JANATAA24 NEWS DESK
Tumkur: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳು–ಅಪಘಾತ ವಲಯ ನಾಮಕಾವಸ್ಥೆಗೆ ಮಾತ್ರ ಸೀಮಿತ ಆಯ್ತಾ..?
ತುಮ ರಂಬಲ್ ಸ್ಟ್ರಿಪ್ ಎಷ್ಟು mm ಅಳತೆಯಲ್ಲಿ ಬಳಸಬೇಕೆಂಬ ಪ್ರಮುಖವಾದ ಸಾಮಾನ್ಯ ಜ್ಞಾನ(MORTH Standards) ಇಲ್ಲದ ಇಂಜಿನಿಯರ್ ಗಳ ಕೊರತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಯುತ್ತಿರುವುದರಿಂದ ವಾಹನಗಳು ರಂಬಲ್ ಸ್ಟ್ರಿಪ್ ದಾಟುವ ಸಮಯದಲ್ಲಿ ಜಾರುತ್ತಿರುವುದು ಸಾಮಾನ್ಯವಾಗಿದೆ. ಮತ್ತು ಇದರಿಂದ ಬಹುತೇಕವಾಗಿ ಸಾಕಷ್ಟು ಬಾರಿ ರಸ್ತೆಯಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುತ್ತಾರೆ.
ಈ ಹಿಂದೆ ಇದ್ದ ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಶಾ ಪಂತ್ ರವರು ಈ ಬಗ್ಗೆ ಮಾಹಿತಿಯನ್ನು ಪಡೆದು ಅಪಘಾತಗಳನ್ನು ತಡೆಯಲು ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ರಸ್ತೆಯಲ್ಲಿ ಹಾಕಿದ್ದ ರಂಬಲ್ ಸ್ಟ್ರಿಪ್ ಹಂಪ್ಗಳಿಂದ ಆಗುತ್ತಿದ್ದ ಸಮಸ್ಯೆಯನ್ನು ಅರಿತು ಅದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಬಳಿ ಚರ್ಚೆ ನಡೆಸದೆ ಸಿಕ್ಕಸಿಕ್ಕ ಜಾಗಗಳಲ್ಲಿ ರಂಬಲ್ ಸ್ಟ್ರಿಪ್ ಹಂಪ್ ಗಳು ಮತ್ತು ಸೋಂಬೇರಿ ಅಧಿಕಾರಿಗಳ ಹೊಟ್ಟೆಯಾಕಾರದ ಹಂಪ್ ಗಳನ್ನು ಸಿಕ್ಕಸಿಕ್ಕಲ್ಲಿ ಹಾಕುತ್ತಿರುವುದು ಮತ್ತು ಅದಕ್ಕೆ ಅಪಘಾತ ವಲಯ ಎಂದು ನಾಮಕರಣ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಹಾಗಿದ್ದರೆ ಬೆಳಧರ ರೈಲ್ವೆ ಗೇಟ್ ಬಳಿಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತವಾಗಿರುವ ರೈಲ್ವೆ ಕಾಮಗಾರಿಗೆ ಸಂಬಂಧಿಸಿದಂತೆ 200 ಮೀಟರ್ ಗಳಷ್ಟು ಉದ್ದ ರಸ್ತೆ ಇಲ್ಲದೆ ಎರಡು ಕಡೆ ಹಂಪ್ಗಳನ್ನು ಹಾಕಲಾಗಿರುತ್ತದೆ ಧೂಳಿನಲ್ಲಿ ಜನರ ಸಂಚರಿಸುತ್ತಿದ್ದಾರೆ ಈ ಬಗ್ಗೆ ಕೋರ ಪೊಲೀಸ್ ಠಾಣೆಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದರು ಕೂಡ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಹಾಗಾದರೆ ರಸ್ತೆಯನ್ನು ಬಡವರು ಬಳಸಬಾರದೆ..?
ಎಲ್ಲರ ಬಳಿಯೂ ಜನರ ತೆರಿಗೆಯಿಂದ ಬಂದ ಇನೋವಾ ಕ್ರಿಷ್ಟ ಕಾರು ತೆಗೆದುಕೊಳ್ಳುವ ಸಾಧ್ಯವಿಲ್ಲ ದಯವಿಟ್ಟು ಜನ ಸಮಸ್ಯೆಗಳನ್ನು ಜನರೊಂದಿಗೆ ಕೂತು ಸ್ಥಳೀಯ ಪೊಲೀಸರು ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.