Document

17 ರಂದು ಬಿ ಎಸ್‌ ಪಿ ಯಿಂದ ಸ್ಥಳೀಯ ಅಭ್ಯರ್ಥಿಯಾಗಿ  ಸಿ. ಎ. ಎನ್ ಮಧು ನಾಮಪತ್ರ ಸಲ್ಲಿಕೆ…

17 ರಂದು ಬಿ ಎಸ್‌ ಪಿ ಯಿಂದ ಸ್ಥಳೀಯ ಅಭ್ಯರ್ಥಿಯಾಗಿ  ಸಿ. ಎ. ಎನ್ ಮಧು ನಾಮಪತ್ರ ಸಲ್ಲಿಕೆ…


ಮಧುಗಿರಿ : ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಹುಜನ ಸಮಾಜ ಪಕ್ಷದಿಂದ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಸಿ ಎ ಏನ್ ಮಧು ತಿಳಿಸಿದರು.




ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿ,ಬಹುಜನರು ಎಂದರೆ ಎಸ್‌ಸಿ, ಎಸ್‌ಟಿ, ಒಬಿಸಿ, ಮತೀಯ ಅಲ್ಪಸಂಖ್ಯಾತರು. ಇವರನ್ನು ಪ್ರತಿನಿಧಿಸುವ ಪಕ್ಷವಾಗಿ ಬಿಎಸ್‌ಪಿ ಇದೆ.‘ಶೇ 85ರಷ್ಟಿರುವ ಬಹುಜನರನ್ನು ಶೇ 15ರಷ್ಟು ಇರುವವರು ಶೋಷಣೆ ಮಾಡುತ್ತಿದ್ದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಎಸ್ಪಿ ಅಸ್ತಿತ್ವಕ್ಕೆ ಬಂದಿದೆ. ಬಹುಜನ ಸಮಾಜ ಪಕ್ಷ ಬೆಳೆಯದಂತೆ ಇಲ್ಲಸಲ್ಲದ ಸುಳ್ಳು ಹೇಳಿ, ವೈಮನಸ್ಸು ಮೂಡಿಸಿ ಅದನ್ನು ನಾಶ ಪಡಿಸಲು ಮನುವಾದಿಗಳು ಶ್ರಮಿಸುತ್ತಿದ್ದಾರೆ. ಇದನ್ನು ಬಹುಜನರು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳಬೇಕು,




ಬಹುಜನರು ಮೊದಲು ಅಂಬೇಡ್ಕರ್‌ ಅವರನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯ ನೀಡುವ ಜಾಗದಲ್ಲಿ ಶೋಷಣೆ ಮಾಡುವವರೇ ಕುಳಿತಿದ್ದಾರೆ. ಹಾಗಾಗಿ ಬಹುಜನರು ಆಳುವ ವರ್ಗಗಳಾಗಿ ರೂಪುಗೊಳ್ಳಬೇಕು. ಅಂಬೇಡ್ಕರ್‌ ಅವರ ಆಸೆ ಈಡೇರಿಸುವ ಬದ್ಧತೆ ಬೆಳೆಸಿಕೊಳ್ಳಬೇಕು’ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಹೋರಾಟಗಳನ್ನು ಮಾಡಿದ್ದು, ಮಧುಗಿರಿಯ ಜಿಲ್ಲೆಯ ಕನಸು ಕಂಡಿದ್ದು ಕ್ಷೇತ್ರದ ಎಲ್ಲಾ ಹಂತದ ಅಭಿವೃದ್ಧಿಗಾಗಿ  ಕ್ಷೇತ್ರದ ಮಗನಾಗಿ  ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

image editor output image265915128 1681654916135



 ಬಿ ಎಸ್ ಪಿ ಪಕ್ಷದ ಕೇಂದ್ರ ಹಾಗೂ ರಾಜ್ಯದ  ಮುಖಂಡರಾದ ಮಾರಾಸಂದ್ರ ಮುನಿಯಪ್ಪ, ಕೃಷ್ಣಮೂರ್ತಿ, ಅಶೋಕ್ ಸಿದ್ದಾರ್ಥ್, ಗೋಪಿನಾಥ್ ಇನ್ನು ಹಲವು ಮುಖಂಡರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ  ಉಪಸ್ಥಿತರಿದ್ದು, ಸಹಸ್ರಾರು ಮತದಾರರು ನಾಮಪತ್ರ ಸಲ್ಲಿಕೆ ದಿನದಂದು ಸಾಕ್ಷಿ ಭೋಗತರಾಗುತ್ತಾರೆ,

 ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎಂಬ ಪ್ರಶ್ನೆಗೆ,   ನನಗೆ ಬೇರೆ ಪಕ್ಷಗಳ ವಿಚಾರ ಗೊತ್ತಿಲ್ಲ ನಮ್ಮ ಪಕ್ಷದ ಸಿದ್ಧಾಂತಗಳಿಗೆ ಮಾರುಹೋಗಿ ಜನತೆ ಭವ್ಯ ಮತಗಳ ಮೂಲಕ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಉತ್ತರಿಸಿದರು.



 ನಾಮಪತ್ರ ಸಲ್ಲಿಕೆಯ ಮೆರವಣಿಗೆಯು ನಮ್ಮ ಕಚೇರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಚುನಾವಣಾ ಅಧಿಕಾರಿಗಳ ಕಚೇರಿಗೆ ತಲುಪಲಿದೆ, ಸಂದರ್ಭದಲ್ಲಿ ಬಿ ಎಸ್ ಪಿ ತಾಲೂಕು ಅಧ್ಯಕ್ಷರಾದ ಗೋಪಾಲ್, ಆಂಜನೇಯ, ಶಿವಕುಮಾರ್,  ಶಿವಣ್ಣ, ರಂಗೇಗೌಡ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು…

Document

Leave a Reply

Your email address will not be published. Required fields are marked *