Janataa24 NEWS DESK

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೊ, ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ನೋ.47/74-75 ಸಮಿತಿ ,ಜನವರಿ 24 ಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆ, ತುಮಕೂರಿನ ಎಂಪ್ರೆಸ್ ಆಡಿಟೋರಿಯಂ ನಲ್ಲಿ ಇದೇ ತಿಂಗಳು 18 ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು.

ಈ ಕಾರ್ಯಕ್ರಮದ ಕರಪತ್ರವನ್ನು ತಾಲೂಕು ಸಂಚಾಲಕ .ಬಿ ಆರ್ ಕೃಷ್ಣಮೂರ್ತಿ, ನಗರ ಸಂಚಾಲಕ ಬಡಾವಣೆ ಶಿವರಾಜು, ಮತ್ತು ಮಹಿಳಾ ಸಂಚಾಲಕಿ ನಂದಿನಿ ರಮೇಶ್ ಅವರು ಬಿಡುಗಡೆಗೊಳಿಸಿದರು.

ಇದೇ ವೇಳೆ ತಾಲೂಕು ಸಂಚಾಲಕ ಕೃಷ್ಣಸ್ವಾಮಿ ಮಾತನಾಡಿ, ಈ ಸುವರ್ಣ ಮಹೋತ್ಸವಕ್ಕೆ ತಾಲೂಕಿನ ಸಮಸ್ತ ಜನತೆ ಆಗಮಿಸಬೇಕೆಂದು ಮನವಿ ಮಾಡಿದರು. ಮುಂದುವರೆದು ಮಾತನಾಡಿದ ಅವರು ಇದೇ ತಿಂಗಳು 13ನೇ ತಾರೀಕು ತಾಲೂಕಿಗೆ ಸಂವಿಧಾನ ಜಾಗೃತ ಜಾತಾ ರಥ ಆಗಮಿಸುತ್ತಿರುವ ಹಿನ್ನೆಲೆ, ನಾವುಗಳೆಲ್ಲ ಒಟ್ಟಾಗಿ ಬಹಳ ವಿಜೃಂಭಣೆಯಿಂದ ಈ ರಥವನ್ನು ಸ್ವಾಗತಿಸಬೇಕು ಎಂದು ತಾಲೂಕಿನ ಜನತೆಗೆ ನಮ್ಮ ಮಾಧ್ಯಮದ ಮುಖೇನ ಆಹ್ವಾನಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಂಚಾಲಕಿ ನಂದಿನಿ ರಮೇಶ್ ಮಾತನಾಡಿ, ತಾಲೂಕಿನ ಸಮಸ್ತ ಮಹಿಳೆಯರು ಸಹ ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಐವತ್ತು ವರ್ಷದ ಸುವರ್ಣ ಮಹೋತ್ಸವಕ್ಕೆ ಆಗಮಿಸಬೇಕಾಗಿ ವಿನಂತಿಸಿದರು.

ಪತ್ರಿಕ ಮಾಧ್ಯಮ ಗೋಷ್ಠಿಯಲ್ಲಿ ಡಿಎಸ್ಎಸ್ ಪದಾಧಿಕಾರಿಗಳಾದ, ಶೇಖರ್ ಅರಳಿಕೆರೆ, ನಗರ ಸಂಚಾಲಕಿ ಅನ್ನಪೂರ್ಣಮ್ಮ, ಶಶಿ ಗುಡ್ಡೇನಹಳ್ಳಿ, ಆಕಾಶ ಸೋಮನಹಳ್ಳಿ, ದೊರೆಸ್ವಾಮಿ, ಎಸ್, ಕೆರೆ, ರಾಘವೇಂದ್ರ ಸೋಮೇನಹಳ್ಳಿ. ಉಪಸ್ಥಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್