Document

ಜೆಡಿಎಸ್ ಗೆ ಹಾಕಿದ 71,000 ತಾಲೂಕಿನ ಮತದಾರರಿಗೆ ತುಂಬು-ಹೃದಯದ ಧನ್ಯವಾದಗಳು- ಕೆ ಎಮ್ ತಿಮ್ಮರಾಯಪ್ಪ.

Janataa24 NEWS DESK


ಸೋಲನ್ನು ನಾವು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ವಿವಿಧ ಚುನಾವಣೆಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ: ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ.

ಜೆಡಿಎಸ್ ಪಕ್ಷವನ್ನು ನಂಬಿ ಮತ ಹಾಕಿದ 71,000 ತಾಲೂಕಿನ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು.

IMG 20230515 WA0003



ಪಾವಗಡ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ 2023ನೇ ಜೆಡಿಎಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿ ಎಪ್ಪತ್ತು ಸಾವಿರ ಮತ ಪಡೆದ ಸೋತ ಹಿನ್ನೆಲೆಯಲ್ಲಿ ಆರ್ಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನನಗೆ ಇಷ್ಟರ ಮಟ್ಟಿಗೆ ಮತದಾನ ಮಾಡಿದಂತಹ ಎಲ್ಲಾ ನನ್ನ ತಾಲೂಕಿನ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತಿದ್ದೇನೆ.

ಜನರ ತೀರ್ಪನ್ನು ಸ್ವಾಗತಿಸುತ್ತೇನೆ. ಈ ಬಾರಿ ಕ್ಷೇತ್ರದ ಕಾರ್ಯಕರ್ತರು ನಾಯಕರು ನಮ್ಮ ಪಕ್ಷದ ಪ್ರಣಾಳಿಕೆಯನ್ನು ನಂಬಿ ಶಿಸ್ತಿನ ಸಿಪಾಯಿ ಗಳಂತೆ ಕಾರ್ಯನಿರ್ವಹಿಸುತ್ತಾರೆ. ಕೆಲವೊಂದು ಸಣ್ಣಪುಟ್ಟ ಅಂತರದಲ್ಲಿ ಸೋತಿರುತ್ತೇವೆ ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಎದೆಗುಂದದೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಲೋಕಸಭೆ ಚುನಾವಣೆಯಲ್ಲಿ ಧೈರ್ಯದಿಂದ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸಬೇಕು ನಿಮ್ಮ ಬೆಂಬಲಕ್ಕೆ ಸಾದಾ ನಿಂತಿರುತ್ತದೆ ತಾಲೂಕಿನ ಜನತೆಯ ಅಭಿವೃದ್ಧಿಗಾಗಿ ಶಾಶಕರು ಮಾಡುವ ಕೆಲಸಕ್ಕೆ ನ್ಯಾಯಯುತವಾಗಿ ನಮ್ಮ ಬೆಂಬಲ ಸದಾ ಇರುತ್ತದೆ.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡುತ್ತಾ ಜಿಲ್ಲೆಯಲ್ಲಿ ಆರು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ನಮಗಿದ್ದು ಆದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮಹಿಳಾ ಮತದಾರರನ್ನು ಅವರ ಪಕ್ಷದ ಪರವಾಗಿ ಬೆಳೆಯಲು ಹೆಚ್ಚು ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಜಿಲ್ಲಾದ್ಯಂತ ಒಗ್ಗೂಡಿಸಿ ಮುನ್ನಡೆಸಲು ತೀರ್ಮಾನಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಸೋಲು ಗೆಲುವು ರಾಜಕೀಯ ಪಕ್ಷಕ್ಕೆ ಅನಿವಾರ್ಯ ಪಾವಗಡ ತಾಲೂಕಿನಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸ ಹೆಚ್ಚಾಗಿದ್ದು 71,000ಕ್ಕೂ ಅಧಿಕ ಮತ ಪಡೆದು ಆದರೆ ಸಣ್ಣ ಪುಟ್ಟ ವ್ಯತ್ಯಾಸಗಳಿಂದ ಅಲ್ಪ ಅಂತರದಲ್ಲಿ ಸೋತಿರುತ್ತೇವೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಮಾತನಾಡುತ್ತಾ , ನೂತನವಾಗಿ ಆಯ್ಕೆಯಾಗಿರುವ ಶಾಸಕರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಲಿ ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಆದರೆ ನಮ್ಮ ಕಾರ್ಯಕರ್ತರ ಮೇಲೆ ದ್ವೇಷ ರಾಜಕಾರಣ ಮಾಡಿದರೆ ನಮ್ಮ ಪಕ್ಷದ ಎಲ್ಲಾ ಮುಖಂಡರು ಧೈರ್ಯದಿಂದ ಎದುರಿಸುತ್ತೇವೆ ಎಂದು ತಿಳಿಸಿದರು. ಪಕ್ಷಕ್ಕೆ ಜನರ ಆಶೀರ್ವಾದ ಸ್ಪಂದನೆ ಪ್ರೀತಿ ಎಂದು ಕಡಿಮೆಯಾಗಿಲ್ಲ.

IMG 20230515 WA0004



ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲೂಕು ಅಧ್ಯಕ್ಷರಾದ ಬಲರಾಮರೆಡ್ಡಿ ಕಾರ್ಯಾಧ್ಯಕ್ಷರು ಎನ್ ಎ ಈರಣ್ಣ ಪ್ರಧಾನ ಕಾರ್ಯದರ್ಶಿ ಗೋವಿಂದ್ ಬಾಬು ಮುಖಂಡರಾದ ಎಸ್ ಕೆ ರೆಡ್ಡಿ. ಚನ್ನಕೇಶವ ರೆಡ್ಡಿ. ರಾಮಕೃಷ್ಣ ರೆಡ್ಡಿ. ಶಿವಕುಮಾರ್. ವೇಟನರಿ ಉಗ್ರಪ್ಪ,   ವಕ್ತಾರರಾದ ಅಕ್ಲಪ್ಪ ನಾಯ್ಡು, ಗಂಗಾಧರ ನಾಯ್ಡು ತಾಳೆಮರದಲ್ಲಿ ಆಂಜನೇಯಲು. ಪುರಸಭೆ ಸದಸ್ಯರು ಜಿ ಎ ವೆಂಕಟೇಶ್. ಮಣಿ. ಶ್ರೀರಾಮ ಸೇನೆ ರಾಮಾಂಜಿ ಬ್ರಹ್ಮೇಂದ್ರ ಕುಮಾರ್ ಹಾಗೂ ಸ್ಟಾರ್ ಕಾರ್ಯಕರ್ತರು ಉಪಸ್ಥಿತರಿದ್ದರು.



ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *