Document

ರೈತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ: ಶಾಸಕ ಎಂ ಟಿ ಕೃಷ್ಣಪ್ಪ.

Janataa24 NEWS DESK

IMG 20230922 WA0014



ಗುಬ್ಬಿ: ರೈತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ತಿಳಿಸಿದರು.



ತಾಲ್ಲೂಕಿನ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಮತ್ತು ಹಾಗೂ ನೂತನ ಕಟ್ಟಡ ಉದ್ಘಾಟಸಿ ಮಾತನಾಡಿದ ಅವರು

IMG 20230922 WA0015



ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಅಧಿಕಾರಿಗಳ ವರ್ಗಾವಣೆ ಮತ್ತು ಕಮಿಷನ್ ದಂಧೆಯಲ್ಲಿ ತೊಡಗಿದೆ, ರೈತರ ಪರವಾಗಿ ಕೆಲಸ ಮಾಡುಡುತ್ತಿಲ್ಲ ಎಂದರು. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಸಭೆ ಕರೆದು ಪಾದಯಾತ್ರೆ ಹೋರಾಟ ರೂಪಿಸಲಾಗುವುದು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ್ದು ಸಂಘದ ಸಾಲ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್ ಸಿ ಪ್ರಭಾಕರ್ ಮಾತನಾಡಿ ಸಾಲ ಸೌಲಭ್ಯ ಪಡೆದ ರೈತರು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಪ್ರೇಮಕುಮಾರ್ ಮಾತನಾಡಿ ಸಹಕಾರ ಸಂಘದಲ್ಲಿ ರೈತರಿಗೆ ಎರಡು ಕೋಟಿಯವರೆಗೆ ಸಾಲ ನೀಡಲಾಗುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಈ ಸಾಲ 5 ಕೋಟಿಯ ವರೆಗೆ ತಲುಪಲಿದೆ ಎಂದರು.

IMG 20230922 WA0013



ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸುರೇಶ್ ಗೌಡ, ಸಂಘದ ಉಪಾಧ್ಯಕ್ಷ ಡಿ ಹುಚ್ಚವೀರೇಗೌಡ, ಮುಖ್ಯ ಕಾರ್ಯನಿರ್ವಣಾಧಿಕಾರಿ ಮೋಹನ್ ಕುಮಾರ್ ಎಂ ಸಿ, ನಿರ್ದೇಶಕರಾದ ಬಸವರಾಜಯ್ಯ ಬಿ ಆರ್, ಕುಮಾರ್ ಕೆ ಎನ್, ನಾಗಯ್ಯ, ಚಂದ್ರಯ್ಯ, ವಿಕಾಸ್ ಗೌಡ, ಬಸವೇಶ್, ಪುಟ್ಟನರಸಯ್ಯ, ಟಿ ಎನ್ ರಾಧಾ, ಕವಿತ, ವಿಜಯಕುಮಾರ್ ಉಪಸ್ಥಿತರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *