Document

pavagada:ಡಾ.ಪ್ರೇಮಜ್ಯೋತಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ.

Janataa24 NEWS DESK

pavagada:ಡಾ.ಪ್ರೇಮಜ್ಯೋತಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ.

ಪಾವಗಡ: ಮಾ,17ಕ್ಕೆ ತಾಲೂಕಿನ ದಲಿತ ಪರ ಸಂಘಟನೆ ಹಾಗೂ ಸಂಘ ಸಂಸ್ಥೆಗಳಿಂದ ಪಟ್ಟಣದಲ್ಲಿ ಅಭಿನಂದನಾ ಹಾಗೂ ಸನ್ಮಾನ ಸಮಾರಂಭಕ್ಕೆ ದಲಿತ ಮುಖಂಡ ಪಳವಳಿ ಸುಬ್ಬರಾಜ್‌ ಕರೆ.

Dr.Premajyothi

Dr. Premajyothi.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಪರಿಗಣಿಸಿ,ಪ್ರಸಕ್ತ ಸಾಲಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಲಭಿಸಿದ್ದ ಹಿನ್ನಲೆಯಲ್ಲಿ ಪಾವಗಡ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜನಸೇವಾ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಇದೇ ಮಾ 17ರಂದು ಭಾನುವಾರ 11 ಗಂಟೆಗೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಬೆಂಗಳೂರು ಸಂತ ಜೋಸೆಪ್‌ ವಿವಿಯ ಸಹಾಯಕ ಪ್ರಾಧ್ಯಾಪಕಿಯಾದ ಪಾವಗಡದ ಡಾ.ಪ್ರೇಮಜ್ಯೋತಿ ಅವರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದಾಗಿ ತಾಲೂಕು ದಲಿತ ಪರ ಹೋರಾಟಗಾರ ಪಳವಳ್ಳಿ ಸುಬ್ಬರಾಜ್‌ ತಿಳಿಸಿದ್ದಾರೆ.

award photo janataa

ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸುಬ್ಬರಾಜ್‌,ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಪರಿಗಣಿಸಿ ಪಾವಗಡ ತಾ,ಇಂದ್ರಬೆಟ್ಟ ಗ್ರಾಮದ ಡಾ.ಪ್ರೇಮಜ್ಯೋತಿ ಅವರಿಗೆ ಪ್ರಸಕ್ತ ಸಾಲಿಗೆ ಮೈಸೂರು ದುರ್ಗಾ ಪೌಂಡೇಷನ್‌ ವತಿಯಿಂದ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ(Award) ನೀಡಿ ಗೌರವಿಸಲಾಗಿದೆ.ಈ ಹಿನ್ನಲೆಯಲ್ಲಿ ಪಾವಗಡ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟ(Organization)ಹಾಗೂ ಕರ್ನಾಟಕ ಜನಸೇವಾ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಇದೇ ಮಾ,17ಕ್ಕೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಹೆಚ್ಚಿನ ಸಂಖ್ಯೆಯ ದಲಿತ ಸಂಘಟನೆಯ ಮುಖಂಡರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

https://www.janataa24.com/tumkur-ಕ್ಷುಲ್ಲಕ-ಕಾರಣಕ್ಕೆ-ಹೆಂಡತ/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *