ಚಿಕ್ಕನಾಯಕನಹಳ್ಳಿ: ವಿಜಯ್ ಕುಮಾರ್

ಚಿಕ್ಕನಾಯಕನಹಳ್ಳಿ: ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗೆ ಸ್ವಲ್ಪ ಮಟ್ಟಿಗೆ ನೆರವು ನೀಡುವುದು ಒಳ್ಳೇಯ ಕಾರ್ಯ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಪಟ್ಟಣ ದ ತೀನಂಶ್ರೀ ಭವನದಲ್ಲಿ ಶನಿವಾರ ಶ್ರೀ ರಾಮ್ ಸೇವಾ ಸಂಕಲ್ಪ ಹಾಗೂ ಶ್ರೀರಾಮ್ ಪೈನಾನ್ಸ್ ಲಿಮಿಟೆಡ್ ವತಿಯಿಂದ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಚಾಲಕರು ಕ್ಲೀನರ್ ಗಳ ಮಕ್ಕಳು ಸೇರಿದಂತೆ ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಶಿಕ್ಷಣಕ್ಕಾಗಿ ಈ ರೀತಿಯ ಹಣದಿಂದ ಹಣ ಮಾಡುವ ಸಂಘ ಸಂಸ್ಥೆಗಳು ಪ್ರೋತ್ಸಾಹಧನ ನೀಡುವಂತಹ ಮನಸ್ಸು ಮಾಡಿ ಈ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಪ್ರತಿಯೊಬ್ಬರು 18 ವರ್ಷದ ವರೆಗೆ ಶಿಕ್ಷಣ ವನ್ಮು ಖಡ್ಡಾಯವಾಗಿ ಮಾಡುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀರಾಮ ಪೈನಾನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಧರ್ ಮಠಮ್ 1974ರಲ್ಲಿ ಪ್ರಾರಂಭವಾದ ನಮ್ಮ ಚೀಟ್ಸ್ 1979ರಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಪೈನಾನ್ಸ್ ಪ್ರಾರಂಭಿಸಲಾಯಿತು..
ಅದರಂತೆ ಇಂದು 2022ರಲ್ಲಿ ಶ್ರೀ ರಾಮ ಪೈನಾನ್ಸ್ ಕಂಪನಿ ಲಿಮಿಟೆಡ್ ಮಾಡುವ ಮೂಲಕ ಭಾರತ ದೇಶದಾದ್ಯಂತ 4ಸಾವಿರಕ್ಕು ಹೆಚ್ಚು ಶಾಖೆಗಳನ್ನು ಹೊಂದುವ ಮೂಲಕ 22ಲಕ್ಷ ಜನರು ನೊಂದಣಿಯಾಗಿದ್ದು 79ಸಾವಿರ ಜನ ಕೆಲಸ ಮಾಡುತ್ತಿದ್ದು 2.6.ಟ್ರೀಲಿಯನ್ ವಹಿವಾಟು ನಡೆಸುತ್ತಿದ್ದು ಲಾರಿ ಚಾಲಕರನ್ನು.ಕ್ಲೀನರ್ ಗಳನ್ನುಲಾರಿ ಮಾಲೀಕರನ್ನಾಗಿಸುವ ಮುಖ್ಯ ಉದ್ದೇಶವಾಗಿದ್ದು ಇದರೊಂದಿಗೆ ಗ್ರಾಮೀಣಭಾಗದ ಜನರಿಗೆ ಉದ್ಯೋಗ ಕಲ್ಪಿಸುವುದು ಮುಖ್ಯವಾಗಿದೆ ಹಾಗೂ 2013ರಿಂದ ಈ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಪ್ರಸ್ತುತ 50ಸಾವಿರ ವಿದ್ಯಾರ್ಥಿಗಳಿಗೆ 8ನೇ ತರಗತಿ ಯಿಂದ ಪಿಯುಸಿಯ ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಹಾಗೇ ಇಂದು 208 ಜನ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದ ಅವರು ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಕಸಾಪ ಅದ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ಸಮಾದಜಲ್ಲಿರುವ ನಾವುಗಳು ನಮ್ಮ ದುಡಿಮೆಯ ಒಂದುಭಾಗವನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಸಮಾಜದ ಋಣ ತೀರಿಸಿದಂತೆ ಅಂತಹ ಕೆಲಸವನ್ನು ಮಾಡುತ್ತಿರುವ ಈ ಕಂಪನಿ ನಮ್ಮ ಜನರೊಂದಿಗೆ ವಿಚಾರ ಸಂಕೀರ್ಣ ಗಳು.ಅರಿವು ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆಟೋಚಾಲಕರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್. ಕನ್ನಡಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ .ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಸೋಮಶೇಖರ್ .ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಈಶ್ವರಪ್ಪ .ರೋಟರಿ ಕ್ಲಬ್ ಅಧ್ಯಕ್ಷೆ ಸುನೀತಾ ಪ್ರಸನ್ನ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಘುವಾಹನ ಚಾಲಕರ ಸಂಘದ ಕಾರ್ಯದರ್ಶಿ ಮೇಲನಹಳ್ಳಿ ರಘು. ಬ್ರಾಂಚ್ ಮ್ಯಾನೇಜರ್ ವಿಜಯ್ ಕುಮಾರ್ ಎ.ವಿ. ರಾಘುವೇಂದ್ರ. ಪಿ.ಜಿ.ವಿಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.
.
Supper