40% ಕಮಿಷನ್ ನಲ್ಲಿ ಬಿಜೆಪಿ ಸರ್ಕಾರ ಮುಳಗಿದೆ: ಶಾಸಕ ವೆಂಕಟರಮಣಪ್ಪ

ಪಾವಗಡ: ಇಮ್ರಾನ್ ಉಲ್ಲಾ

ತಾಲ್ಲೂಕಿನ ಗಡಿ ಭಾಗವಾದ ವಿರೂಪಸಮುದ್ರ ಗ್ರಾಮ ಪಂಚಾಯತಿಯ ಭಾಗದಲ್ಲಿ ಮಂಗಳವಾರ 2021- 22ನೇ ಸಾಲಿನ ಜಲಜೀವನ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಅನುದಾನದ ಅಡಿಯಲ್ಲಿ ಸುಮಾರು 284.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ನಂತರ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ರೀತಿಯ ಜೋಕರ್ ರಾಜಕೀಯ ಮಾಡುತ್ತಿದ್ದಾರೆ.

Screenshot 2023 01 03 204744

ಕೇವಲ 20 ರಿಂದ 30 ಸ್ಥಾನಗಳನ್ನು ಪಡೆದು ಬ್ಲಾಕ್ ಮೇಲ್ ಮೂಲಕ ಅಧಿಕಾರಕ್ಕೆ ಬರುವ ಹುನ್ನಾರದಲ್ಲಿದ್ದಾರೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಮೂಲಕ ಅಧಿಕಾರಕ್ಕೆ ಬರುತ್ತದೆ.

ವಿರುಪಸಮುದ್ರದಿಂದ  ನಾಗಲಾಪುರ ರಸ್ತೆಯ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷಗಳ ಗುಮ್ಮಘಟ್ಟದಿಂದ ಅಕ್ಕಮ್ಮನಹಳ್ಳಿ ರಸ್ತೆಯ ಅಭಿವೃದ್ಧಿಗೆ 50 ಲಕ್ಷಗಳ ವಿರುಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಪ್ರತಿ ಮನೆಗೆ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯಡಿಯ ಸುಮಾರು 284 ಲಕ್ಷ ಮಾಚರಾಜನಹಳ್ಳಿ ಗೇಟ್ ನಿಂದ ಗುಮ್ಮಘಟ್ಟ ,ಅಕ್ಕಮ್ಮನಹಳ್ಳಿ ರಸ್ತೆಯ ಅಭಿವೃದ್ಧಿಗೆ 5 ಕೋಟಿ ಬಸವನಹಳ್ಳಿ ಗ್ರಾಮದಲ್ಲಿ ರೂ.10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ಇನ್ನು ಅನೇಕ ಯೋಜನೆಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಅಧ್ಯಕ್ಷ ಎಚ್ ವಿ ವೆಂಕಟೇಶ್ ಮಾತನಾಡುತ್ತಾ,
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ ನಿಮ್ಮೆಲ್ಲರ ಆಶೀರ್ವಾದ ನಿಮ್ಮೆಲ್ಲರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ ಮತ್ತು ಜೆಡಿಎಸ್ ಸಂಯುಕ್ತ ಸರ್ಕಾರದಲ್ಲಿ ಮಂತ್ರಿ ಆಗಿದ್ದ ನಮ್ಮ ತಂದೆ ವೆಂಕಟರಮಣಪ್ಪ ತಾಲೂಕಿಗೆ ಹಲವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಅನುದಾನ ತಂದಿದ್ದರು ನಂತರ ಬಂದ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿಗಳಲ್ಲಿ ಉತ್ತಮ ಒಡನಾಟದಿಂದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತಂದಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ತಿಳಿಸಿದರು.

ತಾಲೂಕಿನ ಗೌಡೇಟಿ ಗ್ರಾಮದ ಶಾಲೆಯ ಕಟ್ಟಡದ ಗುದ್ದಲಿ ಪೂಜೆ ವೇಳೆ ಶಾಸಕರಿಗೆ ಮಕ್ಕಳು ಹೊಸ ವರ್ಷದ ಶುಭಾಶೆಯಗಳು ಹೇಳಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಂಕರ್ ರೆಡ್ಡಿ , ಪುರಸಭೆ ಸದಸ್ಯರಾದ ರಾಜೇಶ್,  ಹನುಮಂತರಾಯಪ್ಪ, ಶೇಷಗಿರಿ, ರವೀಂದ್ರರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಮ್ಮ , ಶಿಕ್ಷಕರಾದ ಉಗ್ರಪ್ಪ, ವಿಜಯರಾಜ್, ಎಇಇ  ಸುರೇಶ್, ವಿಶ್ವೇಶ್ವರಯ್ಯ, ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ್ ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *