Document

Tukali Santhosh: ತುಕಾಲಿ ಸಂತೋಷ್ ಕಾರು ಅಪಘಾತ- ಆಟೋ ಡ್ರೈವರ್ ಸಾವು.

Tukali Santhosh: ತುಕಾಲಿ ಸಂತೋಷ್ ಕಾರು ಅಪಘಾತ- ಆಟೋ ಡ್ರೈವರ್ ಸಾವು.

tumkur kunigal tukali santhosh car accident driver died janataa248432323738732461473
Tukali Santhosh: ತುಕಾಲಿ ಸಂತೋಷ್ ಕಾರು ಅಪಘಾತ-

ತುಮಕೂರು: ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರಿಗೆ ಕುಣಿಗಲ್(Kunigal) ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯ ಗೇಟ್ ಬಳಿ ಬುಧವಾರ ರಾತ್ರಿ ಡಿಕ್ಕಿ ಹೊಡೆದಿದ್ದ ಆಟೊ ಚಾಲಕ, ಗುರುವಾರ ಬೆಳಗಿನ ಜಾವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿಪಾಳ್ಯದ ಜಗದೀಶ್ (44) ಮೃತರು. ತುಕಾಲಿ ಸಂತೋಷ್, ಪತ್ನಿ ಮಾನಸ ತುಮಕೂರಿನಿಂದ ಹೊಳೆನರಸೀಪುರದತ್ತ ತಮ್ಮ ನೂತನ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ(Accident)ಸಂಭವಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರು(New Car) ಖರೀದಿಸಿದ್ದು ಸಾಕಷ್ಟು ಸುದ್ದಿ ಆಗಿತ್ತು. ಕನಸು ನನಸಾಯಿತು ಎಂದು ಹೇಳಿಕೊಂಡಿದ್ದರು. ಮಾರ್ಚ್ 13ರ ಸಂಜೆ ಈ ಕಾರು ಅಪಘಾತಕ್ಕೆ ಒಳಗಾಗಿತ್ತು. ಆಟೋ ಹಾಗೂ ತುಕಾಲಿ ಸಂತೋಷ್ ಕಾರಿನ ಮಧ್ಯೆ ಅಪಘಾತ(Accident) ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಆಟೋ ಚಾಲಕ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *