ ವ್ಯಾಪ್ತಿಗೆ ಬರುವ ಡಿ, ಕಲ್ಕೆರೆ(Kalkere)ಯ ಗ್ರಾಮದಲ್ಲಿ ಇಂದು, ನೀರು ವಿತರಕ ಶಬ್ಬೀರ್ ಎಂಬುವರು ಎಂದಿನಂತೆ ಗ್ರಾಮಕ್ಕೆ ನೀರು ಪೂರೈಸಲು ಹೋದಾಗ ಹೆಚ್ಚುವರಿ ನೀರನ್ನು ನಮಗೆ ಬಿಡಲಿಲ್ಲವೆಂದು ಅದೇ ಗ್ರಾಮದ ನಾಲ್ವರು ಗ್ರಾಮ ಪಂಚಾಯಿತಿಯಲ್ಲಿ ನೀರು ವಿತರಕ(WaterMan)ನಾಗಿ ಕಾರ್ಯನಿರ್ವಹಿಸುತ್ತಿರುವ ಶಬ್ಬೀರ್ ಮೇಲೆ ಏಕಾಏಕಿ ದೊಣ್ಣೆ ,ಎಡೆ ಮಟ್ಟೆ ಗಳಿಂದ ಹಲ್ಲೆ ಮಾಡಿದ್ದಾರೆ, ಜೊತೆಗೆ ನೀರು ವಿತರಕನಾದ ಶಬ್ಬೀರ್(Water Man Shabbir) ಮನೆ ಹತ್ತಿರ ಹೋಗಿ ಅದೇ ನಾಲ್ವರು ಮನಬಂದಂತೆ ಅವರ ಮನೆಯ ಮುಂದೆ ಇದ್ದಂತಹ ನಲ್ಲಿ, ನೀರು ಶೇಖರಿಸುವ ತೊಟ್ಟಿಯನ್ನು ದ್ವಂಸಗೊಳಿಸಿದ್ದಾರೆ, ಇದನ್ನು ಕಂಡ ಗ್ರಾಮ ಪಂಚಾಯಿತಿಯ ಸದಸ್ಯ ನಯಾಜ್ ಎಂಬುವರು ಜಗಳವನ್ನು ಬಿಡಿಸಲಿಕ್ಕೆ ಹೋದಾಗ ಆತನಿಗೂ ಅದೇ ನಾಲ್ವರು ಮನಬಂದಂತೆ ಹೊಡೆದಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ(Turuvekere Government Hospital) ಹಲ್ಲೆಗೊಳಗಾದ ಶಬ್ಬೀರ್ ಚಿಕಿತ್ಸೆ ಪಡೆಯುತ್ತಿದ್ದು, ಸದಸ್ಯ ನಯಾಜ್ ಕೂಡ ಚಿಕಿತ್ಸೆ ಪಡೆದಿದ್ದು, ಜನತಾ 24 ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ನನಗೇನಾದರೂ ಪ್ರಾಣಪಾಯವಾದರೆ ಇದೇ ನಾಲ್ವರು ಕಾರಣರೆಂದು ಪ್ರತಿಕ್ರಿಯೆ ನೀಡಿದ್ದಾರೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/maldives-indian-tourists-drop-to-40-chinese-tour/