ಚಾಮರಾಜನಗರ: ಶಿವು
ಇಂದು ಚಾಮರಾಜನಗರದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಹೊಸಪೋಡು ಕಾಲೋನಿ ಬಿಳಿಗಿರಿರಂಗನಬೆಟ್ಟ ಯಳಂದೂರು ತಾಲೂಕು ಚಾಮರಾಜನಗರ ಜಿಲ್ಲೆ ಇವರ ವತಿಯಿಂದ ಇಂದು ಜಿಲ್ಲಾಡಳಿತ ಭವನದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಆದಿವಾಸಿ ಸಮುದಾಯದ ಬುಡಕಟ್ಟು ಜನಾಂಗದ ಸ್ವತಂತ್ರ ಹೋರಾಟಗಾರರಾದ ಆದಿವಾಸಿ ನಾಯಕ ಭಗವಾನ್ ಬಿರ್ಸಾ ಮುಂಡರವರ ಜನ್ಮದಿನೋತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು ಇಂದು ಚಾಮರಾಜನಗರ ಜಿಲ್ಲೆಯ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಬಿರ್ಸಾ ಮುಂಡರವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ಈ ಮೆರವಣಿಗೆ ಉದ್ಘಾಟನೆಯನ್ನು ಸನ್ಮಾನ್ಯ ಶಾಸಕರಾದ ಹನೂರು ಕ್ಷೇತ್ರ ನರೇಂದ್ರ ಅವರು ಉದ್ಘಾಟಿಸಿದರು ನಂತರ ಜಿಲ್ಲಾಡಳಿತ ಭವನದ ಜೆಎಚ್ ಪಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಶಾಸಕರಾದ ಮಾಜಿ ಸಚಿವರು ಆದ ಶ್ರೀಯುತ ಸಿ ಪುಟ್ಟರಂಗ ಸಿಟ್ರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದ ಹಲವರು ಗಂಡನ ಗುರುತಿಸಿ ಅವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು, ಜೊತೆಗೆ ಬುಡಕಟ್ಟು ಸಮುದಾಯದ ಮೀಸಲಾತಿಯ ವಿಷಯವನ್ನು ಸಂಘದ ಮುಖಂಡರು ಆದಂತಹ ಡಾಕ್ಟರ್ ಮಾದೇಗೌಡ ಸಿ ರವರು ಉಪಾಧ್ಯಕ್ಷರು ಲ್ಯಾಂಪ್ ಸಂಸ್ಥೆ ಇವರು ಸಮುದಾಯದ ಪ್ರಾಸ್ತಾವಿಕ ನುಡಿಯನ್ನ ಮಾಡಿದರು ಪ್ರಸ್ತುತ ಎಸ್ ಟಿ ಸಮುದಾಯಕ್ಕೆ ಏಳು ಪರ್ಸೆಂಟ್ ಮೀಸಲಾತಿ ಇದ್ದು ಆ ಏಳು ಪರ್ಸೆಂಟ್ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಮೂರು ಪರ್ಸೆಂಟ್ ಕೊಡುವಂತೆ ಸನ್ಮಾನ್ಯ ಜಿಲ್ಲಾ ಆಡಳಿತ ಅಧಿಕಾರಿ ರವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗಿರಿಜನ ಸಮುದಾಯದ ಅಥವಾ ಸೋಲುಗೆ ಸಮುದಾಯದ ಕಲೆ ಮತ್ತು ನೃತ್ಯ ಹಲವು ಚಳುವಳಿಗಳನ್ನು ವೇದಿಕೆಯಲ್ಲಿ ಮಾಡಲಾಯಿತು ಜೊತೆಗೆ ಭಗವಾನ್ ಬಿಡಿಸ ಮುಂಡರವರ ಜೀವನ ಚರಿತ್ರೆ ಅವರ ನಡೆದ ಬಂದ ದಾರಿಯನ್ನ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಅವರ ಒಂದು ಸಾಧನೆಯನ್ನ ಹೊಗಳಿದರು ಇದಲ್ಲದೆ ಕಾರ್ಯಕ್ರಮದಲ್ಲಿ ಸ್ಥಳೀಯ ನಾಟಿ ವೈದ್ಯರದಂತಹ ಮಾದಮ್ಮ ರವರನ್ನು ಗುರುತಿಸಿ ಈ ಬಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು ಪ್ರಸಂಶಿಸಿ ಅವರಿಗೆ ಕಾರ್ಯಕ್ರಮದ ಮೂಲಕ ಬೀಳ್ಕೊಡುಗೆ ಎನ್ನ ಕೊಟ್ಟರು.

ಉದ್ಘಾಟನೆ ಮಾಡಿದ ಸನ್ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರು ಮಾತನಾಡಿ ಆದಿವಾಸಿ ಮತ್ತು ಬುಡಕಟ್ಟು ಸಮುದಾಯ ಮುಖ್ಯವಾಹಣೆಗೆ ಬರಬೇಕು ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಬೇಕು ನೀವು ನಾಗರಿಕತೆ ಕಡೆ ಗಮನ ಕೊಡಬೇಕು ಹಾಗೆ ಕಾಡಿನ ಸಂರಕ್ಷಣೆ ನಿಮ್ಮೆಲ್ಲರ ಹೊಣೆ. ನೀವು ಕಾಡಿನ ಸಂಪತ್ತನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು ಅಂತ ಹೇಳಿ ಕಿವಿ ಮಾತನ್ನು ಹೇಳಿದರು ಸನ್ಮಾನ್ಯ ನರೇಂದ್ರ ಅವರು ಶಾಸಕರು ಅನುರು ಕ್ಷೇತ್ರ ಇವರು ನಾನು ಚಿಕ್ಕವಯಸ್ಸಿನಿಂದಲೂ ಕೂಡ ಸಮುದಾಯದ ಸಮುದಾಯದ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೀವಿ ಸಮುದಾಯವನ್ನು ಅಭಿವೃದ್ಧಿ ಮಾಡಲಿಕ್ಕೆ ಸಾಕಷ್ಟು ಸಹಕಾರವನ್ನು ನೀಡುತ್ತಿದ್ದೇವೆ.

ನನ್ನ ತಂದೆಯವರ ಕಾಲದಿಂದಲೂ ಕೂಡ ಗಿರಿಜನ ಸಮುದಾಯ ಮತ್ತು ಬುಡಕಟ್ಟು ಸಮುದಾಯದ ಬಗ್ಗೆ ಹೆಚ್ಚು ಮಾಡಿದಿವಿ ಎಂದು ತಮ್ಮ ಭಾಷಣದಲ್ಲಿ ಹೇಳಿದರು ಇದರ ಜೊತೆಗೆ ಸಾಕಷ್ಟು ವಿವಿಧ ಬೇಡಿಕೆಗಳನ್ನು ಕುರಿತು ಸೋಲಿಗ ಸಮುದಾಯದ ಅಭಿವೃದ್ಧಿ ಸಂಘದ ಅಧ್ಯಕ್ಷರು ಮಾದೇಗೌಡರು ಇವರು ಸನ್ಮಾನ್ಯ ಜಿಲ್ಲಾಡಳಿತಕ್ಕೆ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾಗೂ ವಿರೋಧ ಪಕ್ಷದ ನಾಯಕರುಗಳಿಗೆ ಜಿಲ್ಲಾಡಳಿತ ಮೂಲಕ ಮನಮೆಯನ್ನು ಸಲ್ಲಿಸಿದರು ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಮನೆಯನ್ನು ಸಲ್ಲಿಸಿದರು ಮತ್ತು ವನ್ಯಜೀವಿ ಹುಲಿ ಯೋಜನೆ ಘೋಷಣೆ ಮಾಡಿರುವ ಸರ್ಕಾರವನ್ನು ಕೈ ಬಿಟ್ಟು ಯದಾಸತಿ ವನ್ಯಜೀವಿಧಾಮವನ್ನು ಮುಂದಿರುವ ಬಗ್ಗೆ ಮಾದೇಶ್ವರ ಬೆಟ್ಟದಲ್ಲಿ ವನ್ಯಜೀವಿ ಧಾಮದ ಅರಣ್ಯ ಸುಮಾರು ಐವತ್ತಾರು ಪೋಡು 15000 ಸೋಲಿಗರಿದ್ದು ಅನಾದಿಕಾಲದಿಂದ ವಾಸವಾಗಿರುತ್ತಾರೆ. ಈ ಅರಣ್ಯದೊಂದಿಗೆ ಅವರನ್ನು ಯಾವ ಸಂಬಂಧ ಇಟ್ಟುಕೊಂಡು ವನ್ಯಜೀವಿಗಳನ್ನು ಸಂರಸ್ಕೊಂಡು ಕಾಡಿನ ಸಂಪತ್ತನ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ.

ಅರಣ್ಯಕ್ಕೂ ಕಾಯ್ದೆ ಬಂದಾಗ ಆದಿವಾಸಿಗಳ ಅಭಿವೃದ್ಧಿಗಳು ನಿಬಂಧಗಳಾಗಿವೆ. ಮತ್ತೆ ಆಚರಣೆಗಳು ಆಚರಣೆಗಳಿಗೆ ನಿರ್ಬಂಧ ಮಾಡಿದ್ದಾರೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ತೊಂದರೆ ಮತ್ತು ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ನೆಲೆಸಿರುವ ಇತರ ಸಮುದಾಯಗಳಿಗೂ ಸಹ ತೊಂದರೆಯಾಗುತ್ತದೆ ಹಾಗಾಗಿ ಇಲ್ಲಿ ಹುಲಿ ಯೋಜನೆ ಘೋಷಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟು ಯಥಾಸಿಟಿ ವನ್ಯಜೀವಿ ಧಾಮವನ್ನಾಗಿ ಮುಂದುವರಿಸಬೇಕೆಂದು ಸೋಲಿಗರ ಸಮುದಾಯದಿಂದ ಮನವಿ ಸಲ್ಲಿಸಿದರು ಮತ್ತು ಅರಣ್ಯ ಹಕ್ಕು ಮಾನ್ಯತೆ ಕಾಯಿದೆ 2018 ಮನವಿಯನ್ನು ಸಲ್ಲಿಸಿದರು ಅನುಸೂಚಿತ ಪ್ರದೇಶ 5 ಮತ್ತು 6 ಬಗ್ಗೆ ಸನ್ಮಾನ್ಯ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮಾದಮ್ಮ ಡಾಕ್ಟರ್ ಸಿ ಮಾದೇಗೌಡ ಕಾರ್ಯದರ್ಶಿ ಅಧ್ಯಕ್ಷರು ಮುತ್ತಯ್ಯ ದಾಸೇಗೌಡ ದೊಡ್ಡ ಸಿದ್ದೇಗೌಡ ತಮ್ಮ ಇನ್ನು ಹಲವಾರು ಸೋಲಿಗೆ ಸಮುದಾಯದ ಸದಸ್ಯರು ಭಾಗವಹಿಸಿದ್ದರು ಈ ಕಾರ್ಯಕ್ರಮವು ಅದ್ದೂರಿಯಾಗಿ ಮೆರವಣಿಗೆ ಮೂಲಕ ಕಾರ್ಯಕ್ರಮದ ಮೂಲಕ ಅವರ ಸಂಸ್ಕೃತಿಯ ಮೂಲಕ ಚಾಮರಾಜನಗರದಲ್ಲಿ ನೆರವೇರಿಸಿದರು.