Document

ಹೆಚ್. ಆಂಜನೇಯನವರಿಗೆ ಎಂ ಎಲ್ ಸಿ ಮಾಡಿ ಸಚಿವ ಸ್ಥಾನ ನೀಡಿ ಎಂಬುದಾಗಿ ದಲಿತ ಸಂಘಗಳಿಂದ ಒತ್ತಾಯ.

Janataa24 NEWS DESK

IMG 20230515 WA0020

ಹೆಚ್. ಆಂಜನೇಯನವರಿಗೆ ಎಂ ಎಲ್ ಸಿ ಮಾಡಿ ಸಚಿವ ಸ್ಥಾನ ನೀಡಿ ಎಂಬುದಾಗಿ ದಲಿತ ಸಂಘಗಳಿಂದ ಒಮ್ಮತದಿಂದ ಒತ್ತಾಯ.

IMG 20230515 WA0021



ಪಾವಗಡ: ಪಟ್ಟಣದ ಎಸ್.ಎಸ್.ಕೆ.ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಹಾಗೂ ದಲಿತ ಮುಖಂಡ ಹೆಚ್.ಶೇಷ ನಂದನ್ .ಮಾತನಾಡಿ
ಈ ಹಿಂದೆ 2013-14 ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರಿಗೆ(G Parameshwar) ನೀಡಿದಂತಹ ರೀತಿಯಲ್ಲಿ ಈ ಬಾರಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸೋತಂತಹ ಎಚ್ ಆಂಜನೇಯ?H Anjaneya) ಅವರು ಸಹ ಅದೇ ರೀತಿಯಲ್ಲಿ ಎಂಎಲ್ ಸಿ (MLC) ನೀಡಿ ಸಚಿವ ಸ್ಥಾನ ನೀಡಬೇಕು ಎಂಬುದಾಗಿ ದಲಿತ ಸಂಘಗಳಿಂದ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್(DK SHIVAKUMAR) ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಲ್ಲಿ(Siddaramaiah) ಮನವಿ ಮಾಡಿಕೊಂಡರು.



ಡಿ.ಎಸ್.ಎಸ್.ಮುಖಂಡ ನಾರಾಯಣಪ್ಪ ಮಾತನಾಡಿ ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ(Social welfare Department)ಯ ಸಚಿವರಾಗಿ ಉತ್ತಮ ಅಧಿಕಾರ ವಹಿಸಿದ್ದರು ಹಾಗೂ ದಲಿತ,ಅಲ್ಪಸಂಖ್ಯಾತರ ಬಹಳಷ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಗಳು ನಿರ್ಮಾಣ ಮಾಡಿದಂತಹ ಕೀರ್ತಿ ಹೆಚ್ಚು ಆಂಜನೇಯ ಅವರಿಗೆ ಸೇರುತ್ತದೆ.ಅವರ ಅವಧಿಯಲ್ಲಿ ಬಹಾಳಷ್ಟು ಅಭಿವೃದ್ಧಿ ಕೆಲಸಗಳು ಸಹ ಆಗಿವೆ.ಎಚ್ ಆಂಜನೇಯ(H Anjaneya)ನವರು ಹಿರಿಯ ಮುತ್ಸದಿ ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದಾರೆ.



ಎ.ಎಸ್.ಯೋಗಶ್ ಮಾತನಾಡಿದರು ಈ ಹಿಂದೆ ಹೆಚ್.ಅಂಜೀನೆಯ(H Anjaneya) ರವರು ಸಾವಿರಾರು ಕೋಟಿ ಅನುದಾನ ನೀಡಿ ಅಲ್ಪಸಂಖ್ಯಾತರ ಹಾಗೂ ದಲಿತರ ಕಾಲೋನಿಗಳಲ್ಲಿ ಉತ್ತಮ ರಸ್ತೆಗಳು ಚರಂಡಿಗಳು ನಿರ್ಮಾಣ ಮಾಡಿದ್ದು ಅವರ ಅವಧಿಯಲ್ಲಿ.

IMG 20230515 WA0018



ಈ ವೇಳೆ ನಲಿಗಾನಹಳ್ಳಿ ದುಗ್ಗಪ್ಪ .ವೈ.ಎನ್.ಹೊಸಕೋಟೆ ಅಂಜಿಬಾಬು.ಕಾಂಗ್ರೆಸ್ ಪರಿಶಿಷ್ಟ ಪಂಗಡದ ನಗರ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್.ಗಂಗಧರ್.ಮಾರಪ್ಪ.ವಿಜಯ್ ಕುಮಾರ್.ತಿಮ್ಮಾರಾಜು.ನಂದೀಶ್.ಮೋಹನ್ ಕುಮಾರ್.ಹನಮಂತರಾಯಪ್ಪ. ಅಳಪ್ಪ.ಅಂಜನ್.ಮದ್ದೇಟಪ್ಪ.‌ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ವರದಿ

ಪಾವಗಡ: ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *