ಸ್ಮಶಾನಕ್ಕಾಗಿ ರಸ್ತೆ ಮೇಲೆ ಹೆಣ ಇಟ್ಟು ಅಹೋರಾತ್ರಿ ಪ್ರತಿಭಟನೆ

ಪಾವಗಡ: ಇಮ್ರಾನ್ ಉಲ್ಲಾ

ಅನಾಥ-ಶವ ಮುಂದಿಟ್ಟುಕೊಂಡು ಸ್ಮಶಾನ ಹೆಸರಿನಲ್ಲಿ ರಾಜಕೀಯ ಮುಖಂಡರ ಕೆಸರೆರೆಚಾಟದ ಮದ್ಯ ಅನಾಥ ಶವದ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ ರೊಪ್ಪ ಗ್ರಾಮಸ್ಥರು.

WhatsApp Image 2023 01 30 at 1.23.38 PM

ಪಾವಗಡ ಪಟ್ಟಣದ ರೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ರಂಗಪ್ಪ ಎಂಬುವ ವ್ಯೆಕ್ತಿ ಮೃತಪಟ್ಟಿರುತ್ತಾರೆ. ಆದರೆ ಈ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲದ ಕಾರಣ ರಸ್ತೆ ಮೇಲೆ ಹೆಣ ಇಟ್ಟು ಸಂಜೆಯಿಂದ ಸ್ಮಶಾನಕ್ಕಾಗಿ ಜಾಗ ನೀಡಬೇಕು ಎಂಬುದಾಗಿ ಹೇಳಿ ಪ್ರತಿಭಟನೆ ಮಾಡುತ್ತಿದ್ದಾರೆ ಸಾರ್ವಜನಿಕರು.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಸ್ಮಶಾನದ ಜಾಗ ಬಗ್ಗೆ ತಿಳಿಸುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಮತ್ತು ಇಲ್ಲಿಂದ ಹೆಣನು ಸಹ ತೆಗೆಯುವುದಿಲ್ಲ ಎಂಬುದಾಗಿ ಪ್ರತಿಭಟನಕಾರರು ಹೇಳಿದ್ದಾರೆ.

ರೊಪ್ಪ ವ್ಯಾಪ್ತಿಯಲ್ಲಿ ಸುಮಾರು 3000 ಜನಸಂಖ್ಯೆ ಉಳ್ಳ ಈ ಪ್ರದೇಶದಲ್ಲಿ ಎಲ್ಲಾ ಸಮುದಾಯದ ಜನರು ಇಲ್ಲಿ ವಾಸಿಸುತ್ತಿದ್ದಾರೆ ಅದರೆ ಯಾವುದೇ ಸಮುದಾಯಕ್ಕೂ ಸಹ ಇಲ್ಲಿ ಸ್ಮಶಾನ ಇಲ್ಲದೆ ಇರುವುದು ಸೂಚನೆಯ ಸಂಗತಿ.

ಮನುಷ್ಯ ಬದುಕಿ ಸತ್ತ ಮೇಲೆ ಏನು ಸಾಧಿಸುತ್ತಾನೆ ಎಂಬುದಕ್ಕೆ ಈ ದಿನ ರಂಗಪ್ಪನವರು ಗ್ರಾಮದ ಜನರ ಅಭಿಮಾನ ಗಳಿಸಿರುವುದೇ ಎಂದು ಅರ್ಥ. ರಂಗಪ್ಪ ಎಂಬವರಿಗೆ ಯಾವುದೇ ಕುಟುಂಬ ಸದಸ್ಯರು ಇಲ್ಲದ ಕಾರಣ ಜಾತಿ ಭೇದ ಬಿಟ್ಟು ಎಲ್ಲಾ ಸಮುದಾಯದವರು ಸೇರಿ ಪ್ರತಿಭಟನೆ ಮಾಡುತ್ತಿರುವುದು ವಿಶೇಷವಾಗಿದೆ.
ಗ್ರಾಮಸ್ಥರು ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ. ಈಗ ಇದ್ದವರು ನಾಳೆ ಇರಲ್ಲ ಎಂಬುದು ಸತ್ಯದ ಮಾತು ಅದಕ್ಕಾಗಿ ನಮ್ಮ ಗ್ರಾಮಕ್ಕೆ ಬೇಗ ಸ್ಮಶಾನದ ಅವಶ್ಯಕತೆ ಕಲ್ಪಿಸಿ ಎಂಬುದು ಸಾರ್ವಜನಿಕರ ಒತ್ತಾಯ.

Leave a Reply

Your email address will not be published. Required fields are marked *