Document

ಹೆಚ್. ಎಮ್ ಗಣೇಶ್ ಪ್ರಸಾದ್ ಅವರ ಹುಟ್ಟು ಹಬ್ಬದ ಪ್ರಯುಕ್ತ-ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತೆ ಒಂದು ದಿನದ ಉಚಿತ ಕಾರ್ಯಾಗಾರ ಮತ್ತು ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ

IMG 20221225 WA0007

ಗುಂಡ್ಲುಪೇಟೆ: ಕಾಂತರಾಜು


ಗುಂಡ್ಲುಪೇಟೆ: ಹೆಚ್. ಎಮ್ ಗಣೇಶ್ ಪ್ರಸಾದ್ ಅವರ ಹುಟ್ಟು ಹಬ್ಬದ ಪ್ರಯುಕ್ತ-ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತೆ  ಒಂದು ದಿನದ ಉಚಿತ ಕಾರ್ಯಾಗಾರ ಮತ್ತು ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜೆ ಎಸ್ ಎಸ್ ಸಂಸ್ಥೆಯ ಇತಿಹಾಸ ಪ್ರಾಧ್ಯಾಪಕ ಮಹದೇವಸ್ವಾಮಿ ಮಾತನಾಡುತ್ತಾ ಮಹದೇವಪ್ರಸಾದ್ ಅವರು ಮಹತ್ವದ ಉದ್ದೇಶ ಇಟ್ಟು ಕೊಂಡು ಸಾಮಾಜಿಕ ಮತ್ತು ಶೈಕ್ಷಣಿಕ ಬೆಳೆವಣಿಗೆಗೆ ಪೂರಕವಾಗಿ ಸಂಗಮ ಪ್ರತಿಷ್ಠಾನ ಸ್ಥಾಪನೆ ಮಾಡಿದರು ಈ ಪ್ರತಿಷ್ಠಾನ ಇಂದು ನೊಂದವರು ಬಡವರು ಪ್ರತಿಯೊಂದು ಜನರಿಗೂ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ ಇದು ಹೀಗೆಯೇ ಮುಂದುವರಿಯುತ್ತದೆ ಹಾಗೆಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆಯುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತೆಗೆದುಕೊಳ್ಳುವ ಮೂಲಕ ಉನ್ನತ ಮಟ್ಟದ ಅಧಿಕಾರಿಗಳಾಗುವ ಕಡೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಗಬೇಕು ಎಂಬ ದೃಷ್ಟಿಯಿಂದ ಇಂತಹ ಹಲವಾರು ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳು ದಿಕ್ಕಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

IMG 20221225 WA0006


ಕಾರ್ಯಕ್ರಮ ವನ್ನು ಹೆಚ್.ಎಮ್ ಗಣೇಶ್ ಪ್ರಸಾದ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡುತ್ತಾ ನಮ್ಮ ತಂದೆ ಮಹದೇವ ಪ್ರಸಾದ್ ಅವರು 1990ರಲ್ಲಿ ಸ್ಥಾಪನೆ ಸಂಗಮ ಪ್ರತಿಷ್ಠಾನವನ್ನು ಸ್ಥಾಪನೆ ಮಾಡಿದರು ಅವರ ಅವಧಿಯಲ್ಲಿ ಕೂಡ ಈ ಪ್ರತಿಷ್ಠಾನದ ಮೂಲಕ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದಾರೆ ಸಾಮೂಹಿಕ ವಿವಾಹ , ಬಡ ಜನರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವ ಕಾರ್ಯ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ನೆರವು ನೀಡಿದ್ದಾರೆ.

IMG 20221225 WA0011

ಅದರಂತೆ ಅವರ ಅಕಾಲಿಕ ಮರಣದ ನಂತರ ನಾವು ಮಹದೇವ ಪ್ರಸಾದ್ ಅವರ ಹಾದಿಯಲ್ಲಿ ಸಾಗುತ್ತಾ ಬರುತ್ತಿದ್ದೇವೆ ಕರೋನ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ನೀಡುವುದರ ಜೊತೆಗೆ ಸಾವನ್ನಪ್ಪಿದ್ದ ಕುಟುಂಬಗಳಿಗೂ ಧನಸಹಾಯ ನೀಡಲು ಮುಂದಾಗಿದೆ ಹಾಗೆಯೇ ತಾಲ್ಲೂಕಿನಲ್ಲಿ ಇದುವರೆಗೂ 65 ದೇವಾಲಯಗಳ ಜಿರ್ಣೋಧಾರ ಮಾಡಲು ನೆರವು ಮತ್ತು ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಬೆಳೆಯಲು ಕೂಡ ವಿವಿಧ ಕಾರ್ಯಕ್ರಮಗಳ ಜೊತೆಗೆ ಸ್ಪರ್ಧಾ ಪರೀಕ್ಷೆಗಳ ತೆಗೆದುಕೊಂಡು ಮುನ್ನಡೆಯಲು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಹಾಗೆಯೇ ಕ್ರೀಡಾ ಚುಟುವಟಿಕೆಗಳಿಗೂ ಪ್ರೋತ್ಸಾಹ ನೀಡಿ ಹಲವಾರು ಆಟಗಳನ್ನು ಹಮ್ಮಿಕೊಂಡು ಕ್ರೀಡಾ ಚಟುವಟಿಕೆಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ ನಮ್ಮ ಸಂಸ್ಥೆ ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಸಹ ಹಲವಾರು ಕವನ ಸಂಕಲನ, ಕಾದಂಬರಿ, ಸಾಮಾನ್ಯ ಜ್ಞಾನ ಪುಸ್ತಕ ಕ್ಯಾಲೆಂಡರ್ ಗಳನ್ನು ಮುದ್ರಣ ಮಾಡುವ ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಸಾಗುತ್ತಿರುವುದ ಕಾಣಬಹುದು. ಹೀಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಪರ ಯೋಜನೆಗಳಿಗೆ ಒತ್ತು ನೀಡುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

IMG 20221225 WA0010


ಚಾಮುಲ್ ನಿರ್ದೇಶಕ ಹೆಚ್.ಎಸ್ ನಂಜುಂಡ ಪ್ರಸಾದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಬ್ಬಹಳ್ಳಿ ಮಹೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶೈಲೇಶ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮುನಿರಾಜು, ಉಜ್ವಲ ಅಕಾಡೆಮಿಯ ಲೇಖಕ ಮಂಜುನಾಥ್ ಆರ್, ಆನಂದ್, ಮತ್ತಿತರರು ಉಪಸ್ಥಿತರಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

IMG 20221225 WA0008
Document

Leave a Reply

Your email address will not be published. Required fields are marked *