Document

ಹಳ್ಳಿಯ ಸೊಬಗನ್ನು ನೆನಪಿಸಿದ ಮಣಿಚಂಡೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ.

Janataa24 NEWS DESK



ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ವ್ಯಾಪ್ತಿಗೆ ಬರುವ ಮಣಿ ಚಂಡೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದ ಹಿನ್ನೆಲೆ.

IMG 20230923 WA0001



ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿನಿಯರಿಂದ ಹಾಡು ನೃತ್ಯ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿನಿಯರು ಹಳ್ಳಿಯ ಸೊಬಗನ್ನು ನೆನಪಿಸುವ ನೃತ್ಯ ಹಾಗೂ ಭಜನೆ ಮಾಡುವುದರ ಮೂಲಕ ಗಣೇಶ ಆರಾಧನೆ ಮಾಡಿದರು.

IMG 20230923 WA0002



ಇನ್ನು ಇದೇ ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ, ಅವರು ದಿನಾಂಕ 21.9.2023 ರಂದು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ತುಮಕೂರು ಇಲ್ಲಿ ನಡೆದ

ಯೋಗ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಇವರಿಗೆ ಶಾಲೆಯ ಪ್ರಾಂಶುಪಾಲ ಗದಗಯ ಹಿರೇಮಠ್ ಹಾಗೂ ಶಿಕ್ಷಕರ ಬಳಗ ಅಭಿನಂದಿಸಿದರು.



ಇದೇ ವೇಳೆ ಪ್ರಾಂಶುಪಾಲರಾದ ಗದಗಯ ಹಿರೇಮಠ್, ಶಿಕ್ಷಕರಾದ ಮುಬಿನ್ ತಾಜ್, ಡಿ ಪಿ ವೇಣುಗೋಪಾಲ್, ಶಿವಣ್ಣ, ಗುರುಪ್ರಸಾದ್, ವಿನೋದ್, ಶಿಲ್ಪ, ಸಭಿಹ ಬಾನು, ಗೀತಾ ,ಚೇತನ್, ಆಶಾ ,ರಮೇಶ್, ಹಾಗೂ ಸಿಬ್ಬಂದಿ ವರ್ಗ ಜೊತೆಗೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

IMG 20230923 WA0000

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *