5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆ

ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ಫೆ 8.9 ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ 5ನೇ ವರ್ಷದ ವಾಲ್ಮೀಕಿ ಐತಿಹಾಸಿಕ ಜಾತ್ರೆಗೆ ಸಮುದಾಯದ ಬಂಧುಗಳು ಹೆಚ್ಚಾಗಿ ಭಾಗವಹಿಸುವಂತೆ ಸೋಮವಾರ ಪಟ್ಟಣದಲ್ಲಿ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ನಾರಾಯಣ ಮೂರ್ತಿ(ನಾಣಿ)ಮನವಿ ಮಾಡಿದ್ದಾರೆ.

Screenshot 2023 02 07 122459

ರಾಜನಹಳ್ಳಿ ವಾಲ್ಮೀಕಿ ಗುರುಪೀಠಾಧ್ಯಕ್ಷರು ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸುಮಾರು 257 ದಿನಗಳ ಕಾಲ ಹೋರಾಟ ನಡೆಸಿ ಸರ್ಕಾರವನ್ನು ಎಚ್ವರಿಸಿ ಮೀಸಲಾತಿ ಹೆಚ್ಚಿಸುವಲ್ಲಿ ಸಹಕಾರಿಯಾದ ಹಿರಿಮೆ ಅವರಿಗೆ ಸಲ್ಲುತ್ತದೆ. ಸದಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವದಲ್ಲಿ ಎಸ್ಸಿ ಎಸ್ಟಿ ಸಮಾಜದವರು ಸಂಘಟನೆಯೊಂದಿಗೆ ಭಾಗವಹಿಸುವ ಮೂಲಕ ನಮ್ಮ ಬೇಡಿಕೆಗಳನ್ನ ಸರ್ಕಾರದ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಅವಶ್ಯಕತೆ ಇದೆ ಎಂದು ವಾಲ್ಮೀಕಿ ಮಹಿಳಾ ಅಧ್ಯಕ್ಷೆ ರಂಗಮ್ಮ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಪದಾಧಿಕಾರಿಗಳಾದ ಸರೋಜಮ್ಮ, ಮಂಜಮ್ಮ, ರಮೇಶ್, ನಾಗೇಶ್, ಕೆ ರಾಂಪುರ, ಲಕ್ಷ್ಮೀನಾರಾಯಣ್, ರಾಮಾಂಜಿನಪ್ಪ, ಚಿತ್ತಗಾನಹಳ್ಳಿ ಚಂದ್ರು, ಬಲರಾಮ್, ನಾಗರಾಜ್, ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *