Janataa24 NEWS DESK
ವಿಜೃಂಭಣೆಯ ಹಸಿರು ಹಬ್ಬ. ಕೊಂಡ ಪ್ರವೇಶ ಮಾಡಿದ ಪೂಜಾರಿ ಶಿವಲಿಂಗಯ್ಯ.

ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದ ಹಸಿರು ಹಬ್ಬದ ನಿಮಿತ್ತ ಶ್ರೀ ಕಾಳಘಟ್ಟಮ್ಮ ದೇವಿಗೆ ಪೂಜಾರಿ ಶಿವಲಿಂಗಯ್ಯ ಅವರು ವಿವಿಧ ಪೂಜಾ ಕಾರ್ಯವನ್ನು ನೆರವೇರಿಸಿದರು.

ಇನ್ನು ಶ್ರೀ ಕಾಳಘಟ್ಟಮ್ಮ ದೇವಿಯನ್ನು ಗ್ರಾಮದ ಯುವಕರು ಅಡ್ಡೆಮೇಲೆ ಹೊತ್ತು ಸುಮಾರು ಮೂರು ಕಿಲೋಮೀಟರ್ಗ ದೂರ ಕಾಲ್ನಡಿಗೆಯಲ್ಲಿ ಒತ್ತು ಮೂಲಸ್ಥಳವಾದ ಮಲ್ಲಿಗೆರೆ ಗೇಟ್ ಬಳಿ ಇರುವ ದೇವಸ್ಥಾನಕ್ಕೆ ನೂರಾರು ಮಹಿಳೆಯರು ಮಡೆ ಮತ್ತು ಆರತಿಯೊಂದಿಗೆ ಆಗಮಿಸಿ ಸೋಮನ ಕುಣಿತವನ್ನು ವೀಕ್ಷಣೆ ಮಾಡಿ,

ನಂತರ ಪೂಜಾರಯ್ಯನವರಾದ ಶಿವಲಿಂಗಯ್ಯ ಅವರೊಂದಿಗೆ ಬೆಂಕಿಯ ಕೊಂಡದಲ್ಲಿ ಹಾದುಹೋದರು.

ಇನ್ನು ಈ ದೇವತಾ ಕಾರ್ಯದಲ್ಲಿ ಗುಡಿ ಗೌಡರುಗಳಾದ ಧನಂಜಯ, ಶಿರೇ ಗೌಡ, ನಂಜುಂಡಯ್ಯ, ನಾಗೇಶ್ ಇನ್ನು ಅನೇಕ ಸುತ್ತಮುತ್ತಲಿನ ಗ್ರಾಮಸ್ಥರುಗಳು ಈ ಸಂದರ್ಭದಲ್ಲಿ ಹಾಜರಿದ್ದು ದೇವಿಯ ಕೃಪೆಗೆ ಪಾತ್ರರಾದರು.
ವರದಿ: ಮಂಜುನಾಥ್ ತುರುವೇಕೆರೆ
https://www.janataa24.com/rajya-sabha-election-a-crushing-defeat-for-bjp-jds-alliance/